ವಿಶ್ವಕಪ್ ಕಂಟಕ; ಬ್ರೆಜಿಲ್‌ನಲ್ಲಿ 344 ಕೀ.ಮೀ. ಟ್ರಾಫಿಕ್ ಜಾಮ್!

By Nagaraja

ಒಂದೆಡೆ ವಿಶ್ವಕಪ್ ಹಬ್ಬದ ಸಂಭ್ರಮ. ಇನ್ನೊಂದೆಡೆ ಟ್ರಾಫಿಕ್ ಉಪಟಳದಿಂದಾಗಿ ಸಹಿಸಲಾರದಷ್ಟು ವೇದನೆ. ಇದು ಸದ್ಯ ಫಿಫಾ ಫುಟ್ಬಾಲ್ ವಿಶ್ವಕಪ್ ಆತಿಥ್ಯ ರಾಷ್ಟ್ರ ಬ್ರೆಜಿಲ್‌ ಎದುರಿಸುತ್ತಿರುವ ಸಮಸ್ಯೆ.

ಫುಟ್ಬಾಲ್ ವಿಶ್ವಕಪ್ ಆತಿಥ್ಯ ರಾಷ್ಟ್ರಕ್ಕೆ ಈಗಾಗಲೇ ಲಕ್ಷಾಂತರ ಅಭಿಮಾನಿಗಳು ಭೇಟಿ ಕೊಡುತ್ತಿದ್ದಾರೆ. ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಬ್ರೆಜಿಲ್ ತಂಡವು ಕ್ರೋವೇಶಿಯಾ ಸವಾಲನ್ನು ಎದುರಿಸಲಿದೆ. ಹಾಗಿರಬೇಕೆಂದರೆ ಬ್ರೆಜಿಲ್ ಫುಟ್ಬಾಲ್ ಆತಿಥ್ಯಕ್ಕೆ ಸಂಪೂರ್ಣ ಸಜ್ಜಾಗಿಲ್ಲವೆಂಬ ಆಪಾದನೆ ಕೇಳಿಬರುತ್ತಿದೆ.

World Cup

ಬಲ್ಲ ಮೂಲಗಳ ಪ್ರಕಾರ ಬ್ರೆಜಿಲ್ ಟ್ರಾಫಿಕ್ ಸಂಪೂರ್ಣ ಹದೆಗೆಟ್ಟಿದೆ. ರಾಜಧಾನಿ ಸಾವೋಪಾಲೋ ನಗರದಲ್ಲಂತೂ ಸರಿ ಸುಮಾರು 344 ಕೀ.ಮೀ. ಉದ್ದಕ್ಕೂ ವಾಹನ ದಟ್ಟಣೆ ಕಾಣಿಸಿಕೊಂಡಿದೆ. ಇದರಿಂದಾಗಿ ಅಭಿಮಾನಿಗಳು ಭಾರಿ ತೊಂದರೆ ಎದುರಿಸಬೇಕಾಗಿದೆ.

ಒಟ್ಟಿನಲ್ಲಿ ಬ್ರೆಜಿಲ್ ವಿಶ್ವಕಪ್ ಸಿದ್ಧತೆಯ ಬಗ್ಗೆ ಅಂತರಾಷ್ಟ್ರೀಯ ಫುಟ್ಬಾಲ್ ಫೆಡರೇಷನ್ (ಫಿಫಾ) ಆಗಲೀ ಅಥವಾ ಅಭಿಮಾನಿಗಳೇ ಆಗಲೀ ಯಾರೂ ಪ್ರಭಾವಿತರಾಗಿಲ್ಲ. ಸಾವೋಪಾಲೋದಲ್ಲಿ ಇನ್ನಷ್ಟು ಪಂದ್ಯಗಳು ನಡೆಯಲಿರುವುದರಿಂದ ಟ್ರಾಫಿಕ್ ಸಮಸ್ಯೆ ಅಭಿಮಾನಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಇದಕ್ಕೆ ಸಮಾನವಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂದು 309 ಕೀ.ಮೀ. ದೂರದ ಟ್ರಾಫಿಕ್ ಜಾಮ್ ಸೃಷ್ಟಿಯಾಗಿತ್ತು. ಇನ್ನೊಂದೆಡೆ ರೈಲ್ವೇ ನೌಕರರು ಸಹ ವಿಶ್ವಕಪ್ ಆರಂಭಕ್ಕೂ ಒಂದು ದಿನ ಮೊದಲಾಗಿ ಮುಷ್ಕರ ಹೂಡಿರುವುದು ಪ್ರೇಕ್ಷಕರೆಲ್ಲ ತಮ್ಮ ತಮ್ಮ ವೈಯಕ್ತಿಕ ವಾಹನಗಳನ್ನೇ ಹರಸುವಂತಾಗಿದೆ. ಇದು ಸಹ ವಿಶ್ವಕಪ್ ಹಬ್ಬದ ಈ ಸಂದರ್ಭದಲ್ಲಿ ಇನ್ನಷ್ಟು ಟ್ರಾಫಿಕ್ ಸಮಸ್ಯೆ ಸೃಷ್ಟಿಯಾಗಲು ಕಾರಣವಾಗಿದೆ.

Most Read Articles

Kannada
Story first published: Thursday, June 12, 2014, 15:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X