ಪ್ರಾಬ್ಲಂ, ಪ್ರಾಬ್ಲಂ; ಫೋರ್ಡ್ ಇಕೊಸ್ಪೋರ್ಟ್ ಭಾರಿ ರಿಕಾಲ್?

By Nagaraja

ಮಗದೊಂದು ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯು ತನ್ನ ಜನಪ್ರಿಯ ಮಾದರಿಯಲ್ಲಿ ತೊಂದರೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಹಿಂದಕ್ಕೆ ಕರೆ ನೀಡುತ್ತಿದೆ. ಈ ಬಾರಿ ಇಕೊಸ್ಪೋರ್ಟ್ ಕಾಂಪಾಕ್ಟ್ ಎಸ್‌ಯುವಿಯಲ್ಲಿ ಸಮಸ್ಯೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಅಮೆರಿಕ ಮೂಲದ ಫೋರ್ಡ್ ಸಂಸ್ಥೆಯು ರಿಕಾಲ್‌ಗೆ ಕರೆ ನೀಡಲಿದೆ.

ಏನಿದು ಸಮಸ್ಯೆ?
ಸಂಸ್ಥೆಯ ಪ್ರಕಾರ ನಿರ್ದಿಷ್ಟ ಇಕೊಸ್ಪೋರ್ಟ್ ಮಾದರಿಗಳಲ್ಲಿ ಏರ್ ಬ್ಯಾಗ್ ಹಾಗೂ ಫ್ಲೂಯಲ್ ಲೈನ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಹಿಂದಕ್ಕೆ ಕರೆಯಿಸಿಕೊಳ್ಳಲಾಗುತ್ತಿದೆ.

ಒಟ್ಟು ಎಷ್ಟು ಯುನಿಟ್ ?
ಒಟ್ಟು 20,700 ಯುನಿಟ್ ಇಕೊಸ್ಪೋರ್ಟ್ ಮಾದರಿಗಳನ್ನು ರಿಕಾಲ್ ಮಾಡಲಾಗುತ್ತಿದೆ. ಇದರಲ್ಲಿ 19,441 ಯುನಿಟ್‌ 1.5 ಲೀಟರ್ ಡೀಸೆಲ್ ಹಾಗೂ 1.0 ಲೀಟರ್ ಪೆಟ್ರೋಲ್ ಇಕೊಸ್ಪೋರ್ಟ್ ಟೈಟಾನಿಯಂ ವೆರಿಯಂಟ್‌ಗಳಲ್ಲಿ ಬದಿಯ ಏರ್ ಬ್ಯಾಗ್ ಸಮಸ್ಯೆ ಅಂತೆಯೇ 2,715 ಯನಿಟ್‌ಗಳಷ್ಟು ಪೆಟ್ರೋಲ್ ವೆರಿಯಂಟ್‌ಗಳಲ್ಲಿ ಇಂಧನ ಲೈನ್ ಸಮಸ್ಯೆ ಕಾಣಿಸಿಕೊಂಡಿದೆ. ಇವೆಲ್ಲದರ ಜೊತೆಗೆ 1,404 ಯುನಿಟ್‌ಗಳಲ್ಲಿ ಇವೆರಡು ಸಮಸ್ಯೆ ಕಾಣಿಸಿಕೊಂಡಿದೆ.

ford ecosport

ಯಾವಾಗ ತಯಾರಿ?
ಫೋರ್ಡ್ ಇಂಡಿಯಾ ಪ್ರಕಾರ 2013 ಜನವರಿ ತಿಂಗಳಿನಿಂದ 2014 ಸೆಪ್ಟೆಂಬರ್ ತಿಂಗಳ ವರೆಗೆ ನಿರ್ಮಾಣವಾದ ಇಕೊಸ್ಪೋರ್ಟ್ ಮಾದರಿಗಳಲ್ಲಿ ತೊಂದರೆಯಿರುವ ಸಾಧ್ಯತೆಯಿದೆ ಎಂದಿದೆ.

ಸಂಸ್ಥೆಯ ಸ್ಪಷ್ಟನೆ ಏನು?
ಫೋರ್ಡ್ ಸಂಸ್ಥೆಯು ಯಾವತ್ತೂ ಗ್ರಾಹಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಹಾಗಿದ್ದರೂ ಯಾವುದೇ ಅಧಿಕೃತ ದೂರು ದಾಖಲಾಗಿರುವ ಬಗ್ಗೆ ಮಾಹಿತಿಗಳಿಲ್ಲ. ವರದಿಗಳ ಪ್ರಕಾರ ಕೆಲವು ವಿತರಕ ಜಾಲದಲ್ಲಿ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಫೋರ್ಡ್ ಸೂಕ್ತ ಕ್ರಮಕ್ಕೆ ಮುಂದಾಗಿದೆ.

ಉಚಿತ ಸೇವೆ
ಇದೀಗ ಸ್ಥಳೀಯ ಡೀಲರ್ ಮೂಲಕ ಗ್ರಾಹಕರ ಸಂಪರ್ಕದಲ್ಲಿರುವ ಫೋರ್ಡ್ ತೊಂದರೆ ಕಂಡುಬಂದ್ದಲ್ಲಿ ಸಂಪೂರ್ಣ ಉಚಿತವಾಗಿ ಸಮಸ್ಯೆ ಬಗೆ ಹರಿಸಿ ಕೊಡಲಿದೆ.

ಈ ಹಿಂದೆ 2013ನೇ ಜುಲೈ ತಿಂಗಳಲ್ಲಿ ಪ್ರವೇಶ ಪಡೆದಿರುವ ಫೋರ್ಡ್ ಎರಡನೇ ಬಾರಿಗೆ ರಿಕಾಲ್ ನೀಡುತ್ತಿದೆ. ಬಿಡುಗಡೆಯಾದ ಕೆಲವೇ ಸಮಯದಲ್ಲಿ ಫೋರ್ಡ್ 1000ದಷ್ಟು ಯುನಿಟ್‌ಗಳನ್ನು ಹಿಂಪಡೆದಿತ್ತು. ಇನ್ನು ಫಿಯೆಸ್ಟಾ ಟಿಡಿಸಿಐ ಸೆಡಾನ್ ಕಾರಿನಲ್ಲಿ ಸಮಸ್ಯೆ ಕಾಣಿಸಿಕೊಂಡಿರುವ ಹಿನ್ನೆಲಯಲ್ಲಿ ನವೆಂಬರ್ 21ರಂದು 3,072 ಯುನಿಟ್‌ಗಳಿಗೆ ಹಿಂದಕ್ಕೆ ಕರೆ ನೀಡಿತ್ತು.

Most Read Articles

Kannada
English summary
Ford To Recall 20,700 EcoSport In India Over Airbag & Fuel Line Issue
Story first published: Wednesday, December 17, 2014, 9:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X