ಹೋಂಡಾ ಕಾರುಗಳಿಗೆ ದರ ಏರಿಕೆ ಬಿಸಿ

By Nagaraja

ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಹೋಂಡಾ ಕಾರ್ಸ್ ಇಂಡಿಯಾ ವಾಹನ ತಯಾರಕ ಸಂಸ್ಥೆಯು ಮುಂಬರುವ ಎಪ್ರಿಲ್ ಒಂದರಿಂದ ತನ್ನೆಲ್ಲ ರೇಂಜ್ ಕಾರುಗಳಿಗೆ ದರ ಏರಿಕೆಗೊಳಿಸಲು ನಿರ್ಧರಿಸಿದೆ.

ಇತ್ತೀಚೆಗಷ್ಟೇ ಲಾಂಚ್ ಆಗಿರುವ ಹೋಂಡಾ ಸಿಟಿ ಸೆಡಾನ್ ಕಾರು ಸಹ ದರ ಏರಿಕೆ ಪಟ್ಟಿಯಲ್ಲಿ ಸೇರ್ಪಡೆಯಾಗಲಿರುವುದು ಅಚ್ಚರಿ ಮೂಡಿಸಿದೆ. ಪ್ರಸ್ತುತ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ಹೋಂಡಾ ಬ್ರಾಂಡ್‌ ಹೆಚ್ಚಿನ ಬೇಡಿಕೆ ಕಾಯ್ದುಕೊಂಡಿರುವುದು ಇಂತಹದೊಂದು ಬೆಳವಣಿಗೆಗೆ ಕಾರಣವಾಗಿರಬಹುದು.

Honda Cars

ಹಾಗಿದ್ದರೂ ಎಷ್ಟು ಪ್ರಮಾಣದ ದರ ಏರಿಕೆ ನಿಗದಿಯಾಗಿದೆ ಎಂಬುದನ್ನು ಕಂಪನಿ ಬಹಿರಂಗಪಡಿಸಲಿಲ್ಲ. ಈ ಸಂಬಂಧ ಸದ್ಯದಲ್ಲೇ ಘೋಷಣೆ ಹೊರಬೀಳಲಿದೆ.

ಬಜೆಟ್ ನೀತಿಯಿಂದ ಬಹುತೇಕ ಎಲ್ಲ ಕಾರು ಸಂಸ್ಥೆಗಳು ಬೆಲೆ ಕಡಿತಗೊಳಿಸಿದ್ದರೆ ಹೋಂಡಾ ಬೆಲೆಯೇರಿಕೆಗೊಳಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಪ್ರಸ್ತುತ ದೇಶದಲ್ಲಿ ಹೋಂಡಾ ಸಿಆರ್‌ವಿ, ಸಿಟಿ, ಅಮೇಜ್ ಹಾಗೂ ಸಿಟಿ ಕಾರುಗಳು ಉತ್ಪಾದನೆಯಾಗುತ್ತಿದೆ.

Most Read Articles

Kannada
English summary
In an unexpected announcement Honda Cars India has confirmed that it will put into effect a price hike across its range of cars.
Story first published: Monday, March 24, 2014, 13:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X