ಹ್ಯಾಟ್ರಿಕ್ ಸಾಧನೆ: ಫೋರ್ಡ್ ಇಕೊಬೂಸ್ಟ್ 'ವರ್ಷದ ಎಂಜಿನ್'

By Nagaraja

ಸತತ ಮೂರನೇ ವರ್ಷದಲ್ಲೂ ವಿಶ್ವದ ಅತ್ಯಂತ ಶ್ರೇಷ್ಠ ಎಂಜಿನ್ ಪ್ರಶಸ್ತಿಗೆ ಭಾಜನವಾಗಿರುವ ಫೋರ್ಡ್ ಇಕೊಬೂಸ್ಟ್ ಹ್ಯಾಟ್ರಿಕ್ ಸಾಧನೆ ಮಾಡಿದೆ. ಅಮೆರಿಕ ಮೂಲದ ಫೋರ್ಡ್ ವಾಹನ ತಯಾರಿಕ ಸಂಸ್ಥೆ ಉತ್ಪಾದಿಸುತ್ತಿರುವ 1.0 ಲೀಟರ್ ಇಕೊಬೂಸ್ಟ್ ಎಂಜಿನ್ ಇಂತಹದೊಂದು ಮಾನ್ಯತೆಗೆ ಪಾತ್ರವಾಗಿದೆ.

2014ನೇ ಸಾಲಿನ ಅಂತರಾಷ್ಟ್ರೀಯ ಎಂಜಿನ್ ಪಟ್ಟ ಗೆದ್ದಿರುವ ಫೋರ್ಡ್, ತನ್ನ ಜನಪ್ರಿಯ ಇಕೊಸ್ಪೋರ್ಟ್ ಆವೃತ್ತಿಯಲ್ಲಿ ಇದನ್ನು ಪರಿಚಯಿಸಿತ್ತು. ಪ್ರಖ್ಯಾತ ಸೂಪರ್ ಕಾರುಗಳ ಎಂಜಿನ್‌ಗಳೇ ರೇಸ್‌ನಲ್ಲಿರುವಾಗ ವರ್ಷದ ಎಂಜಿನ್ ಪಟ್ಟ ಗೆದ್ದಿರುವ ಫೋರ್ಡ್ ಸಾಧನೆಯನ್ನು ಮೆಚ್ಚಲೇ ಬೇಕಾಗುತ್ತದೆ.


ಈ ಬಗ್ಗೆ ಪ್ರತಿಕ್ರಿಯಿಸಿರುವ ಫೋರ್ಡ್ ಪವರ್‌ಟ್ರೈನ್ ಎಂಜಿನಿಯರಿಂಗ್ ಉಪಾಧ್ಯಕ್ಷ ಬಾಬ್ ಫಾಸೆಟ್ಟಿ, ಇಂಧನ ಕ್ಷಮತೆ, ನಿರ್ವಹಣೆ ಮತ್ತು ಪರಿಷ್ಕರಣೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಇಕೊಬೂಸ್ಟ್ ಎಂಜಿನ್ ಗೇಮ್ ಚೇಂಜರ್ ಎನಿಸಿಕೊಂಡಿದೆ ಎಂದಿದ್ದಾರೆ.

35 ರಾಷ್ಟ್ರವನ್ನೊಳಗೊಂಡ 76 ಪತ್ರಕರ್ತರ ಮತದಾನದ ಆಧಾರದಲ್ಲಿ ಎಂಜಿನ್ ಟೆಕ್ನಾಲಜಿ ಇಂಟರ್‌ನ್ಯಾಷನ್ ಮ್ಯಾಗಜೀನ್, 'ಬೆಸ್ಟ್ ನ್ಯೂ ಎಂಜಿನ್' ಹಾಗೂ '1.0 ಲೀಟರ್ ಒಳಗಡೆ ಅತ್ಯುತ್ತಮ ಎಂಜಿನ್ ಪ್ರಶಸ್ತಿ'ಗಳಿಗೆ ಫೋರ್ಡ್ ಇಕೊಬೂಸ್ಟ್ ಎಂಜಿನ್ ಅನ್ನು ಆರಿಸಿದೆ.

Ford EcoBoost

ಎರಡನೇ ಸ್ಥಾನ ಗಿಟ್ಟಿಸಿಕೊಂಡಿರುವ ಫೆರಾರಿಯ 4.5 ವಿ8 ಎಂಜಿನ್ 281 ಹಾಗೂ ಫೋಕ್ಸ್‌ವ್ಯಾಗನ್ 1.4 ಲೀಟರ್ ಟಿಎಸ್‌ಐ ಟ್ವಿನ್ ಚಾರ್ಜ್ಡ್ ಎಂಜಿನ್ 254 ಅಂಕಗಳೊಂದಿಗೆ ಅನುಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳನ್ನು ಹಂಚಿಕೊಂಡಿದೆ. ಅಗ್ರಸ್ಥಾನದಲ್ಲಿರುವ ಇಕೊಬೂಸ್ಟ್ ಒಟ್ಟು 352 ಅಂಕಗಳನ್ನು ಪಡೆದಿತ್ತು.

ಸದ್ಯ ಒಂಬತ್ತು ಇನ್ನಿತರ ಜಾಗತಿಕ ಮಾದರಿಗಳಲ್ಲೂ 1.0 ಲೀಟರ್ ಇಕೊಬೂಸ್ಟ್ ಎಂಜಿನ್ ಆಳವಡಿಸಲಾಗಿದೆ. ಅವುಗಳಲ್ಲಿ ಫೋರ್ಡ್ ಫಿಯೆಸ್ಟಾ, ಫೋರ್ಡ್ ಬಿ ಮ್ಯಾಕ್ಸ್, ಫೋರ್ಡ್ ಫೋಕಸ್, ಫೋರ್ಡ್ ಸಿ ಮ್ಯಾಕ್ಸ್, ಫೋರ್ಡ್ ಗ್ರಾಂಡ್ ಸಿ ಮ್ಯಾಕ್ಸ್, ಫೋರ್ಡ್ ಟೂರ್‌ನಿಯೋ ಕನೆಕ್ಟ್, ಫೋರ್ಡ್ ಗ್ರಾಂಡ್ ಟೂರ್‌ನಿಯೋ ಕನೆಕ್ಟ್, ಫೋರ್ಡ್ ಟ್ರಾನ್ಸಿಸ್ಟ್ ಕನೆಕ್ಟ್ ಮತ್ತು ಫೋರ್ಡ್ ಟ್ರಾನ್ಸಿಸ್ಟ್ ಕೋರಿಯರ್ ಪ್ರಮುಖವಾಗಿದೆ. 2012ನೇ ಇಸವಿಯಲ್ಲಿ ಪ್ರವೇಶಿಸಿದ್ದ ಫೋರ್ಡ್ ಇಕೊಬೂಸ್ಟ್ ಎಂಜಿನ್ ಈಗಾಗಲೇ ಜಾಗತಿಕವಾಗಿ 17 ಪ್ರಮುಖ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

Most Read Articles

Kannada
English summary
Ford India currently provides its internationally-acclaimed EcoBoost engine only in the EcoSport. In international markets the American-based manufacturer provides the engine in almost all of its products.
Story first published: Friday, June 27, 2014, 12:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X