ಅಂಬಾಸಿಡರ್ ಸ್ಥಾನ ಕಸಿದುಕೊಂಡಿತೇ ಫಿಯೆಟ್?

By Nagaraja

ಇಟಲಿಯ ಐಕಾನಿಕ್ ವಾಹನ ತಯಾರಿಕ ಸಂಸ್ಥೆಯಾಗಿರುವ ಫಿಯೆಟ್, ಕೋಲ್ಕತ್ತಾ ಟ್ಯಾಕ್ಸಿ ಮಾರುಕಟ್ಟೆಗೆ ಎಂಟ್ರಿ ಕೊಡುವ ಯೋಜನೆ ಹೊಂದಿದೆ.

ಇದರಂತೆ ಕೋಲ್ಕತ್ತಾ ನಗರಕ್ಕೆ ಲಿನಿಯಾ ಕ್ಲಾಸಿಕ್ ಮಾದರಿಯನ್ನು ಪರಿಚಯಿಸಲಿದೆ. ನಿಮ್ಮ ಮಾಹಿತಿಗಾಗಿ, ದೇಶದ ಅತಿ ಪುರಾತನ ನಗರಗಳಲ್ಲಿ ಒಂದಾಗಿರುವ ಕೋಲ್ಕತ್ತಾ ಬೃಹತ್ ಟ್ಯಾಕ್ಸಿ ಮಾರುಕಟ್ಟೆಯನ್ನು ಹೊಂದಿದೆ. ಈ ಮೂಲಕ ಫಿಯೆಟ್ ಲಿನಿಯಾ ಸೆಡಾನ್ ಕಾರಿನ ಮಾರಾಟ ವೃದ್ಧಿಯನ್ನು ಇಟಲಿ ಮೂಲಕ ಫಿಯೆಟ್ ಸಂಸ್ಥೆ ಗುರಿಯಿರಿಸಿಕೊಂಡಿದೆ.

Fiat

ಎಪ್ರಿಲ್‌ನಿಂದ ಅಕ್ಟೋಬರ್ ತಿಂಗಳ ವರೆಗಿನ ಅವಧಿಯಲ್ಲಿ ಮಾರಾಟವು ಶೇಕಡಾ 18.6ರಷ್ಟು ಇಳಿಕೆ ಕಂಡಿರುವ ಈ ಹಿನ್ನಲೆಯಲ್ಲಿ ಫಿಯೆಟ್ ಇಂತಹದೊಂದು ನಡೆ ಸ್ವೀಕರಿಸಿರುವುದು ಹೆಚ್ಚಿನ ನಿರೀಕ್ಷೆಗೆ ಕಾರಣವಾಗಿದೆ.

ಇಲ್ಲಿ ಗಮನಾರ್ಹ ವಿಷಯವೆಂದರೆ ಒಂದು ಕಾಲದಲ್ಲಿ ಕೋಲ್ಕತ್ತಾ ಮಾರಾಟವನ್ನು ಆಳಿದ ಕಾರುಗಳ ರಾಜ ಖ್ಯಾತಿಯ ಅಂಬಾಸಿಡರ್ ನಿರ್ಮಾಣವನ್ನು ಹಿಂದೂಸ್ತಾನ್ ಮೋಟಾರ್ಸ್ ಕೊನೆಗೊಳಿಸಿರುವ ಹಿನ್ನೆಲೆಯಲ್ಲಿ ಈ ಸ್ಥಾನವನ್ನು ಕಸಿದುಕೊಳ್ಳುವುದು ಫಿಯೆಟ್ ಯೋಜನೆಗಳಲ್ಲಿ ಒಂದಾಗಿರಲಿದೆ.

ಈ ಸಂಬಂಧ ಪಶ್ಚಿಮ ಬಂಗಾಳ ಸರಕಾರದಿಂದ ಇನ್ನಷ್ಟೇ ಅನುಮತಿ ಪಡೆಯಬೇಕಾಗಿದೆ. ಮುಂಬೈ ಹಾಗೂ ದೆಹಲಿಗಳಂತಹ ಮಹಾನಗರಗಳಲ್ಲಿ ಫಿಯೆಟ್ ತನ್ನ ಸಾನಿಧ್ಯವನ್ನು ಈಗಾಗಲೇ ಆರಂಭಿಸಿದೆ.

ಅಂತೆಯೇ ತಮಿಳುನಾಡಿನಲ್ಲೂ ಇಂತಹದೊಂದು ಯೋಜನೆ ಬಿಡುಗಡೆ ಮಾಡುವ ಇರಾದೆಯನ್ನು ಫಿಯೆಟ್ ಹೊಂದಿದೆ. ಅಂತೆಯೇ 25 ಹೊಸ ಔಟ್ಲೆಟ್ ತೆರೆದುಕೊಳ್ಳುವ ಮೂಲಕ ದೇಶೆದೆಲ್ಲೆಡೆಯ ವಿತರಕ ಜಾಲವನ್ನು 150ಕ್ಕೆ ಏರಿಸುವ ಯೋಜನೆಯನ್ನು ಫಿಯೆಟ್ ಹೊಂದಿದೆ.

Most Read Articles

Kannada
English summary
Italian car manufacturer Fiat, is eyeing Kolkata as a good market to launch its taxi fleet of the Linea classic.
Story first published: Thursday, November 27, 2014, 15:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X