ಸದ್ಯದಲ್ಲೇ ನಿರೀಕ್ಷಿಸಿ ದಟ್ಸನ್ ಗೊ ಪ್ಲಸ್ ಟೆಸ್ಟ್ ಡ್ರೈವ್ ರಿವ್ಯೂ

By Nagaraja

ವಾಹನ ಪ್ರೇಮಿಗಳೆಲ್ಲರೂ ಕಾತರದಿಂದ ಕಾಯುತ್ತಿರುವ ದಟ್ಸನ್ ಗೊ ಪ್ಲಸ್ ಬಹು ಬಳಕೆಯ ವಾಹನದ (ಎಂಪಿವಿ) ಟೆಸ್ಟ್ ಡ್ರೈವ್ ವಿಮರ್ಶೆ ಸದ್ಯದಲ್ಲೇ ನಿಮ್ಮ ನೆಚ್ಚಿನ ಡ್ರೈವ್‌ಸ್ಪಾರ್ಕ್‌ನಲ್ಲಿ ಪ್ರಕಟಗೊಳ್ಳಲಿದೆ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ ಸದಾ ಡ್ರೈವ್ ಸ್ಪಾರ್ಕ್ ಓದುತ್ತಿರಿ.

ಮೋಡಿ ಮಾಡಿತೇ ದಟ್ಸನ್ ಗೊ ಪ್ಲಸ್?
ದೇಶದ ನಂ.1 ವಾಹನ ಸಂಸ್ಥೆ ಮಾರುತಿ ಸುಜುಕಿಯ ಎರ್ಟಿಗಾ, ಇತ್ತೀಚೆಗಷ್ಟೇ ಬಿಡುಗಡೆಗೊಂಡಿರುವ ಹೋಂಡಾ ಮೊಬಿಲಿಯೊ ಹಾಗೂ ಷೆವರ್ಲೆ ಎಂಜಾಯ್‌ಗಳಂತಹ ಘಟಾನುಘಟಿಗಳೊಂದಿಗೆ ಪೈಪೋಟಿ ಒಡ್ಡಲಿರುವ ಏಳು ಸೀಟುಗಳ ದಟ್ಸನ್ ಗೊ ಪ್ಲಸ್ ಎಂಪಿವಿ ದೇಶದ ರಸ್ತೆಯಲ್ಲಿ ಮೋಡಿ ಮಾಡುವುದು ಎಂಬುದು ಕುತೂಹಲಕಾರಿ ಅಂಶವಾಗಿದೆ.

datsun go plus

ಸುರಕ್ಷತೆ ಆಂತಕ?
ಯುರೋ ಎನ್‌ಸಿಎಪಿ ನಡೆಸಿರುವ ಕ್ರಾಶ್ ಟೆಸ್ಟ್‌ನಲ್ಲಿ ದಟ್ಸನ್ ಗೊ ಹ್ಯಾಚ್‌ಬ್ಯಾಕ್ ಕಾರಿಗೆ ಶೂನ್ಯ ಅಂಕ ನೀಡಿರುವುದು ಮುಂದುವರಿದ ಬೆಳವಣಿಗೆಯಲ್ಲಿ ದಟ್ಸನ್ ಮಾತೃಸಂಸ್ಥೆ ನಿಸ್ಸಾನ್‌ ಬರೆದ ಪತ್ರದಲ್ಲಿ ಸುರಕ್ಷತಾ ಭೀತಿಯ ಹಿನ್ನೆಲೆಯಲ್ಲಿ ಭಾರತೀಯ ಮಾರುಕಟ್ಟೆಯಿಂದ ದಟ್ಸನ್ ಗೊ ಕಾರನ್ನು ಹಿಂಪಡೆಯುವಂತೆ ಸೂಚಿಸಿರುವುದು ಭಾರಿ ಹಿನ್ನೆಡೆಗೆ ಒಳಗಾಗುವಂತಾಗಿತ್ತು.
datsun go plus

ಇದೀಗ ದಟ್ಸನ್ ಗೊ ಅದೇ ತಳಹದಿಯಲ್ಲಿ ನಿರ್ಮಾಣವಾಗುತ್ತಿರುವ ದಟ್ಸನ್ ಗೊ ಪ್ಲಸ್ ಎಷ್ಟರ ಮಟ್ಟಿಗೆ ಸುರಕ್ಷಾ ಮಾನದಂಡಗಳನ್ನು ಅನುಸರಿಸಲು ಸಾಧ್ಯವಾಗಲಿದೆ ಎಂಬುದು ಕುತೂಹಲವೆನಿಸಿದೆ. ಚಾಲಕ ಹಾಗೂ ಪ್ರಯಾಣಿಕ ಬದಿಯ ಏರ್ ಬ್ಯಾಗ್‌ ಹಾಗೂ ಎಬಿಎಸ್‌ಗಳಂತಹ ವೈಶಿಷ್ಟ್ಯಗಳನ್ನು ಸ್ಟಾಂಡರ್ಡ್ ಆಗಿ ನೀಡುವಲ್ಲಿ ದಟ್ಸನ್ ಗೊ ಪ್ಲಸ್ ಯಶಸ್ವಿಯಾಗಲಿದೆಯೇ ಎಂಬುದು ನಿರ್ಣಾಯಕವೆನಿಸಿದೆ.
datsun go plus

ಸ್ಮರ್ಧಾತ್ಮಕ ದರ
ಕೇವಲ ಸುರಕ್ಷತೆ ಮಾತ್ರವಲ್ಲ. ಗುಣಮಟ್ಟ, ನಿರ್ವಹಣೆಯ ಜೊತೆ ಜೊತೆಗೆ ಸ್ಪರ್ದಾತ್ಮಕ ಬೆಲೆ ಕಾಪಾಡಿಕೊಳ್ಳುವುದು ಮಹತ್ವವೆನಿಸಿದೆ. ದಟ್ಸನ್ ಗೊ ಪ್ಲಸ್ ಬಹು ಬಳಕೆಯ ಕಾರು 5 ಲಕ್ಷ ರು.ಗಳಿಂದ 6.5 ಲಕ್ಷ ರು.ಗಳಷ್ಟು ದುಬಾರಿಯಾಗುವ ಸಾಧ್ಯತೆಯಿದೆ. ಈ ಹಿಂದೆ 2014 ದೆಹಲಿ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಂಡಿದ್ದ ದಟ್ಸನ್ ಗೊ ಪ್ಲಸ್ ಈಗಗಾಲೇ ಇಂಡೋನೇಷ್ಯಾ ಮಾರುಕಟ್ಟೆಯನ್ನು ತಲುಪಿದೆ.
datsun go plus

2015 ವರ್ಷಾರಂಭದಲ್ಲೇ ಬಿಡುಗಡೆಯಾಗುವ ಸಾಧ್ಯತೆಯಿರುವ ದಟ್ಸನ್ ಗೊ ಪ್ಲಸ್ ಎಂಪಿವಿ ಚೆನ್ನೈನಲ್ಲಿರುವ ರೆನೊ-ನಿಸ್ಸಾನ್ ಓರಗಂಡ ಘಟಕದಲ್ಲಿ ನಿರ್ಮಾಣವಾಗಲಿದೆ. ಇದರಲ್ಲಿ ಗೊ ಹ್ಯಾಚ್‌ಬ್ಯಾಕ್‌ನಲ್ಲಿರುವುದಕ್ಕೆ ಸಮಾನವಾದ 1.2 ಲೀಟರ್ ಪೆಟ್ರೋಲ್ ಹಾಗೂ ನಿಸ್ಸಾನ್ ಮೈಕ್ರಾದ 1.5 ಲೀಟರ್ ಕೆ9ಕೆ ಡೀಸೆಲ್ ಎಂಜಿನ್ ಆಮದು ಮಾಡಿಕೊಳ್ಳಲಾಗುವುದು. ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‌ಗಳು ಅನುಕ್ರಮವಾಗಿ 68 ಹಾಗೂ 66 ಅಶ್ವಶಕ್ತಿ ಉತ್ಪಾದಿಸದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಸಹ ಪಡೆಯಲಿದೆ.
datsun go plus

ಟೆಸ್ಟ್ ಡ್ರೈವ್
ಈಗ ಸಂಸ್ಥೆಯಿಂದ ವಿಶೇಷವಾಗಿ ಆಹ್ವಾನಿಸಲ್ಪಟ್ಟಿರುವ ನಮ್ಮ ವಾಹನ ವಿಶ್ಲೇಷಕರು ಉತ್ತರಖಂಡ್‌ನಲ್ಲಿ ದಟ್ಸನ್ ಗೊ ಪ್ಲಸ್ ಚಾಲನಾ ಪರೀಕ್ಷೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಂಪ್ಲೀಟ್ ಡ್ರೈವ್ ಸ್ಪಾರ್ಕ್ ರಿವ್ಯೂಗಾಗಿ ಕಾದಿರಿ...
Most Read Articles

Kannada
English summary
The team from Drivespark is currently test driving the latest MPV from Datsun, the Datsun GO+ in the twisty roads of Utrakand. The exclusive road test review about the latest MPV will be available shortly. 
Story first published: Thursday, December 18, 2014, 9:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X