ಫೋರ್ಡ್ ಫಿಯೆಸ್ಟಾ ಎಸ್‌ಟಿ-3 ಅನಾವರಣ

By Nagaraja

ಜನಪ್ರಿಯ ಫಿಯೆಸ್ಟಾ ಎಸ್‌ಟಿ ಮಾದರಿಯ ನೂತನ ವೆರಿಯಂಟನ್ನು ಫೋರ್ಡ್ ಅನಾವರಣಗೊಳಿಸಿದೆ. ನೂತನ ಮಾದರಿಯು ಎಸ್‌ಟಿ-3 ಎಂದರಿಯಲ್ಪಡಲಿದೆ. ಇದು ಎಸ್‌ಟಿ-2 ತಲಹದಿಯಲ್ಲಿ ನಿರ್ಮಾಣವಾಗಿದೆ. ಇದು ಹಿಂದಿನ ಆವೃತ್ತಿಗಿಂತಲೂ ಹೆಚ್ಚುವರಿ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ.

ನೂತನ ಎಸ್‌ಟಿ-3 ಮಾದರಿಯಲ್ಲಿ ಕೀಲೆಸ್ ಎಂಟ್ರಿ, ಪವರ್ ಫೋಲ್ಡ್ ಡೋರ್ ಮಿರರ್ ಜತೆ ಪಡ್ಲ್ ಲ್ಯಾಂಪ್, ಆಟೋಮ್ಯಾಟಿಕ್ ಹೆಡ್‌ಲೈಟನ್, ರೈನ್ ಸೆನ್ಸಿಂಗ್ ವೈಪರ್, ಕ್ರೂಸ್ ಕಂಟ್ರೋಲ್, ಎಲೆಕ್ಟ್ರಾನಿಕ್ ಆಟೋಮ್ಯಾಟಿಕ್ ತಾಪಮಾನ ನಿಯಂತ್ರಣ, ಸೋನಿ ಡಿಎಬಿ ರೆಡಿಯೇ/ಸಿಡಿ, ನೇವಿಗೇಷನ್ ಮತ್ತು ಆಟೋ ಡಿಮ್ಮಿಂಗ್ ರಿಯರ್ ವ್ಯೂ ಮಿರರ್ ಸೌಲಭ್ಯಗಳಿರಲಿದೆ.

Ford Fiesta

ಹೊಸ ಫಿಯೆಸ್ಟಾ ಎಸ್‌ಟಿ ಲಾಂಚ್ ಆಗಿರುವ ಬಹುತೇಕ ಒಂದು ವರ್ಷದ ಬಳಿಕ ಫೋರ್ಡ್ ಎಸ್‌ಟಿ-3 ಅನಾವರಣಗೊಳಿಸಿದೆ. ಇದುವರೆಗೆ 6250 ಫೋರ್ಡ್ ಫಿಯೆಸ್ಟಾ ಎಸ್‌ಟಿ ಮಾದರಿಗಳನ್ನು ಮಾರಾಟ ಮಾಡಿರುವ ಫೋರ್ಡ್ ಶೇಕಡಾ 20ರಷ್ಟು ಮಾರಾಟ ವೃದ್ಧಿ ದಾಖಲಿಸಿದೆ.

ನೂತನ ಫಿಯೆಸ್ಟಾ ಎಸ್‌ಟಿ 1.6 ಲೀಟರ್ ಇಕೊಬೂಸ್ಟ್ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದ್ದು, ಗಂಟೆಗೆ ಗರಿಷ್ಠ 220 ಕೀ.ಮೀ. ಅಂತೆಯೇ ಕೇವಲ 6.9 ಸೆಕೆಂಡುಗಳಲ್ಲಿ 0-100 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಇದು ಎಸ್‌ಟಿ-2 ಮಾದರಿಗಿಂತಲೂ ದುಬಾರಿಯಾಗಿರಲಿದ್ದು, ಬ್ರಿಟನ್‌ನಲ್ಲಿ 19250 ಪೌಂಡ್ ಬೆಲೆ ನಿಗದಿಯಾಗಿದೆ. ಹಾಗೆಯೇ ರೇಸ್ ರೆಡ್, ಫ್ಯಾಂಥರ್ ಬ್ಲ್ಯಾಕ್, ಫ್ರಾಜನ್ ವೈಟ್, ಮೋಟಲ್ಟನ್ ಓರೆಂಜ್ ಮತ್ತು ಸ್ಪಿರಿಟ್ ಬ್ಲ್ಯೂಗಳೆಂಬ ಐದು ಬಣ್ಣಗಳಲ್ಲೂ ಲಭ್ಯವಿರುತ್ತದೆ.

Most Read Articles

Kannada
English summary
Ford has revealed its new variant of the popular Fiesta ST. The new model is called the ST-3, which is based on the ST-2. The ST-3 will be packed with additional features and tech goodies, that are not available in the ST-2 variant.
Story first published: Friday, April 25, 2014, 11:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X