ಭಯ ಬೇಡ, ದಟ್ಸನ್ ಗೊ ಸುರಕ್ಷಿತ: ನಿಸ್ಸಾನ್

By Nagaraja

ಇತ್ತೀಚೆಗಷ್ಟೇ ಗ್ಲೋಬಲ್ ಎನ್‌ಸಿಎಪಿ ನಡೆಸಿರುವ ಅಪಘಾತ ಪರೀಕ್ಷೆಯಲ್ಲಿ (crash test) ಶೂನ್ಯ ಅಂಕ ಸಂಪಾದಿಸಿರುವ ದಟ್ಸನ್ ಗೊ ಹ್ಯಾಚ್‌ಬ್ಯಾಕ್ ಮಾರಾಟ ಪ್ರಕ್ರಿಯೆಯನ್ನು ಆದಷ್ಟು ಬೇಗನೇ ಕೊನೆಗೊಳಿಸಬೇಕು ಎಂದು ನಿಸ್ಸಾನ್ ಸಂಸ್ಥೆಗೆ ವಿನಂತಿಕೊಳ್ಳಲಾಗಿತ್ತು.

ಈ ವಿಚಾರದ ನಿಸ್ಸಾನ್ ಇಂಡಿಯಾ ಬಗ್ಗೆ ಪ್ರತಿಕ್ರಿಯಿಸಿರಲಿಲ್ಲ. ಆದರೆ ಇದೀಗ ಮಾತನಾಡಿರುವ ನಿಸ್ಸಾನ್ ಇಂಡಿಯಾ ಅಧ್ಯಕ್ಷರಾಗಿರುವ ಗುಯಿಲ್ಲೌಮೆ ಸಿಕಾರ್ಡ್, ದಟ್ಸನ್ ಗೊ ಸುರಕ್ಷಿತವಾಗಿದೆ ಎಂಬ ಹೇಳಿಕೆ ಕೊಟ್ಟಿದ್ದಾರೆ.

datsun go

ಮಾತು ಮುಂದುವರಿಸಿರುವ ಅವರು ದಟ್ಸನ್ ಗೊ ಬಜೆಟ್ ಕಾರು ಕ್ಲಾಸ್ ಬ್ರೇಕಿಂಗ್ ವ್ಯವಸ್ಥೆ, ರೋಡ್ ಹೋಲ್ಡಿಂಗ್, ಸುಧಾರಿತ ಸಸ್ಪೆಷನ್, ಅತ್ಯುತ್ತಮ ಹೆಡ್‌ಲ್ಯಾಂಪ್ ಜೊತೆಗೆ ಸೀಟುಗಳನ್ನು ಹೊಂದಿರುವುದಾಗಿ ತಿಳಿಸಿದ್ದಾರೆ.

ಕನಿಷ್ಠ ಏರ್ ಬ್ಯಾಗ್ ವ್ಯವಸ್ಥೆಯನ್ನು ಹೊಂದಿರದ ದಟ್ಸನ್ ಗೊ ಕ್ರಾಶ್ ಟೆಸ್ಟ್‌ನಲ್ಲಿ ಶೂನ್ಯ ಅಂಕ ಸಂಪಾದಿಸಿತ್ತು. ಇದಕ್ಕೂ ಮೊದಲು 2014 ವರ್ಷಾರಂಭದಲ್ಲಿ ಬಿಡುಗಡೆಗೊಳಿಸಲಾಗಿತ್ತು.

ಅಲ್ಲದೆ ಸದ್ಯದಲ್ಲೇ ಭಾರತೀಯ ಮಾರುಕಟ್ಟೆಗೆ ದಟ್ಸನ್ ಗೊ ಪ್ಲಸ್ ಎಂಪಿವಿ ಕಾರನ್ನು ಬಿಡುಗಡೆ ಮಾಡುವ ಯೋಜನೆಯನ್ನು ಸಂಸ್ಥೆ ಹೊಂದಿರುತ್ತದೆ. ಈ ಎಲ್ಲದರ ನಡುವೆ ಯುರೋ ಎನ್‌ಸಿಎಪಿ ಕ್ರಾಶ್ ಟೆಸ್ಟ್ ವರದಿಯು ಸಂಸ್ಥೆಗೆ ದೊಡ್ಡ ಹೊಡೆತ ನೀಡುವಂತಾಗಿತ್ತು.

ವಿಶೇಷವೆಂದರೆ ನಿಕಟ ಭವಿಷ್ಯದಲ್ಲೇ ಬಿಡುಗಡೆಯಾಗಲಿರುವ ದಟ್ಸನ್ ಗೊ ಎಂಪಿವಿ ಕಾರಿಗೂ ಏರ್ ಬ್ಯಾಗ್ ವ್ಯವಸ್ಥೆಯಿರುವುದಿಲ್ಲ. ಇದು ವಾಹನ ಪ್ರಿಯರಲ್ಲಿ ಇನ್ನಷ್ಟು ಆಂತಕ ಸೃಷ್ಟಿ ಮಾಡುವಲ್ಲಿ ಕಾರಣವಾಗಿದೆ.

ಏತನ್ಮಧ್ಯೆ ಭಾರತದಲ್ಲೂ ಕ್ರಾಶ್ ಟೆಸ್ಟ್ ಕಡ್ಡಾಯಗೊಳಿಸುವ ಕಾಲ ಸನ್ನಿಹಿತವಾಗಿದೆ. ಈ ಬಗ್ಗೆ ಕೇಂದ್ರ ಸರಕಾರ ಗಾಢ ಚಿಂತನೆಯಲ್ಲಿದೆ. ಇದು ದೇಶದ ರಸ್ತೆ ಪರಿಸ್ಥಿತಿ ಇನ್ನಷ್ಟು ಸುರಕ್ಷಿತಗೊಳಿಸಲು ಸಹಕಾರಿಯಾಗಲಿದೆ.

ಸದ್ಯ ಭಾರತ ಮಾರುಕಟ್ಟೆಯಲ್ಲಿ ಲಭ್ಯವಿರುವ ದಟ್ಸನ್ ಗೊ ಸಣ್ಣ ಕಾರು ಪೆಟ್ರೋಲ್ 3 ಸಿಲಿಂಡರ್ 1.2 ಲೀಟರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು 67 ಅಶ್ವಶಕ್ತಿ ಉತ್ಪಾದಿಸಲು (104 ಎನ್‌ಎಂ ಟಾರ್ಕ್) ಸಮರ್ಥವಾಗಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಸಹ ಇದರಲ್ಲಿರಲಿದೆ.

ಇನ್ನು ದರದ ಬಗ್ಗೆ ಮಾತನಾಡುವುದಾದ್ದಲ್ಲಿ ದಟ್ಸನ್ ಗೊ ದೆಹಲಿ ಎಕ್ಸ್ ಶೋ ರೂಂ ಬೆಲೆ 3.12 ಲಕ್ಷ ರು.ಗಳಿಂದ 3.79 ಲಕ್ಷ ರು.ಗಳ ವರೆಗಿದೆ.

ದಟ್ಸನ್ ಗೊ ಕ್ರಾಶ್ ಟೆಸ್ಟ್ ವೀಡಿಯೋ ವೀಕ್ಷಿಸಿ

<iframe width="600" height="450" src="//www.youtube.com/embed/sRzh8uLA1tM?rel=0&showinfo=0&autoplay=0" frameborder="0" allowfullscreen></iframe>

Most Read Articles

Kannada
English summary
Guillaume Sicard, President of Nissan India Operations expressed that the Datsun Go offered in India is safe enough. He explains that the hatchback has best in class braking, road holding, advanced suspension, improved range of headlamps, along with seats that do not tire the driver.&#13;
Story first published: Wednesday, November 26, 2014, 16:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X