ಮುಂಬೈನಲ್ಲಿ ತಲೆಯೆತ್ತಿದ ದೇಶದ ಪ್ರಪ್ರಥಮ ಡಬಲ್ ಡೆಕ್ಕರ್ ಫ್ಲೈಓವರ್

By Nagaraja

ವಾಣಿಜ್ಯ ನಗರಿ ಮುಂಬೈನಲ್ಲಿ ದೇಶದ ಪ್ರಪ್ರಥಮ ಡಬಲ್ ಡೆಕ್ಕರ್ ಫ್ಲೈಓವರ್ ಲೋಕಾರ್ಪಣೆಯಾಗಿದೆ. ಸಂಟಾ ಕ್ರೂಜ್‌ನಿಂದ ಚೆಂಬೂರ್ ಸಂಪರ್ಕಿಸುವ ಈ ಲಿಂಕ್ ರಸ್ತೆ (ಎಸ್‌ಸಿಎಲ್ಆರ್) 6.45 ಕೀ.ಮೀ ಉದ್ದದ ವರೆಗೆ
ಹರಡಿದೆ.

ಸಂಟಾ ಕ್ರೂಜ್-ಚೆಂಬೂರ್ ಲಿಂಕ್ ರೋಡ್, ಎಪ್ರಿಲ್ 18 ಶುಕ್ರವಾರದಂದು ಸಾರಿಗೆ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಬರೋಬ್ಬರಿ 450 ಕೋಟಿ ರುಪಾಯಿ ವೆಚ್ಚದಲ್ಲಿ ಯೋಜನೆ ಪೂರ್ಣಗೊಳಿಸಲಾಗಿದೆ.

ಮುಂಬೈನಲ್ಲಿ ತಲೆಯೆತ್ತಿದ ದೇಶದ ಪ್ರಪ್ರಥಮ ಡಬಲ್ ಡೆಕ್ಕರ್ ಫ್ಲೈಓವರ್

ನೂತನ ಮೇಲ್ಸುತುವೆಯೊಂದಿಗೆ ವೆಸ್ಟರ್ನ್ ಎಕ್ಸ್‌ಪ್ರೆಸ್ ಹೈವೇ (WEH) ಮತ್ತು ಈಸ್ಟರ್ನ್ ಎಕ್ಸ್‌ಪ್ರೆಸ್ ಹೈವೇ (EEH) ನಡುವಣ ಸಂಪರ್ಕ ಇನ್ನಷ್ಟು ಸುಲಲಿತವಾಗಲಿದೆ.

ಮುಂಬೈನಲ್ಲಿ ತಲೆಯೆತ್ತಿದ ದೇಶದ ಪ್ರಪ್ರಥಮ ಡಬಲ್ ಡೆಕ್ಕರ್ ಫ್ಲೈಓವರ್

ಈ ಆರು ಲೇನ್‌ಗಳ ರಸ್ತೆ ಯೋಜನೆಯನ್ನು ಮುಂಬೈ ನಗರ ಸಾರಿಗೆ ಪ್ರೊಜೆಕ್ಟ್ (ಎಂಯುಟಿವಿ) ಹಾಗೂ ವಿಶ್ವ ಬ್ಯಾಂಡ್ ನಿಧಿ ಸಂಯುಕ್ತವಾಗಿ ಯೋಜನೆ ರೂಪಿಸಿದೆ.

ಮುಂಬೈನಲ್ಲಿ ತಲೆಯೆತ್ತಿದ ದೇಶದ ಪ್ರಪ್ರಥಮ ಡಬಲ್ ಡೆಕ್ಕರ್ ಫ್ಲೈಓವರ್

ಸಂಟಾ ಕ್ರೂಜ್-ಚೆಂಬೂರ್ ಲಿಂಕ್ ರೋಡ್ 1.8 ಕೀ.ಮೀ. ಉದ್ದದ ಡಬಲ್ ಡೆಕ್ಕರ್ ಫ್ಲೈಓವರ್ ಹೊಂದಿದೆ. ಹಾಗಿದ್ದರೂ ಚುನಾವಣಾ ಆಯೋಗದ ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂತ ಉದ್ಘಾಟನಾ ಸಮಾರಂಭವನ್ನು ಬಹಳ ಸರಳವಾಗಿ ಹಮ್ಮಿಕೊಳ್ಳಲಾಗಿತ್ತು.

ಮುಂಬೈನಲ್ಲಿ ತಲೆಯೆತ್ತಿದ ದೇಶದ ಪ್ರಪ್ರಥಮ ಡಬಲ್ ಡೆಕ್ಕರ್ ಫ್ಲೈಓವರ್

ಪ್ರಸ್ತುತ ಈ ಲಿಂಕ್‌ ರೋಡ್‌ನಲ್ಲಿ ಹೆಚ್ಚಿನ ವಾಹನ ದಟ್ಟಣೆ ಕಂಡುಬಂದಿಲ್ಲ. ಕೆಲವರ ಪ್ರಕಾರ ಉದ್ಘಾಟನಾ ದಿನವಷ್ಟೇ, ಸಾರ್ವಜನಿಕರಿಗೆ ತೆರೆದುಕೊಂಡಿರುವ ವಿಚಾರ ಮನಗಂಡಿದ್ದಾರೆ. ಪ್ರಸ್ತುತ ದಿನವೊಂದರಲ್ಲಿ ಎರಡು ಲಕ್ಷಗಳಷ್ಟು ವಾಹನಗಳು ಸಂಚರಿಸುವ ನಿರೀಕ್ಷೆ ಹೊಂದಲಾಗಿದೆ.

ಮುಂಬೈನಲ್ಲಿ ತಲೆಯೆತ್ತಿದ ದೇಶದ ಪ್ರಪ್ರಥಮ ಡಬಲ್ ಡೆಕ್ಕರ್ ಫ್ಲೈಓವರ್

ಅಂದ ಹಾಗೆ ಸಂಟಾ ಕ್ರೂಜ್-ಚೆಂಬೂರ್ ಲಿಂಕ್ ರೋಡ್ ಯೋಜನೆಯನ್ನು 2006ರಲ್ಲಿ ಪ್ರಾರಂಭಿಸಲಾಗಿತ್ತು. ಇದೀಗ 12 ಡೆಡ್‌ಲೈನ್‌ಗಳ ಬಳಿಕ ಕೊನೆಗೂ ಮಾರ್ಚ್ 31ರಂದು ಕಾಮಗಾರಿ ಪೂರ್ಣಗೊಂಡಿದೆ. ಭೂಮಿ ಕೈವಶ ಮಾಡುವುದು ಹಾಗೂ ರೈಲ್ವೇ ವಿಭಾಗದಿಂದ ಅನುಮತಿ ಲಭಿಸಲು ವಿಳಂಬವಾಗಿರುವುದರಿಂದ ಕಾಮಗಾರಿ ತಡವಾಗಿತ್ತು.

Most Read Articles

Kannada
English summary
Mumbai dwellers can finally travel faster from Chembur to Santa Cruz thanks to the link road between them, which was opened to commuters on Friday.
Story first published: Saturday, April 19, 2014, 10:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X