ಹೋಂಡಾ ಸಿಟಿ ಹೈಬ್ರಿಡ್ ಜಪಾನ್‌ ಪ್ರವೇಶ; ಮುಂದೆ ಭಾರತ?

By Nagaraja

ಎಲ್ಲ ಹೊಸತನದಿಂದ ಕೂಡಿದ ಹೋಂಡಾ ಸಿಟಿ ಮಧ್ಯಮ ಗಾತ್ರದ ಸೆಡಾನ್ ಕಾರು ಈಗಾಗಲೇ ಮಾರುಕಟ್ಟೆಯಲ್ಲಿ ಅಲೆಯೆಬ್ಬಿಸುತ್ತಿರುವ ವಿಚಾರ ನಿಮ್ಮ ಗಮನಕ್ಕೆ ಬಂದಿರಬಹುದು.

ಹಾಗಿರುವಾಗ ತವರೂರಾದ ಜಪಾನ್‌ನಲ್ಲಿ ಹೋಂಡಾ ಸಂಸ್ಥೆಯು ತನ್ನ ಜನಪ್ರಿಯ ಸಿಟಿ ಮಾದರಿಯ ಹೈಬ್ರಿಡ್ ವರ್ಷನ್ ಅನ್ನು ಬಿಡುಗಡೆ ಮಾಡಿದೆ. ಇದು ವಾಹನ ಪ್ರೇಮಿಗಳಲ್ಲಿ ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.


ಸುಸ್ಥಿರ ಪರಿಸರಕ್ಕಾಗಿ ನಿಧಾನವಾಗಿ ಇಂಧನ ಚಾಲಿತ ವಾಹನಗಳಿಂದ ಭಿನ್ನವಾಗಿ ಮಿಶ್ರತಳಿಯ ಹೈಬ್ರಿಡ್ ಕಾರುಗಳು ಭವಿಷ್ಯದ ವಾಹನಗಳೆಂದೇ ಗುರುತಿಸಿಕೊಂಡಿದೆ. ಅಲ್ಲದೆ ಹೆಚ್ಚಿನ ಇಂಧನ ಕ್ಷಮತೆ ನೀಡುವಲ್ಲಿ ಇದು ಯಶಸ್ವಿಯಾಗಿದೆ.

ಜಪಾನ್‌ನಲ್ಲಿ ಬಿಡುಗಡೆಯಾಗಿರುವ ಹೊಸ ಹೋಂಡಾ ಸಿಟಿ ಹೈಬ್ರಿಡ್ ಕಾರು 'ಗ್ರೇಸ್' ಎಂದೆನಿಸಿಕೊಳ್ಳಲಿದೆ. ಪ್ರಸ್ತುತ ಇದು ಜಪಾನ್ ಮಾರುಕಟ್ಟೆಗಷ್ಟೇ ಸೀಮಿತವಾಗಿದೆ. ಹಾಗಿದ್ದರೂ ಯಾವುದೇ ಕ್ಷಣದಲ್ಲೂ ಬೇಕಾದರೂ ಇತರ ಮಾರುಕಟ್ಟೆ ಪ್ರವೇಶವನ್ನು ತಳ್ಳಿ ಹಾಕುವಂತಿಲ್ಲ.


ಹೊಸ ಹೋಂಡಾ ಗ್ರೇಸ್ ಹೈಬ್ರಿಡ್ ಕಾರು ಜಪಾನ್‌ನಲ್ಲಿ 10.14 ಲಕ್ಷ ರು.ಗಳಷ್ಟು ದುಬಾರಿಯೆನಿಸೆದ. ಇದರಲ್ಲಿ 1.5 ಲೀಟರ್ ಐ-ವಿಟೆಕ್ ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, 7 ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ ಜೊತೆಗೆ ಎಲೆಕ್ಟ್ರಿಕ್ ಮೋಟಾರು ಕೂಡಾ ಇರಲಿದೆ. ಇದರಲ್ಲಿ ಸ್ಪೋರ್ಟ್ ಹೈಬ್ರಿಡ್ ಇಂಟಿಲಿಜೆಟ್ ಡ್ಯುಯಲ್ ಕ್ಲಚ್ ಸಿಸ್ಟಂ ಸೌಲಭ್ಯ ಸಹ ಇರಲಿದೆ.

ಹೋಂಡಾ ಗ್ರೇಸ್ ಹೈಬ್ರಿಡ್ ಕಾರಿನ ಮಹತ್ವದ ವೈಶಿಷ್ಟ್ಯವೆಂದರೆ ಪ್ರತಿ ಲೀಟರ್‌ಗೆ 34.4 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಇದು ಈಗಿರುವ ಎಲ್ಲ ಹೈಬ್ರಿಡ್ ಕಾರಿಗಿಂತಲೂ ಹೆಚ್ಚಿನ ಇಂಧನ ಕ್ಷಮತೆ ನೀಡುವಲ್ಲಿ ಸಕ್ಷಮವಾಗಿರಲಿದೆ.


ಅಷ್ಟೇ ಅಲ್ಲದೆ ಫೋರ್ ವೀಲ್ ಡ್ರೈವ್ ಆಯ್ಕೆಯಲ್ಲೂ ಹೊಸ ಹೋಂಡಾ ಗ್ರೇಸ್ ಮಾದರಿ ಲಭ್ಯವಿರಲಿದೆ. ಇನ್ನು ಭಾರತದಲ್ಲಿರುವ ಸಿಟಿಗೆ ಸಮಾನವಾದ ವಿನ್ಯಾಸವನ್ನು ಇದರಲ್ಲಿ ಅನುಸರಿಸಲಾಗಿದ್ದು, ಕೆಲವೊಂದು ಕಾಸ್ಮೆಟಿಕ್ ಬದಲಾವಣೆ ಮಾತ್ರ ಕಂಡುಬಂದಿದೆ. ಇನ್ನು ಅನುಕೂಲತೆಗಾಗಿ ವೆಹಿಕಲ್ ಸ್ಟೆಬಿಲಿಟಿ ಅಸಿಸ್ಟ್, ಹಿಲ್ ಸ್ಟಾರ್ಟ್ ಅಸಿಸ್ಟ್, ಕರ್ಟೈನ್ ಏರ್ ಬ್ಯಾಗ್ ಮತ್ತು ಇನ್ನಿತರ ಹಲವಾರು ವೈಶಿಷ್ಟ್ಯಗಳು ಇದರಲ್ಲಿರಲಿದೆ.
honda grace hybrid
Most Read Articles

Kannada
English summary
Honda has recently launched its new City sedan in several countries. The design language has been readily accepted by previous City owners. It was launched for the very first time with a diesel mill, along with their tried and tested petrol engine.
Story first published: Wednesday, December 3, 2014, 16:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X