ಡೀಸೆಲ್, ಪೆಟ್ರೋಲ್ ಬೆಲೆ ಮತ್ತೆ 2.50 ರು. ಇಳಿಕೆ ಸಾಧ್ಯತೆ

By Nagaraja

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆಯಾಗಿರುವ ಹಿನ್ನಲೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳಲ್ಲಿ ಮತ್ತೆ ರು. 2.50ರಷ್ಟು ಕಡಿಮೆಯಾಗುವ ಸಾಧ್ಯತೆಯಿದೆ.

ನವೆಂಬರ್ 25ರಿಂದ ಆರಂಭವಾಗಲಿರುವ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಇಂತಹದೊಂದು ಜನಪರ ನೀತಿ ಕೈಗೊಳ್ಳುವ ಸಾಧ್ಯತೆಯಿದೆ.

fuel price

ಅಕ್ಟೋಬರ್ 18ರಂದು ಡೀಸೆಲ್ ಬೆಲೆಯನ್ನು ಅನಿಯಂತ್ರಣಗೊಳಿಸಿದ್ದ ಕೇಂದ್ರ ಸರಕಾರ 4 ರು.ಗಳಷ್ಟು ಇಳಿಕೆಗೊಳಿಸಿತ್ತು. ಈ ಮೂಲಕ ಕಳೆದ ಐದು ವರ್ಷಗಳಲ್ಲಿ ಮೊದಲ ಬಾರಿಗೆ ಡೀಸೆಲ್ ಬೆಲೆಯಲ್ಲಿ ಕುಸಿತವುಂಟಾಗಿತ್ತು.

ಇದಕ್ಕೂ ಮೊದಲು ಐದು ವರ್ಷಗಳ ಹಿಂದೆ ಅಂದರೆ 2009ರಲ್ಲಿ ಡೀಸೆಲ್ ಬೆಲೆ ಎರಡು ರು.ಗಳಷ್ಟು ಇಳಿಕೆಯಾಗಿತ್ತಲ್ಲದೆ ಪ್ರತಿ ಲೀಟರ್‌ಗೆ 30.86 ರು.ಗಳಿಗೆ ತಲುಪಿತ್ತು. ಏತನ್ಮಧ್ಯೆ 2014 ಅಕ್ಟೋಬರ್ ತಿಂಗಳಲ್ಲಿ ಪೆಟ್ರೋಲ್ ಬೆಲೆಗಳಲ್ಲಿ ಎರಡು ಬಾರಿ 2 ರು.ಗಳಷ್ಟು ಇಳಿಕೆಯಾಗಿತ್ತು.

ಇದರೊಂದಿಗೆ ನರೇಂದ್ರ ಮೋದಿ ಪ್ರಧಾನಿ ಗದ್ದುಗೇರಿದ ಬಳಿಕ ಸತತ ಆರನೇ ಬಾರಿಗೆ ಇಂಧನ ಬೆಲೆಯಲ್ಲಿ ಇಳಿಕೆ ಕಂಡುಬರಲಿದೆ.

ಅಂತರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರಲ್‌ಗೆ ದರ 85 ಅಮೆರಿಕನ್ ಡಾಲರ್‌ಗಳಿಗೆ ಕುಸಿತವುಂಟಾಗಿದ್ದು, ಈ ಹಿನ್ನಲೆಯಲ್ಲಿ ಶುಕ್ರವಾರ ಮಧ್ಯರಾತ್ರಿ ಶುಭ ಸುದ್ದಿ ಕೇಳಿಬರುವ ಸಂಭವವಿದೆ.

Most Read Articles

Kannada
English summary
Diesel & petrol prices likely to be cut by Rs 2.50/litre from Friday midnight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X