ಫಿಯೆಟ್ ಅವೆಂಚ್ಯುರಾ ಬಿಡುಗಡೆಗೆ ಮುಹೂರ್ತ ಫಿಕ್ಸ್

ಅಂತು ಇಂತೂ ಬಹುನಿರೀಕ್ಷಿತ ಫಿಯೆಟ್ ಅವೆಂಚ್ಯುರಾ ಭಾರತ ಪ್ರವೇಶಕ್ಕೆ ಕಾಲ ನಿಗದಿಯಾಗಿದೆ. ಈ ಹಿಂದೆ ಕೊಟ್ಟಿರುವ ಮಾತನ್ನು ಪಾಲಿಸಿರುವ ಫಿಯೆಟ್ ಮುಂಬರುವ ಅಕ್ಟೋಬರ್ 21ರಂದು ಫಿಯೆಟ್ ಅವೆಂಚ್ಯುರಾ ಮಾದರಿಯನ್ನು ಬಿಡುಗಡೆ ಮಾಡಲಿದೆ.

ದೇಶಕ್ಕೆ ಈಗಾಗಲೇ ಲಿನಿಯಾ ಸೆಡಾನ್, ಪರಿಷ್ಕೃತ ಪುಂಟೊ ಮತ್ತು ಪುಂಟೊ ಇವೊ ಮಾದರಿಗಳನ್ನು ಪರಿಚಯಿಸಿರುವ ಫಿಯೆಟ್, ಅವೆಂಚ್ಯುರಾ ಮೇಲೆ ಅತಿ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ.


ವರ್ಷಾರಂಭದಲ್ಲಿ ನಡೆದ ಆಟೋ ಎಕ್ಸ್ ಪೋದಲ್ಲಿ ಫಿಯೆಟ್ ಅವೆಂಚ್ಯುರಾ ಮಾದರಿಯನ್ನು ಫಿಯೆಟ್ ಪರಿಚಯಿಸಿತ್ತು. ಇದೀಗ ಈ ಮಾದರಿ ಅಕ್ಟೋಬರ್ 21ರಂದು ಮಾರುಕಟ್ಟೆ ಪ್ರವೇಶಿಸಲಿದೆ.

ಈ ಹಿಂದೆ ಹಲವಾರು ಕಾರಣಗಳಿಂದಾಗಿ ಅವೆಂಚ್ಯುರಾ ಭಾರತ ಬಿಡುಗಡೆ ವಿಳಂಬವಾಗಿತ್ತು. ಈ ಕ್ರಾಸೋವರ್ ಮಾದರಿಯಲ್ಲಿರುವ 1.4 ಲೀಟರ್ ಪೆಟ್ರೋಲ್ ಎಂಜಿನ್ 90 ಅಶ್ವಶಕ್ತಿ (115 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಇದು 1.3 ಲೀಟರ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ ಸಹ ಪಡೆಯಲಿದೆ. ಇದು 88.7 ಅಶ್ವಶಕ್ತಿ (209 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಇವೆರಡು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆಯಲಿದೆ.

Fiat Avventura

ಅವೆಂಚ್ಯುರಾ ಡೀಸೆಲ್ ಮಾದರಿಯು ಆಕ್ಟಿವ್, ಡೈನಾಮಿಕ್, ಇಮೋಷನ್ ವೆರಿಯಂಟ್‌ಗಳನ್ನು ಪಡೆಯಲಿದೆ. ಅದೇ ಹೊತ್ತಿಗೆ ಪೆಟ್ರೋಲ್ ಮಾದರಿಯು ಬೇಸಿಕ್ ಹಾಗೂ ಟಾಪ್ ಎಂಡ್ ಮಾದರಿಗಳನ್ನು ಪಡೆಯಲಿದೆ. ಇದು ಟೊಯೊಟಾ ಎಟಿಯೋಸ್ ಕ್ರಾಸ್ ಮತ್ತು ಫೋಕ್ಸ್‌ವ್ಯಾಗನ್ ಪೊಲೊ ಕ್ರಾಸ್ ಮಾದರಿಗಳಿಗೆ ಪೈಪೋಟಿ ಒಡ್ಡಲಿದೆ.
Most Read Articles

Kannada
English summary
Italian automobile giant Fiat has launched several new models in India this year. They began with a face lifted version of their Linea sedan and followed it with a refreshed version of the Punto, which has been re-christened as Punto Evo.
Story first published: Saturday, October 18, 2014, 15:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X