ಹೊಸ ಸ್ಕೋಡಾ ರಾಪಿಡ್ ವೆರಿಯಂಟ್ ವಿವರಣೆ ನೋಡಿ

By Nagaraja

ಪರಿಷ್ಕೃತ ಸ್ಕೋಡಾ ರಾಪಿಡ್ ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದೆ. ಗುಣಮಟ್ಟದ ಕಾರುಗಳನ್ನು ಪ್ರಸ್ತುತಪಡಿಸುವುದರಲ್ಲಿ ಸದಾ ಹೆಸರುವಾಸಿಯಾಗಿರುವ ಜೆಕ್ ಗಣರಾಜ್ಯದ ಈ ದೈತ್ಯ ವಾಹನ ತಯಾರಕ ಸಂಸ್ಥೆಯು ಸೆಪ್ಟೆಂಬರ್ ರಂದು ಹೊಸ ರಾಪಿಡ್ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

ಹಬ್ಬದ ಆವೃತ್ತಿ ಇನ್ನೇನು ಆರಂಭವಾಗಲಿರುವಂತೆಯೇ ಹೊಸ ಸ್ಕೋಡಾ ರಾಪಿಡ್ ವೆರಿಯಂಟ್ ಬಗ್ಗೆಯೂ ಅರಿತುಕೊಳ್ಳುವುದು ಅನಿವಾರ್ಯವಾಗಿದೆ. ಇದು ಹೊಸ ಕಾರು ಖರೀದಿಸಲು ಬಯಸುವ ಗ್ರಾಹಕರಿಗೆ ಹೊಸ ಸ್ಕೋಡಾ ಬಗ್ಗೆ ನಿಕಟವಾಗಿ ಅರಿಯಲ್ಪಡಲು ಸಾಧ್ಯವಾಗಲಿದೆ. ಯಾಕೆಂದರೆ ಹೋಂಡಾ ಸಿಟಿ, ಹ್ಯುಂಡೈ ವರ್ನಾ, ಫೋಕ್ಸ್‌ವ್ಯಾಗನ್ ವೆಂಟೊ ಮತ್ತು ಇನ್ನಷ್ಟೇ ಬಿಡುಗಡೆಯಾಗಲಿರುವ ಮಾರುತಿ ಸಿಯಾಝ್ ಮಾದರಿಗಳಿಗೆ ಪ್ರತಿಸ್ಪರ್ಧೆಯಾಗಿರಲಿದೆ.

Skoda Rapid

ಹೆಚ್ಚು ಚರ್ಚಿತವಾಗಿರುವ 1.5 ಲೀಟರ್ ಡೀಸೆಲ್ ಎಂಜಿನ್ ಹೊಸ ಸ್ಕೋಡಾ ರಾಪಿಡ್ ಕಾರಿನಲ್ಲಿ ಬಳಕೆಯಾಗಲಿದೆ. ಇದರ ಜೊತೆಗೆ ತಾಜಾ ವೈಶಿಷ್ಟ್ಯಗಳು ಕಾರಿಗೆ ಹೊಸ ನೋಟವನ್ನು ನೀಡಲಿದೆ.

ಸ್ಕೋಡಾ ರಾಪಿಡ್ ಆಕ್ಟಿವ್ ಟ್ರಿಮ್ 15 ಇಂಚಿನ ಅಲಾಯ್ ವೀಲ್ ಜೊತೆಗೆ ಕಾರ್ಡ್ ಹೋಲ್ಡರ್ ಪಡೆದುಕೊಳ್ಳಲಿದೆ. ಅಲ್ಲದೆ ಪವರ್ ವಿಂಡೋ, ಕಂಫರ್ಟ್ ಫಂಕ್ಷನ್, ಹೊಂದಾಣಿಸಬಹುದಾದ ಸ್ಟೀರಿಂಗ್ ವೀಲ್, ಫ್ರಂಟ್ ಆಂಡ್ರಿಯರ್ ರೀಡಿಂಗ್ ಲ್ಯಾಂಪ್, ಫ್ರಂಟ್ ಆಂಡ್ ರಿಯರ್ ಆರ್ಮ್‌ರೆಸ್ಟ್ ಮುಂತಾದ ವೈಶಿಷ್ಟ್ಯಗಳು ಸ್ಟಾಂಡರ್ಡ್ ಆಗಿ ಲಭಿಸಲಿದೆ.

ಇನ್ನು ಆಂಬಿಯಟ್ ಪ್ಲಸ್ ವೆರಿಯಂಟ್‌ನಲ್ಲಿ ರಿಯರ್ ಪಾರ್ಕಿಂಗ್ ಸೆನ್ಸಾರ್ ಮತ್ತು ಕ್ರೂಸ್ ಕಂಟ್ರೋಲ್ ಲಭ್ಯವಿರಲಿದೆ. ಹಾಗೆಯೇ ಎಸಿ ವೆಂಟ್ಸ್‌ನಲ್ಲಿ ಕ್ರೋಮ್ ಡಿಕೊರ್, ನಾಲ್ಕು ಸ್ಪೀಕರ್ ಆಡಿಯೋ ಪ್ಲೇಯರ್, ಆಕ್ಸ್ ಇನ್, ಯುಎಸ್‌ಬಿ, ಎಸ್‌ಡಿ ಕಾರ್ಡ್ ಸಪೋರ್ಟ್, ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್, ಪವರ್ ವಿಂಡೋ ಮತ್ತು ಎಬಿಎಸ್ ಲಭ್ಯವಾಗಲಿದೆ.

ಅದೇ ರೀತಿ ಎಲೆಗನ್ಸ್ ವೆರಿಯಂಟ್‌ನಲ್ಲಿ ಹೆಚ್ಚಿನ ಬದಲಾವಣೆ ಕಂಡುಬರಲಿದೆ. ಇದು ಆಟೋಮ್ಯಾಟಿಕ್ ಕ್ಲೈಮೇಟ್, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಕಪ್ಪು ಪ್ಯಾಕೇಜ್ ಆಯ್ಕೆಯೊಂದಿಗೆ 15 ಇಂಚಿನ ಅಲಾಯ್ಸ್, ಫಾಗ್ ಲ್ಯಾಂಪ್, ಬ್ಲ್ಯಾಕ್ ಗ್ರಿಲ್ ಮತ್ತು ಲೊಗೊ, ಬ್ಲ್ಯಾಕ್ ವಿಂಗ್ ಮಿರರ್, ಬ್ಲ್ಯಾಕ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಮುಂತಾದ ಸೌಲಭ್ಯವಿರಲಿದೆ.

ಅಂದ ಹಾಗೆ ಹೊಸ ಸ್ಕೋಡಾ ರಾಪಿಡ್ ಎರಡು ಎಂಜಿನ್‌ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಪೆಟ್ರೋಲ್ ಆಂಬಿಷನ್ ಪ್ಲಸ್ ಮತ್ತು ಎಲೆಗನ್ಸ್ ವೆರಿಯಂಟ್‌ಗಳಲ್ಲಿ ಸಿಕ್ಸ್ ಸ್ಪೀಡ್ ಟ್ರಿಪ್‌ಟ್ರಾನಿಕ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಲಭ್ಯವಿರಲಿದೆ. ಅದೇ ಹೊತ್ತಿಗೆ ಸೆವೆನ್ ಸ್ಪೀಡ್ ಡಿಎಸ್‌ಜಿ ಗೇರ್ ಬಾಕ್ಸ್ ಡೀಸೆಲ್ ಆಂಬಿಷನ್, ಆಂಬಿಷನ್ ಪ್ಲಸ್ ಮತ್ತು ಎಲೆಗನ್ಸ್ ಮಾದರಿಗಳಲ್ಲಿ ಲಭ್ಯವಾಗಲಿದೆ.

Most Read Articles

Kannada
English summary
Checkout New Skoda Rapid variant details
Story first published: Tuesday, September 23, 2014, 15:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X