ಜ. 15ರಂದು ಬಹುನಿರೀಕ್ಷಿತ ದಟ್ಸನ್ ಗೊ ಪ್ಲಸ್ ಬಿಡುಗಡೆ

By Nagaraja

ಒಂದೆಡೆ ಆತಂಕ ಇನ್ನೊಂದೆಡೆ ಅಚ್ಚರಿ ಕಾಯುವಿಕೆ ನಡುವೆ ಎಲ್ಲ ಹೊಸತನದಿಂದ ಕೂಡಿರುವ ದಟ್ಸನ್ ಗೊ ಪ್ಲಸ್ ಬಹು ಬಳಕೆಯ ವಾಹನ ಹೊಸ ವರ್ಷದಲ್ಲಿ ಬಿಡುಗಡೆಯಾಗುವುದು ಖಚಿತವಾಗಿದೆ.

ಹೌದು, ಹಲವು ಊಹಾಪೋಹಗಳ ನಡುವೆ ದಟ್ಸನ್ ಗೊ ಪ್ಲಸ್ ಎಂಪಿವಿ ಕಾರು 2015 ಜನವರಿ 15ರಂದು ಬಿಡುಗಡೆಯಾಗಲಿದೆ. ಇದು ಪ್ರಮುಖವಾಗಿಯೂ ಯುವ ಹಾಗೂ ಫ್ಯಾಮಿಲಿ ಗ್ರಾಹಕರನ್ನು ಗುರಿಯಾಗಿರಿಸಿಕೊಳ್ಳಲಿದೆ.

Datsun Go Plus

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಜಪಾನ್‌ನ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆ ನಿಸ್ಸಾನ್‌ ಬಜೆಟ್ ಕಾರು ಬ್ರಾಂಡ್ ದಟ್ಸನ್ ಆಗಿರುತ್ತದೆ. 2014 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಕಂಡಿರುವ ದಟ್ಸನ್ ಕಳೆದ ಮಾರ್ಚ್ ತಿಂಗಳಲ್ಲಿ ಗೊ ಹ್ಯಾಚ್ ಬ್ಯಾಕ್ ಕಾರನ್ನು ಬಿಡುಗಡೆಗೊಳಿಸಿತ್ತು.
Datsun Go Plus

ಆದರೆ ಯುರೋ ಎನ್‌ಸಿಎಪಿ ಪರೀಕ್ಷೆಯಲ್ಲಿ ದಟ್ಸನ್‌ಗೆ ಎದುರಾದ ಹಿನ್ನಡೆಯು ಆತಂಕ ಸೃಷ್ಟಿ ಮಾಡುವಲ್ಲಿ ಕಾರಣವಾಗಿತ್ತು. ಇದೀಗ ಸಂಸ್ಥೆಯು ನಾಲ್ಕು ಮೀಟರ್ ಉದ್ದ ಪರಿಧಿಯಲ್ಲಿ ಗೊ ಪ್ಲಸ್ ಎಂಪಿವಿ ಕಾರನ್ನು ಬಿಡುಗಡೆ ಮಾಡುವ ಮಾರುಕಟ್ಟೆಯಲ್ಲಿ ಮೋಡಿ ಮಾಡಲು ಹೊರಟತಂತಿದೆ.

ದಟ್ಸನ್ ಗೊ ಪ್ಲಸ್ ಏಳು ಸೀಟಿನ ಕಾರು 1198ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಆದರೆ ಆಟೋಮ್ಯಾಟಿಕ್ ವೆರಿಯಂಟ್ ಲಭ್ಯವಿರುವುದಿಲ್ಲ.

Most Read Articles

Kannada
English summary
Japanese automobile giant Nissan has been offering in India its budget hatchback the Go. It is their most affordable offering and they sell it under separate brand name Datsun. The vehicle is targeted at first time buyers and young buyers.
Story first published: Monday, December 29, 2014, 17:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X