ಬ್ರೇಕ್ ಸಮಸ್ಯೆ; ಹೋಂಡಾ ಬ್ರಿಯೊ, ಅಮೇಜ್ ವಾಪಾಸ್

By Nagaraja

ಅಚ್ಚರಿಯ ಸುದ್ದಿಯೊಂದರಲ್ಲಿ ಬ್ರೇಕ್ ಘಟಕದಲ್ಲಿ ಸಮಸ್ಯೆ ಕಂಡುಬಂದಿರುವ ಹಿಂದಿರುವ ಹಿನ್ನಲೆಯಲ್ಲಿ, ಹೋಂಡಾ ಕಾರ್ಸ್ ಇಂಡಿಯಾ ಸಂಸ್ಥೆಯು ತನ್ನ ಜನಪ್ರಿಯ ಅಮೇಜ್ ಕಾಂಪಾಕ್ಟ್ ಸೆಡಾನ್ ಹಾಗೂ ಬ್ರಿಯೊ ಹ್ಯಾಚ್‌ಬ್ಯಾಕ್ ಆವೃತ್ತಿಯ ನಿರ್ದಿಷ್ಠ ವೆರಿಯಂಟ್‌ಗಳನ್ನು ವಾಪಾಸ್ ಪಡೆದುಕೊಂಡಿದೆ.

ಪ್ರಸಕ್ತ ಸಾಲಿನಲ್ಲೇ ಜನವರಿ 16ರಿಂದ ಫೆಬ್ರವರಿ 28ರ ವರೆಗಿನ ಅವಧಿಯಲ್ಲಿ ನಿರ್ಮಾಣವಾಗಿರುವ ಎಬಿಎಸ್ ರಹಿತ ಅಮೇಜ್ ಹಾಗೂ ಬ್ರಿಯೊ ವೆರಿಯಂಟ್‌ಗಳನ್ನು ಹಿಂದಕ್ಕೆ ಪಡೆಯಲಾಗುತ್ತಿದ್ದು, ದೋಷಪೂರಿತ ಬ್ರೇಕ್ ಕಾಂಪೊನೆಂಟ್ ಪರಿಶೀಲಿಸಲಾಗುತ್ತಿದೆ.

Honda Brio

ವರದಿಗಳ ಪ್ರಕಾರ 15,623 ಬ್ರಿಯೊ ಹಾಗೂ 15,603 ಅಮೇಜ್ ಕಾಂಪಾಕ್ಟ್ ಸೆಡಾನ್ ಕಾರುಗಳನ್ನು ಹಿಂದಕೆ ಪಡೆಯಲಾಗುತ್ತಿದೆ. ನಿಮ್ಮ ಮಾಹಿತಿಗಾಗಿ, ಬ್ರೇಕಿಂಗ್ ಸಿಸ್ಟಂನಲ್ಲಿ ಪ್ರೊಪ್ರೊರ್ಷನಿಂಗ್ ವಾಲ್ವೆ (proportioning valve) ಮುಖ್ಯ ಘಟಕವಾಗಿರುತ್ತದೆ. ಇದು ಚಕ್ರಗಳಿಗೆ ವಿತರಿಸುವ ಬ್ರೇಕಿಂಗ್ ಅನ್ನು ಹೊಂದಾಣಿಸುತ್ತದೆ. ಇದೀಗ ಪರಿಶೀಲನೆ ನಡೆಸಲಿರುವ ಹೋಂಡಾ ಸಮಸ್ಯೆಯನ್ನು ಸರಿಪಡಿಸಲಿದೆ. ಇದಕ್ಕೆ ಯಾವುದೇ ಹೆಚ್ಚುವರಿ ಹೊರೆ ತಗಲುವುದಿಲ್ಲ. ಅಂದರೆ ಸಂಪೂರ್ಣ ಉಚಿತವಾಗಿ ಸಮಸ್ಯೆ ಬಗೆ ಹರಿಸಲಾಗುವುದು.

ಈ ಬಗ್ಗೆ ಹೇಳಿಕೆ ಕೊಟ್ಟಿರುವ ಸಂಸ್ಥೆಯು ಇದುವರೆಗೆ ಯಾವುದೇ ದೂರು ದಾಖಲಾಗಿಲ್ಲ. ಹಾಗಿದ್ದರೂ ಮುಂಜಾಗ್ರತಾ ಕ್ರಮವಾಗಿ ನಿರ್ದಿಷ್ಟ ಆವೃತ್ತಿಗಳನ್ನು ವಾಪಾಸ್ ಕರೆಯಿಸಿಕೊಳ್ಳಲಾಗುತ್ತಿದ್ದು, ತಪ್ಪಾದ ಜೋಡಣೆಯಾಗಿರುವ ಸಾಧ್ಯತೆಯಿದೆ ಎಂದಿದೆ.

ಪತ್ತೆ ಹಚ್ಚುವುದು ಹೇಗೆ...?
ಅಷ್ಟಕ್ಕೂ ನೀವು ಹೋಂಡಾ ಬ್ರಿಯೊ ಅಥವಾ ಅಮೇಜ್ ಮಾಲಿಕರಾಗಿದ್ದು, ಮೇಲೆ ತಿಳಿಸಿಲಾದ ಅವಧಿಯೊಳಗೆ ಕಾರು ಕೊಂಡಿದ್ದರೆ ನಿಮ್ಮ ಕಾರು 'ರಿ ಕಾಲ್' ಪರಿಧಿಗೆ ಒಳಪಡಿದ್ದೆಯೇ ಎಂಬುದನ್ನು ಪತ್ತೆ ಹಚ್ಚಬಹುದಾಗಿದೆ.

ಇದಕ್ಕಾಗಿ ಇಲ್ಲಿ ಕೊಡಲಾಗಿರುವ ಹೋಂಡಾ ವೆಬ್‌ಸೈಟ್ ಲಿಂಕ್‌ಗೆ ಭೇಟಿ ಕೊಡಿರಿ. ಅಲ್ಲದೆ ನಿಮ್ಮ ಚಾಸೀ ನಂಬರ್ ದಾಖಲಿಸಿ 'ಚೆಕ್' ಬಟನ್ ಒತ್ತಿದಾಗ ಫಲಿತಾಂಶ ಹೊರಬರಲಿದೆ. ವಿ.ಸೂ: ಚಾಸೀ ನಂಬರ್ ನಿಮ್ಮ ಆರ್‌ಸಿ ಅಥವಾ ವಾಹನ ದಾಖಲಾತಿ ಪುಸ್ತಕದಲ್ಲಿ ಉಲ್ಲೇಖವಾಗಿರುತ್ತದೆ.

Most Read Articles

Kannada
English summary
Honda Cars India Limited today announced a recall of certain variants of the Amaze sedan and Brio hatchback for a possible defect in the brake system.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X