ಚೆನ್ನೈನಲ್ಲಿ ಡೈಮ್ಲರ್ ನೂತನ ಬಸ್ ಘಟಕಕ್ಕೆ ಶಿಲಾಸ್ಥಾಪನೆ

By Nagaraja

ಚೆನ್ನೈನ ಓರಗಡಂ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಲಿರುವ ಡೈಮ್ಲರ್ ಇಂಡಿಯಾ ಕಾಮರ್ಷಿಯಲ್ ವೆಹಿಕಲ್ ಪ್ರೈವೇಟ್ ಇಂಡಿಯಾ ಲಿಮಿಟೆಡ್ (ಡಿಐಸಿವಿ) ಬಸ್ ಘಟಕ ಸಂಬಂಧ ಶಿಲಾಸ್ಥಾಪನೆ ನೆರವೇರಿಸಲಾಗಿದೆ.

ಡೈಮ್ಲರ್ ನೂತನ ಬಸ್ ಘಟಕವು 27.91 ಎಕ್ರೆ ಪ್ರದೇಶದಲ್ಲಿ ಹರಡಿಕೊಂಡಿರಲಿದೆ. ಇಲ್ಲಿ ಮರ್ಸಿಡಿಸ್ ಬೆಂಝ್ ಹಾಗೂ ಭಾರತ್ ಬೆಂಝ್ ಬ್ರಾಂಡ್ ಬಸ್ಸುಗಳು ನಿರ್ಮಾಣವಾಗಲಿದೆ.

Daimler India

ವರದಿಗಳ ಪ್ರಕಾರ ನೂತನ ಘಟಕದ ಸಂಪೂರ್ಣ ಕಾಮಗಾರಿಯು 2015ರೊಳಗೆ ಪೂರ್ಣಗೊಳ್ಳಲಿದೆ. ಈ ಮೂಲಕ ಟ್ರಕ್, ಬಸ್ ಹಾಗೂ ಎಂಜಿನ್ ಎಲ್ಲವೂ ಒಂದೇ ಘಟಕದಲ್ಲಿ ನಿರ್ಮಿಸುತ್ತಿರುವ ಹೆಗ್ಗಳಿಕೆಗೆ ಡೈಮ್ಲರ್ ಪಾತ್ರವಾಗಲಿದೆ.

ಭಾರತದಲ್ಲಿ ಬಸ್ ನಿರ್ಮಾಣಕ್ಕಾಗಿ 425 ಕೋಟಿ ರು.ಗಳನ್ನು ಡೈಮ್ಲರ್ ಹೂಡಿಕೆ ಮಾಡಿಕೊಂಡಿದೆ. ಇದು ಆರಂಭದಲ್ಲಿ 1,500 ಯುನಿಟ್ ಬಳಿಕ 4,000 ಯುನಿಟ್‌ಗಳಷ್ಟು ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

Most Read Articles

Kannada
English summary
Daimler India Commercial Vehicles Pvt. Ltd. (DICV) today celebrated the foundation stone laying ceremony of its new Bus plant at the its manufacturing facility located in Oragadam, near Chennai.
Story first published: Friday, March 7, 2014, 10:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X