ಭಾರತದಲ್ಲಿ ಮಾರಾಟ ವೃದ್ಧಿ ನಿರೀಕ್ಷೆಯಲ್ಲಿ ಹೋಂಡಾ

By Nagaraja

ಜಪಾನ್ ಮೂಲದ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (ಎಚ್‌ಸಿಐಎಲ್) ಸಂಸ್ಥೆಯು ಕಳೆದ ಒಂದೆರಡು ವರ್ಷಗಳಲ್ಲಿ ಭಾರತ ಮಾರುಕಟ್ಟೆಯಲ್ಲಿ ಗಮನಾರ್ಹ ಸಾಧನೆ ಮಾಡಿದೆ.

ಅಮೇಜ್ ಮೂಲಕ ದೇಶದಲ್ಲಿ ಸಂಸ್ಥೆಯ ಮೊತ್ತ ಮೊದಲ ಡೀಸೆಲ್ ಎಂಜಿನ್ ಪರಿಚಯಪಡಿಸಿದ್ದ ಹೋಂಡಾ ಮುಂದಿನ ದಿನಗಳಲ್ಲಿ ಗಮನಾರ್ಹ ಸಾಧನೆ ಮಾಡಿತ್ತು. ತದಾ ಬಳಿಕ ಸಿಟಿ ಸೆಡಾನ್ ಹಾಗೂ ಮೊಬಿಲಿಯೊ ಎಂಪಿವಿ ಮೂಲಕ ಹ್ಯಾಟ್ರಿಕ್ ಯಶಸ್ಸು ಆಚರಿಸಿಕೊಂಡಿರುವ ಸಂಸ್ಥೆಯು ಈಗ ದೀರ್ಘ ದೃಷ್ಟಿಯನ್ನು ಹಾಯಿಸಿದೆ.

ನೀವು ಹೋಂಡಾ ಕಾರಿನ ಹುಡುಕಾಟದಲ್ಲಿದ್ದೀರಾ?

  • ಬ್ರಿಯೊ
  • ಅಮೇಜ್
  • ಮೊಬಿಲಿಯೊ
  • ಸಿಟಿ
  • ಸಿಆರ್ ವಿ

Honda
ಈ ಎಲ್ಲದರ ಮೂಲಕ ಸಂಸ್ಥೆಯು 2014 ಎಪ್ರಿಲ್ ತಿಂಗಳಿಂದ ಅಕ್ಟೋಬರ್ ವರೆಗೆ ಶೇಕಡಾ 43ರಷ್ಟು ಏರಿಕೆ ದಾಖಲಿಸಿದೆ. ಈಗ ಡೀಲರ್ ಶಿಪ್ ಜಾಲವನ್ನು ಹೆಚ್ಚಿಸುವ ಮೂಲಕ ಸಂಸ್ಥೆಯು ಇನ್ನಷ್ಟು ಮಾರಾಟ ಕುದುರಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

ಶೇಕಡಾ 35ರಷ್ಟು ವಿತರಕ ಜಾಲವನ್ನು ಹೆಚ್ಚಿಸುವ ಇರಾದೆಯ ಹೊಂದಿರುವ ಸಂಸ್ಥೆಯು 2015ರ ವೇಳೆಯಾಗುವ 150 ನಗರಗಳಲ್ಲಾಗಿ 230 ಡೀಲರ್‌ಶಿಪ್ ತೆರೆಯುವ ಯೋಜನೆ ಹೊಂದಿದೆ.

ಅಷ್ಟೇ ಅಲ್ಲದೆ ಇತ್ತೀಚೆಗಷ್ಟೇ 200ನೇ ಡೀಲರ್ ಶಿಪ್ ತೆರೆದುಕೊಂಡಿದ್ದ ಹೋಂಡಾ 2016 ಮಾರ್ಚ್ ವೇಳೆಯಾಗುವ ಇನ್ನಷ್ಟು 100 ಶೋ ರೂಂ ತೆರೆದುಕೊಳ್ಳುವ ಇರಾದೆ ಹೊಂದಿದೆ.

Most Read Articles

Kannada
English summary
Honda Cars India Limited (HCIL), is focusing to expand its stance in the country. The expansion drive includes increasing dealership network, production capacity and the product portfolio.
Story first published: Friday, November 28, 2014, 14:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X