ಬ್ರಿಟನ್ ಮಾರುಕಟ್ಟೆಗೆ 2015 ಡೇಸಿಯಾ ಡಸ್ಟರ್ ಅನಾವರಣ

By Nagaraja

2015 ಡಸ್ಟರ್ ಫೇಸ್‌ಲಿಫ್ಟ್ ಮಾದರಿಯನ್ನು ಬ್ರಿಟನ್ ಮಾರುಕಟ್ಟೆಗಾಗಿ ಅನಾವರಣಗೊಳಿಸಲಾಗಿದೆ. ಆದರೆ ಬ್ರಿಟನ್‌ನ ಈ ಅಗ್ಗದ ಎಸ್‌ಯುವಿ ದರಗಳಲ್ಲಿ ಯಾವುದೇ ಏರಿಕೆ ಕಂಡುಬರದಿರುವುದು ಅಚ್ಚರಿಗೆ ಕಾರಣವಾಗಿದೆ.

ಹಿಂದಿನ ಮಾದರಿಗಿಂತಲೂ 2015 ಡೇಸಿಯಾ ಡಸ್ಟರ್ ಅನೇಕ ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ. ಇದು ಹೊಸತಾದ ಗ್ರಿಲ್, ಹೆಡ್‌ಲ್ಯಾಂಪ್, ರೂಫ್ ರೈಲ್ ಮತ್ತು ಐದು ಹೊಸ ಮೆಟ್ಯಾಲಿಕ್ ದೇಹ ಬಣ್ಣಗಳನ್ನು ಪಡೆಯಲಿದೆ.

2015 Dacia Duster

ಡಸ್ಟರ್ ಬೇಸ್ ವೆರಿಯಂಟ್ ರಿಮೋಟ್ ಲಾಕಿಂಗ್, ಎಂಜಿನ್ ಇಮ್‌ಮೊಬಿಲೈಜರ್, ಫ್ರಂಟ್ ಪವರ್ ವಿಂಡೋ, ಎಬಿಎಸ್ ಜೊತೆ ಎಮರ್ಜನ್ಸಿ ಬ್ರೇಕ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ, ಟ್ರಾಕ್ಷನ್ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ, ನಾಲ್ಕು ಏರ್ ಬ್ಯಾಗ್, ಇಕೊ ಡ್ರೈವಿಂಗ್ ಮೋಡ್, ಗೇರ್ ಶಿಫ್ಟ್ ಇಂಡಿಕೇಟರ್ ಮತ್ತು ನಾಲ್ಕು ಸ್ಪೀಡ್ ಎಚ್‌ವಿಎಸಿ (ಹೀಟಿಂಗ್, ವೆಂಟಿಲೇಷನ್, ಏರ್ ಸಿಸಿ) ವ್ಯವಸ್ಥೆಗಳನ್ನು ಪಡೆದುಕೊಂಡಿದೆ.

ಅದೇ ರೀತಿ ಮಿಡ್ ಲೆವೆಲ್ ಡಸ್ಟರ್ ಆಂಬಿಯನ್ಸ್ ವೆರಿಯಂಟ್ ಸಟೈನ್ ಕ್ರೋಮ್ ಡೋರ್ ಹ್ಯಾಂಡಲ್, ಕ್ರೋಮ್ ಗೇರ್ ಲಿವರ್, ಕ್ರೋಮ್ ಇನ್ಸ್ಟ್ರುಮೆಂಟ್ ಕನ್ಸೋಲ್ ಸರೌಂಡ್, ರೆಡಿಯೋ/ಸಿಡಿ ಪ್ಲೇಯರ್ ಜತೆ ಆಕ್ಸ್, ಯುಎಸ‌ಬಿ ಸೊಕೆಟ್, ಬ್ಲೂಟೂತ್ ಕನೆಕ್ಟಿವಿಟಿ, ಫ್ರಂಟ್ ಫಾಗ್ ಲ್ಯಾಂಪ್ ಮತ್ತು ಎತ್ತರ ಹೊಂದಾಣಿಸಬಹುದಾದ ಡ್ರೈವರ್ ಸೀಟು ಪಡೆಯಲಿದೆ.

ಇನ್ನು ಹೈ ಎಂಡ್ ಡೇಸಿಯಾ ಡಸ್ಟರ್ ವೆರಿಯಂಟ್ ಪಿಯಾನೊ ಬ್ಲ್ಯಾಕ್ ಇಂಟಿರಿಯರ್ ಡೋರ್ ಹ್ಯಾಂಡಲ್, ಡೋರ್, ಸ್ಟೀರಿಂಗ್ ವೀಲ್ ಇಸರ್ಟ್, ಸೆಂಟ್ರಲ್ ಕನ್ಸೋಲ್ ಟ್ರಿಮ್, ಲೆಥರ್ ಹೋದಿಕೆಯ ಸ್ಟೀರಿಂಗ್ ವೀಲ್, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದದ ಹೊರಗಿನ ಮಿರರ್, ರಿಯರ್ ಪವರ್ ವಿಂಡೋ, ಗ್ಲೋವ್ ಬಾಕ್ಸ್ ಲೈಟ್, ಮ್ಯಾಪ್ ಪಾಕೆಟ್, ಕ್ರೂಸ್ ಕಂಟ್ರೋಲ್‌ಗಳಂತಹ ಸೌಲಭ್ಯಗಳನ್ನು ಪಡೆಯಲಿದೆ.

ಅಂದ ಹಾಗೆ 2015 ಡೇಸಿಯಾ ಡಸ್ಟರ್ 1.6 ಲೀಟರ್ 16 ವಾಲ್ವ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು 105 ಪಿಎಸ್ ಪವರ್ ಉತ್ಪಾದಿಸಲಿದೆ. ಅದೇ ಹೊತ್ತಿಗೆ ಹೈಯರ್ ವೆರಿಯಂಟ್ 1.5 ಲೀಟರ್ ಡಿಸಿಐ 110 ಟರ್ಬೊ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಈ ಪೈಕಿ ಟುಲ್ ವೀಲ್ ಡ್ರೈವ್ 107 ಹಾಗೂ ಫೋರ್ ವೀಲ್ ಡ್ರೈವ್ 109 ಅಶ್ವಶಕ್ತಿ ಉತ್ಪಾದಿಸಲಿದೆ.

Most Read Articles

Kannada
English summary
Dacia has unveiled 2015 Duster facelift for UK market
Story first published: Saturday, September 20, 2014, 15:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X