3,072 ಫೋರ್ಡ್ ಫಿಯೆಸ್ಟಾ ಕಾರುಗಳಿಗೆ ಹಿಂದಕ್ಕೆ ಕರೆ

By Nagaraja

ಸಮಕಾಲೀನ ಮಾರುಕಟ್ಟೆ ಪರಿಸ್ಥಿತಿಯಲ್ಲಿ ರಿಕಾಲ್ ಪದ್ಧತಿ ಸಾಮಾನ್ಯವಾಗಿ ಬಿಟ್ಟಿದೆ. ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಗಳು ಯಾವುದೇ ಸಮಸ್ಯೆಗಳು ಕಂಡರೂ ಮುಂಜಾಗ್ರತಾ ಕ್ರಮವಾಗಿ ತಮ್ಮ ಜನಪ್ರಿಯ ಮಾದರಿಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳುತ್ತಿದೆ.

ಯಾವ ಮಾದರಿ?
ಇದೀಗ ಅಮೆರಿಕ ಮೂಲದ ಫೋರ್ಡ್ ಸಂಸ್ಥೆಯ ಸರದಿ. ಹೌದು, ಫೋರ್ಡ್ ಸಂಸ್ಧೆಯು ಭಾರತದಲ್ಲಿ 3,072 ಯುನಿಟ್‌ಗಳಷ್ಟು ಫಿಯೆಸ್ಟಾ ಕಾರನ್ನು ಹಿಂಪಡೆಯಲು ನಿರ್ಧರಿಸಿದೆ.

Ford Fiesta

ಸಮಸ್ಯೆ ಏನು?
ಫೋರ್ಡ್ ಫಿಯೆಸ್ಟಾ ಸೆಡಾನ್ ಕಾರಿನ ಡೀಸೆಲ್ ಎಂಜಿನ್‌ಗಳಲ್ಲಿ ಸ್ಟಾಂರ್ಟಿಂಗ್ ಸಮಸ್ಯೆ (glow plug control) ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಹಿಂಪಡೆಯಲು ನಿರ್ಧರಿಸಿದೆ.

ನಿರ್ಮಾಣಗೊಂಡ ವರ್ಷ ಯಾವುದು?
ವರದಿಗಳ ಪ್ರಕಾರ 3,072 ಫೋರ್ಡ್ ಫಿಯೆಸ್ಟಾ ಟಿಡಿಸಿಐ ಮಾದರಿಗಳನ್ನು ವಾಪಾಸ್ ಕರೆಯಿಸಿಕೊಳ್ಳಲಿದೆ. ಇದು ಅಕ್ಟೋಬರ್ 2010ರಿಂದ 2011 ಡಿಸೆಂಬರ್ ಅವಧಿಯಲ್ಲಿ ನಿರ್ಮಾಣವಾದ ಮಾದರಿಗಳಾಗಿವೆ.

ಗರಿಷ್ಠ ಗ್ರಾಹಕ ಅನುಭವವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಫೋರ್ಡ್ ಇಂತಹದೊಂದು ತಾತ್ಕಾಲಿಕ ರಿಕಾಲ್‌ಗೆ ಮುಂದಾಗಿದೆ. ಆದರೆ ಇದುವರೆಗೆ ಯಾವುದೇ ಅಪಘಾತ ಪ್ರಕರಣ ದಾಖಲಾಗಿಲ್ಲ.

Most Read Articles

Kannada
English summary
Ford has decided to recall 3,072 Ford Fiesta cars in India. These were manufactured at it’s factory in Maraimalai Nagar, near Chennai. 
Story first published: Saturday, November 22, 2014, 16:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X