ಪ್ಯಾರಿಸ್ ಶೋದಲ್ಲಿ ಹೋಂಡಾ ಸಿವಿಕ್ ಟೈಪ್ ಆರ್ ಕಾನ್ಸೆಪ್ಟ್ ಜಲಕ್

By Nagaraja

ಬಹುನಿರೀಕ್ಷಿತ 2014 ಪ್ಯಾರಿಸ್ ಆಟೋ ಶೋ ಅಂಗವಾಗಿ ನೂತನ ಸಿವಿಕ್ ಟೈಪ್ ಆರ್ ಮಾದರಿಯ ಪ್ರಾಥಮಿಕ ಮಾಹಿತಿಗಳನ್ನು ಜಪಾನ್ ಮೂಲದ ದೈತ್ಯ ವಾಹನ ತಯಾರಕ ಸಂಸ್ಥೆಯಾಗಿರುವ ಹೋಂಡಾ ಬಯಲು ಮಾಡಿದೆ.

2014 ಪ್ಯಾರಿಸ್ ಆಟೋ ಶೋ ಅಕ್ಟೋಬರ್ ಮೊದಲ ವಾರದಲ್ಲಿ ಪ್ರದರ್ಶನ ಕಾಣಲಿದೆ. ಇದೇ ಸಂದರ್ಭದಲ್ಲಿ ಹೋಂಡಾದ ಹೊಸ ಸಿವಿಕ್ ಆರ್ ಟೈಪ್ ಯುರೋಪ್ ಮಾದರಿಯು ಪ್ರದರ್ಶನ ಕಾಣಲಿದೆ.


ಈ ನಡುವೆ ನೂತನ ಕಾನ್ಸೆಪ್ಟ್ ಕಾರೊಂದನ್ನು ಪ್ರದರ್ಶಿಸುವ ಇರಾದೆಯನ್ನು ಸಂಸ್ಥೆ ಹೊಂದಿದೆ. ಅಂದ ಹಾಗೆ 2015 ಸಿವಿಕ್ ಆರ್ ಟೈಪ್ 2.0 ಲೀಟರ್ ಫೋರ್ ಸಿಲಿಂಡರ್ ಎಂಜಿನ್ ಪಡೆದುಕೊಳ್ಳಲಿದೆ. ಇದು ಬರೋಬ್ಬರಿ 276 ಬಿಎಚ್‌ಪಿ ಉತ್ಪಾದಿಸಲಿದೆ.

ಹೊಸ ಸಿವಿಕ್ ಟೈಪ್ ಆರ್ ಮಾದರಿಯಲ್ಲಿ ಇದೇ ಮೊದಲ ಬಾರಿಗೆ ಪ್ಲಸ್ ಆರ್ ಮೋಡ್ ಲಭ್ಯವಿರಲಿದೆ. ಇದು ನಾಲ್ಕು ವಿಧಗಳಲ್ಲಿ ಚಾಲನೆಯನ್ನು ಹೊಂದಾಣಿಸುವ ತಂತ್ರಗಾರಿಕೆ ಪಡೆಯಲಿದೆ. ಇದರ ಪ್ಲಸ್ ಆರ್ ಮೋಡ್ ಚಾಲಕರಿಗೆ ರೇಸಿಂಗ್ ಕಾರು ಚಾಲನೆ ಮಾಡಿದ ಅನುಭವ ನೀಡಲಿದೆ.

onda Civic Type R Concept
Most Read Articles

Kannada
English summary
Honda Civic Type R Concept at 2014 Paris motor show
Story first published: Tuesday, September 30, 2014, 16:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X