ದಟ್ಸನ್ ಗೊ ಪ್ಲಸ್ ಎಂಪಿವಿ ಹೊಸ ವರ್ಷದಲ್ಲಿ ಬಿಡುಗಡೆ

By Nagaraja

ನಾಲ್ಕು ಮೀಟರ್ ಉದ್ದ ಪರಿಧಿಯೊಳಗೆ ನಿರ್ಮಾಣವಾಗಿರುವ ದೇಶದ ಏಕ ಮಾತ್ರ ಎಂಪಿವಿ ದಟ್ಸನ್ ಗೊ ಪ್ಲಸ್ ಹೊಸ ವರ್ಷದಲ್ಲಿ ಬಿಡುಗಡೆಯಾಗಲಿದ್ದು, ಭಾರಿ ನಿರೀಕ್ಷೆಗಳಿಗೆ ಕಾರಣವಾಗಿದೆ. ಇದು ನಿಸ್ಸಾನ್ ಬಜೆಟ್ ಬ್ರಾಂಡ್ ಆಗಿರುವ ದಟ್ಸನ್‌ನಿಂದ ಬಿಡುಗಡೆಯಾಗುತ್ತಿರುವ ಎರಡನೇ ಮಾದರಿಯೆನಿಸಲಿದೆ.

ಮೊದಲ ಚಾಲನಾ ಪರೀಕ್ಷೆ ಓದಿ: ಫೋರ್ ಮೀಟರ್ ಸೆವನ್ ಸೀಟರ್ ದಟ್ಸನ್ ಗೊ ಪ್ಲಸ್

ಇದಕ್ಕೂ ಮೊದಲು ವರ್ಷಾರಂಭದಲ್ಲಿ ದಟ್ಸನ್ ಗೊ ಹ್ಯಾಚ್‌ಬ್ಯಾಕ್ ಕಾರನ್ನು ಬಿಡುಗಡೆಗೊಳಿಸಿತ್ತು. ಆದರೆ ಮಾರುಕಟ್ಟೆಯಲ್ಲಿ ಅಷ್ಟೇನೂ ಸದ್ದು ಮಾಡಿರಲಿಲ್ಲ. ಇದೀಗ ಇದೇ ತಳಹದಿಯಲ್ಲಿ ನಿರ್ಮಾಣವಾಗಿರುವ ದಟ್ಸನ್ ಗೊ ಪ್ಲಸ್ ಬೆಲೆ ವಿಚಾರದಲ್ಲಿ ಮೋಡಿ ಮಾಡುವ ನಿರೀಕ್ಷೆಯಿದೆ.

Datsun Go Plus

2015 ಜನವರಿ 15ರಂದು ಹೊಚ್ಚ ಹೊಸ ದಟ್ಸನ್ ಗೊ ಪ್ಲಸ್ ಮಾರುಕಟ್ಟೆ ಪ್ರವೇಶಿಸಲಿದೆ. ಈ ಸಂಬಂಧ ಎಕ್ಸ್‌ಕ್ಲೂಸಿವ್ ವಿಮರ್ಶೆಯನ್ನು ನಾವು ಈಗಗಾಲೇ ನಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುತ್ತೇವೆ. ದೇಶದ ಮಾರುಕಟ್ಟೆಯಲ್ಲಿ ಇತರ ಎಂಪಿವಿಗಳಿಗೆ ಹೋಲಿಸಿದರೆ ದಟ್ಸನ್ ಗೊ ಪ್ಲಸ್ ಅಗ್ಗದ ಬಹು ಬಳಕೆಯ ವಾಹನ ಎನಿಸಿಕೊಳ್ಳಲಿದೆ.

ಆದರೆ ಯುರೋ ಎನ್‌ಸಿಎಪಿ ಕ್ರಾಶ್ ಟೆಸ್ಟ್‌ನಲ್ಲಿ ದಟ್ಸನ್ ಗೊ ಹ್ಯಾಚ್‌ಬ್ಯಾಕ್ ಕಾರು ಶೂನ್ಯ ಅಂಕ ಸಂಪಾದಿಸಿರುವುದು ಹೆಚ್ಚಿನ ಆತಂಕಗಳಿಗೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಗೊ ಪ್ಲಸ್ ಎಂಪಿವಿ ಹೇಗೆ ವಾಹನ ಪ್ರೇಮಿಗಳ ಮನ ಗೆಲ್ಲಲಿದೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಲಭಿಸಲಿದೆ.

Most Read Articles

Kannada
English summary
Datsun will launch the Go+ MPV on 15th January 2015. The Datsun Go+ will be the India's first sub-4 metre MPV. Stay tuned for latest updates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X