ಸಿಟಿ, ಅಮೇಜ್ ಅಬ್ಬರ; ಹೋಂಡಾ ಮಾರಾಟ ದ್ವಿಗುಣ

By Nagaraja

ಜನಪ್ರಿಯ ಅಮೇಜ್ ಕಾಂಪಾಕ್ಟ್ ಸೆಡಾನ್ ಹಾಗೂ ಸಿಟಿ ಸೆಡಾನ್ ಕಾರುಗಳ ನೆರವಿನಿಂದ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (ಎಚ್‌ಸಿಐಎಲ್), 2014 ಮಾರ್ಚ್ ತಿಂಗಳ ಮಾರಾಟದಲ್ಲಿ ಭರ್ಜರಿ ವಹಿವಾಟು ದಾಖಲಿಸಿದೆ. ಕೇವಲ ಮಾಸಿಕವಾಗಿ ಮಾತ್ರವಲ್ಲದೆ ವಾರ್ಷಿಕವಾಗಿಯೂ ದೇಶಿಯ ಮಾರುಕಟ್ಟೆಯಲ್ಲಿ ಅತ್ಯಧಿಕ ಮಾರಾಟ ದಾಖಲಿಸುವಲ್ಲಿ ಹೋಂಡಾ ಯಶಸ್ಸನ್ನು ಕಂಡಿದೆ.

2014 ಮಾರ್ಚ್ ತಿಂಗಳಲ್ಲಿ 18,426 ಮಾರಾಟ ಕಂಡುಕೊಂಡಿರುವ ಹೋಂಡಾ, ಶೇಕಡಾ 83.4ರಷ್ಟು ಭರ್ಜರಿ ಏರಿಕೆ ಕಂಡಿದೆ. ಕಳೆದ ಬಾರಿಯಿದು 10,044 ಯುನಿಟ್ ಮಾತ್ರವಾಗಿತ್ತು.

honda city

ಇನ್ನು 2013-14 ಆರ್ಥಿಕ ಸಾಲಿನಲ್ಲಿ 1,34,339 ಯುನಿಟ್ ಮಾರಾಟ ಸಾಧಿಸಿರುವ ಜಪಾನ್ ಮೂಲದ ಈ ವಾಹನ ತಯಾರಕ ಸಂಸ್ಥೆಯು ಶೇಕಡಾ 83ರಷ್ಟು ಏರಿಕೆ ದಾಖಲಿಸಿದೆ. ಕಳೆದ ಬಾರಿ ಇದೇ ಅವಧಿಯಲ್ಲಿ ಇದು 73,483 ಯುನಿಟ್ ಮಾತ್ರವಾಗಿತ್ತು.

ಹೋಂಡಾ ಸಿಟಿ ಸೆಡಾನ್ ಹಾಗೂ ಅಮೇಜ್ ಕಾಂಪಾಕ್ಟ್ ಸೆಡಾನ್ ಕಾರುಗಳ ಮಾರಾಟದಲ್ಲಿ ಭಾರಿ ಬೇಡಿಕೆ ವ್ಯಕ್ತವಾಗಿರುವುದೇ ಮಾರಾಟ ದ್ವಿಗುಣವಾಗಲು ನೆರವಾಗಿದೆ.

2014 ಮಾರ್ಚ್ ತಿಂಗಳ ಮಾರಾಟ ಅಂಕಿಅಂಶ ಇಂತಿದೆ (ಯುನಿಟ್‌ಗಳಲ್ಲಿ):
ಬ್ರಿಯೊ - 1456
ಅಮೇಜ್ - 7374
ಸಿಟಿ - 9518
ಸಿಆರ್‌ವಿ - 78
ದೇಶಿಯ ಮಾರಾಟ - 18426
ರಫ್ತು - 587
ಒಟ್ಟು ಮಾರಾಟ - 19013

Most Read Articles

Kannada
English summary
The month of March 2014 saw the Honda Cars India Ltd (HCIL) sells 18,426 units, which is almost twice that of the 10,044 units sold in the corresponding month the previous year, registering a growth of 83.4 percent.
Story first published: Wednesday, April 2, 2014, 11:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X