'ಹುಡ್ ಹುಡ್' ಪರಿಹಾರ ಕಾರ್ಯಾಚರಣೆಗೆ ಸಹಾಯಹಸ್ತ ಚಾಚಿದ ಇಸುಝು

By Nagaraja

ಆಂಧ್ರ ಪ್ರದೇಶದಲ್ಲಿ ಇತ್ತೀಚೆಗಷ್ಟೇ ಬೀಸಿದ ಹುಡ್ ಹುಡ್ ಚಂಡಮಾರುತದಿಂದಾಗಿ ಸಾವಿರಾರು ಮಂದಿ ತಮ್ಮ ಮನೆ ಮಠವನ್ನು ಕಳೆದುಕೊಳ್ಳುವಂತಾಗಿತ್ತು. ಇದರಂತೆ ಪರಿಹಾರ ಕಾರ್ಯಾಚರಣೆಗೆ ನೆರವಾಗಿ ಮುಂದೆ ಬಂದಿರುವ ಇಸುಝು ಸಂಸ್ಥೆಯು ಐದು ಡಿಮ್ಯಾಕ್ಸ್ ವಾಹನಗಳನ್ನು ಅನುದಾನವಾಗಿ ನೀಡಿದೆ.

ಇದರಂತೆ ಪರಿಹಾರ ಕಾರ್ಯಾಚರಣೆ ಇನ್ನಷ್ಟು ಚುರುಕು ಮುಟ್ಟಿಸಲು ಸಾಧ್ಯವಾಗಲಿದೆ ಎಂದು ಜಪಾನ್ ಮೂಲದ ಇಸುಝು ಸಂಸ್ಥೆಯು ಭರವಸೆ ವ್ಯಕ್ತಪಡಿಸಿದೆ.


ಈ ಹಿಂದೆ 2014 ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದ್ದ ಡಿಮ್ಯಾಕ್ಸ್ ಮತ್ತು ಎಂಯು-7 ಮಾದರಿಗಳನ್ನು ಸಂಸ್ಥೆಯು ಇತ್ತೀಚೆಗಷ್ಟೇ ಮಾರುಕಟ್ಟೆಗೆ ಪರಿಚಯಿಸಿತ್ತು.

ಹುಡ್ ಹುಡ್ ಚಂಡಮಾರುತವು ವಿಶಾಖಪಟ್ಟಣ ಸೇರಿದಂತೆ ಆಂಧ್ರ ಪ್ರದೇಶದ ಕರಾವಳಿ ತೀರ ಪ್ರದೇಶದಲ್ಲಿ ಭಾರಿ ನಾಶನಷ್ಟವನ್ನುಂಟುಮಾಡಿತ್ತು. ಇದರಿಂದಾಗಿ ಸಂಪೂರ್ಣ ಮೂಲಸೌಕರ್ಯವೇ ಹದೆಗೆಡವುವಂತಾಗಿತ್ತು. ಇದೀಗ ಪರಿಹಾರ ಕಾರ್ಯಾಚರಣೆಗೆ ಸಹಾಯಹಸ್ತ ಚಾಚಿದ ಮೊದಲ ವಾಹನ ತಯಾರಕ ಸಂಸ್ಥೆ ಎಂಬ ಗೌರಕ್ಕೆ ಇಸುಝು ಪಾತ್ರವಾಗಿದೆ.

Isuzu D Max

ಭಾರತದಲ್ಲಿ ಎರಡು ಶ್ರೇಣಿಯ ಡಿಮ್ಯಾಕ್ಸ್ ಮಾದರಿಗಳನ್ನು ಒದಗಿಸುತ್ತಿದೆ. ಇದರಲ್ಲಿ ಸ್ಪೇಸ್ ಕ್ಯಾಬ್ ಮತ್ತು ಸಿಂಗಲ್ ಕ್ಯಾಬ್ ಪ್ರಮುಖವಾಗಿದೆ. ಇದರಲ್ಲಿ 4 ಸಿಲಿಂಡರ್ ಕಾಮನ್ ರೈಲ್ ಟರ್ಬೊ ಚಾರ್ಜ್ಡ್ ಇಂಟರ್ ಕೂಲ್ಡ್ 2499 ಸಿಸಿ ಡೀಸೆಲ್ ಎಂಜಿನ್ ಆಳವಡಿಸಲಾಗಿದೆ. ಇದು 294 ಟಾರ್ಕ್ ಉತ್ಪಾದಿಸಲು ಸಮರ್ಥವಾಗಿದೆ.
Most Read Articles

Kannada
English summary
Nowadays several manufacturers are trying to reach out and join a cause to improve their image. The Japanese manufacturer has now decided to donate five of their D-Max vehicles for the Hudhud relief effort.
Story first published: Saturday, November 22, 2014, 15:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X