500ರ ಮ್ಯಾಜಿಕ್ ಸಂಖ್ಯೆ ದಾಟಿದ ಫಿಯೆಟ್ ಕ್ರಾಸೋವರ್ ಬುಕ್ಕಿಂಗ್

By Nagaraja

ಕ್ರಾಸೋವರ್ ಎಂಬ ಹೊಸ ವಿಭಾಗಕ್ಕೆ ಎಂಟ್ರಿ ಕೊಟ್ಟಿರುವ ಫಿಯೆಟ್‌ನ ಹೊಸತಾದ ಅವೆಂಚ್ಯುರಾ ಮಾದರಿಗೆ ದೇಶದೆಲ್ಲೆಡೆ ಭಾರಿ ಬೇಡಿಕೆ ಕಂಡುಬಂದಿದೆ.

ಅವೆಂಚ್ಯುರಾ ಕ್ರಾಸೋವರ್ ಬಿಡುಗಡೆಗೊಳಿಸಿರುವ ಇಟಲಿ ಮೂಲದ ಐಕಾನಿಕ್ ವಾಹನ ತಯಾರಕ ಸಂಸ್ಥೆಯಾಗಿರುವ ಫಿಯೆಟ್, ದೇಶದ ಮಾರುಕಟ್ಟೆಗೆ ಭರ್ಜರಿ ಪುನರಾಗಮನ ಮಾಡಿಕೊಂಡಿತ್ತು. ಇದು ದೇಶದಲ್ಲಿ ಫಿಯೆಟ್ ಭವಿಷ್ಯವನ್ನೇ ಬದಲಾಯಿಸುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.


ಸಮಕಾಲೀನ ಪಟ್ಟಣ ವಾಹನ ಎಂದು ತನ್ನನ್ನೇ ತಾನೇ ಗುರುತಿಸಿಕೊಂಡಿರುವ ಅವೆಂಚ್ಯುರಾ ಜಾಗತಿಕ ಮಾದರಿಯ ದೆಹಲಿ ಎಕ್ಸ್ ಶೋ ರೂಂ ಬೆಲೆ 5.99 ಲಕ್ಷ ರು.ಗಳಿಂದ 8.17 ಲಕ್ಷ ರು.ಗಳ ವರೆಗಿದೆ.

ಇದೀಗ ಫಿಯೆಟ್ ವಿತರಕರಿಂದ ಬಂದಿರುವ ಮಾಹಿತಿಗಳ ಪ್ರಕಾರ ಈಗಾಗಲೇ 500ಕ್ಕೂ ಹೆಚ್ಚು ಬುಕ್ಕಿಂಗ್ ದಾಖಲಾಗಿದ್ದು, ಸದ್ಯದಲ್ಲೇ ವಿತರಣೆ ಕಾರ್ಯ ಆರಂಭವಾಗಲಿದೆ.

ಫಿಯೆಟ್ ಪುಂಟೊ ಇವೊ ಹ್ಯಾಚ್‌ಬ್ಯಾಕ್ ತಳಹದಿಯಲ್ಲಿ ನಿರ್ಮಾಣವಾಗಿರುವ ಅವೆಂಚ್ಯುರಾ, ಸುಧಾರಿತ ಗ್ರೌಂಡ್ ಕ್ಲಿಯರನ್ಸ್, ಹೆಚ್ಚು ಆಯಾಮ ಮತ್ತು ಆಕರ್ಷಕ ನೋಟವನ್ನು ಹೊಂದಿದೆ.

ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳಲ್ಲಿ ಅವೆಂಚ್ಯುರಾ ಲಭ್ಯವಿರುತ್ತದೆ. ಇದರ ಪೆಟ್ರೋಲ್ 1.3 ಲೀಟರ್ ಎಂಜಿನ್ 89 ಅಶ್ವಶಕ್ತಿ (115 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಪ್ರತಿ ಲೀಟರ್‌ಗೆ 14.4 ಕೀ.ಮೀ. ಮೈಲೇಜ್ ನೀಡಲಿದೆ.

Fiat Avventura

ಅದೇ ರೀತಿ 1.2 ಲೀಟರ್ ಮಲ್ಟಿಜೆಟ್ ಡೀಸೆಲ್ ಎಂಜಿನ್ 93 ಅಶ್ವಶಕ್ತಿ (197 ಎನ್‌ಎಂ ಟಾರ್ಕ್) ಉತ್ಪಾದಿಸುತ್ತಿದ್ದು, ಪ್ರತಿ ಲೀಟರ್‌ಗೆ 20.5 ಕೀ.ಮೀ. ಮೈಲೇಜ್ ನೀಡಲಿದೆ. (ಭಾರತೀಯ ವಾಹನ ಅಧ್ಯಯನ ಸಂಸ್ಥೆಯ ಮಾನ್ಯತೆಯ ಪ್ರಕಾರ). ಇವೆರಡು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿದೆ. 16 ಇಂಚಿನ ಅಲಾಯ್ ವೀಲ್ ಮತ್ತು ಅಲ್ಯೂಮಿನಿಯಂ ರೂಫ್ ರೈಲ್ ಇನ್ನಷ್ಟು ವಿಶಿಷ್ಟವಾಗಿಸಿದೆ.

ಒಟ್ಟಾರೆಯಾಗಿ ಹೊಸ ಫಿಯೆಟ್ ಅವೆಂಚ್ಯುರಾ ಕೆಲವು ತಿಂಗಳುಗಳ ಹಿಂದೆಯಷ್ಟೇ ಬಿಡುಗಡೆಯಾಗಿರುವ ಟೊಯೊಟಾ ಎಟಿಯೋಸ್ ಕ್ರಾಸ್ ಮತ್ತು ಫೋಕ್ಸ್‌ವ್ಯಾಗನ್ ಕ್ರಾಸ್ ಪೊಲೊ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ.

Most Read Articles

Kannada
English summary
Italian automobile giant Fiat has recently launched its first crossover in India. The global product has been designed in Italy and engineered in India. Fiat claims their Avventura will be delivered to customers in the following weeks.
Story first published: Friday, October 24, 2014, 11:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X