ಕಳೆದ ಎಂಟು ತಿಂಗಳಿಂದ ಕಾರು ಬೆಲೆ ಏರಿಕೆಯೇ ಇಲ್ಲ!

By Nagaraja

ಕಳೆದ ಕೇಂದ್ರ ಬಜೆಟ್‌ನಲ್ಲಿ ಅಬಕಾರಿ ಸುಂಕ ದರ ಏರಿಕೆಯನ್ನು ತಡೆ ಹಿಡಿದಿದ್ದ ಕೇಂದ್ರ ಸರಕಾರವು, ಈ ಮೂಲಕ ಕಾರು ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ.

ವಾಹನೋದ್ಯಮದ ಮೂಲದ ಪ್ರಕಾರ ಕಳೆದ ಎಂಟು ತಿಂಗಳಿಂದ ಕಾರು ಬೆಲೆಯಲ್ಲಿ ಏರಿಕೆ ಕಂಡುಬಂದಿಲ್ಲ. ಇದಕ್ಕೆ ಪ್ರಮುಖ ಕಾರಣ ಅಬಕಾರಿ ಸುಂಕವನ್ನು ಶೇಕಡಾ 4ರಿಂದ 6ರಷ್ಟು ಇಳಿಕೆಗೊಳಿಸಿರುವುದು.

car price

ದೇಶದ ಮುಂಚೂಣಿಯ ಹಾಗೂ ಅಗ್ರಮಾನ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಮಾರುತಿ 2013 ಡಿಸೆಂಬರ್ ತಿಂಗಳಿಂದ ತನ್ನ ಯಾವುದೇ ಮಾದರಿಗೆ ದರ ಏರಿಕೆಗೊಳಿಸಿಲ್ಲ.

ಅದೇ ರೀತಿ ದಕ್ಷಿಣ ಕೊರಿಯಾ ಮೂಲದ ವಾಹನ ತಯಾರಿಕ ಸಂಸ್ಥೆಯಾಗಿರುವ ಹ್ಯುಂಡೈ ಕೊನೆಯ ಬಾರಿಗೆ ಕಳೆದ ಫೆಬ್ರವರಿ ತಿಂಗಳಲ್ಲಿ ಬೆಲೆ ಏರಿಕೆಗೊಳಿಸಿತ್ತು. ಇದು ಅಬಕಾರಿ ಸುಂಕ ಇಳಿಕೆಗಿಂತ ಮೊದಲಾಗಿತ್ತು.

ಈ ಎಲ್ಲ ಬೆಳವಣಿಗೆಯಿಂದ ಮಾರಾಟ ವೃದ್ಧಿ ಸಾಧಿಸುವಲ್ಲಿ ಕಾರು ಮಾರುಕಟ್ಟೆ ಯಶಸ್ವಿಯಾಗಿತ್ತು. ಪುನಶ್ಚೇತನ ಕಂಡಿದ್ದ ದೇಶದ ವಾಹನ ಮಾರುಕಟ್ಟೆ ಎಪ್ರಿಲ್‌ನಿಂದ ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಒಟ್ಟು 8.8 ಲಕ್ಷ ಪ್ರಯಾಣಿಕ ವಾಹನಗಳ ಮಾರಾಟ ಸಂಖ್ಯೆಯನ್ನು ದಾಟಿದೆ. ಇದು ಕಳೆದ ಬಾರಿಗಿಂತ ಶೇಕಡಾ 4.09ರಷ್ಟು ಹೆಚ್ಚಾಗಿದೆ.

Most Read Articles

Kannada
English summary
Automobile manufacturers in India refrain from price hikes for the eighth-straight month. This is to encourage more people to buy cars and help car makers sell more units.
Story first published: Monday, October 20, 2014, 15:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X