ರಾಜ್ಯ ಪೊಲೀಸ್ ಇಲಾಖೆಯ ಬಲವೃದ್ಧಿಸಿದ ಬೊಲೆರೊ

By Nagaraja

ಬೆಂಗಳೂರು ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರವು 57 ಹೊಸ ಗಸ್ತು ವಾಹನಗಳನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಿದೆ. ಬುಧವಾರ ವಿಧಾನಸೌಧ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಾಲಾಗಿ ನಿಂತ ವಾಹನಗಳನ್ನು ಸೇವೆ ಮುಕ್ತಗೊಳಿಸಿದರು.

ಮಹೀಂದ್ರ ಬೊಲೆರೊ ವಿಶೇಷ ಆವೃತ್ತಿ

ಪ್ರಮುಖವಾಗಿಯೂ ಪೊಲೀಸ್ ಗಸ್ತು ವ್ಯವಸ್ಥೆಯನ್ನು ಸುಧಾರಿಸುವುದು; ಈ ಮೂಲಕ ಅಪರಾಧ ಚಟುವಟಿಕೆಗಳಿಗೆ ಮಟ್ಟ ಹಾಕುವುದು ಸರಕಾರದ ಉದ್ದೇಶವಾಗಿದೆ. ಇದಕ್ಕಾಗಿ ಐದು ಕೋಟಿ ರು. ವೆಚ್ಚದಲ್ಲಿ 57 ಹೊಯ್ಸಳ ವಾಹನಗಳನ್ನು ಬುಧವಾರ ಪೊಲೀಸ್ ಇಲಾಖೆಗೆ ಹಸ್ತಾಂತರಿಸಿದೆ. ಇದರೊಂದಿಗೆ ನಗರದಲ್ಲಿರುವ ಹೊಯ್ಯಳ ವಾಹನಗಳ ಸಂಖ್ಯೆ 180ಕ್ಕೆ ಏರಿಕೆಯಾಗಿದೆ.

ರಾಜ್ಯ ಪೊಲೀಸ್ ಇಲಾಖೆಯ ಬಲವೃದ್ಧಿಸಿದ ಬೊಲೆರೊ

ಪೊಲೀಸ್ ಇಲಾಖೆಗೆ ಒಟ್ಟು 103 ವಾಹನಗಳನ್ನು ಖರೀದಿಸಿದ್ದು, 68 ಬೊಲೆರೊ ಹಾಗೂ 45 ಮಾರುತಿ ಇಕೊ ವಾಹನಗಳು ಸೇರಿವೆ ಎಂದು ಇಲಾಖೆ ತಿಳಿಸಿದೆ. ಈ ಪೈಕಿ 57 ಬೊಲೆರೊ ವಾಹನಗಳನ್ನು ಗಸ್ತು ಕಾರ್ಯಾಚರಣೆಗೆ ವಹಿಸಲಾಗಿದೆ.

ರಾಜ್ಯ ಪೊಲೀಸ್ ಇಲಾಖೆಯ ಬಲವೃದ್ಧಿಸಿದ ಬೊಲೆರೊ

ದೇಶದ ಅತ್ಯಂತ ಜನಪ್ರಿಯ ಕ್ರೀಡಾ ಬಳಕೆಯ ವಾಹನಗಳಲ್ಲಿ (ಎಸ್‌ಯುವಿ) ಒಂದಾಗಿರುವ ಮಹೀಂದ್ರ ಬೊಲೆರೊ, ಏಳರಿಂದ ಹತ್ತು ಜನರನ್ನು ಹೊತ್ಯೊಯ್ಯುವ ಸಾಮರ್ಥ್ಯ ಹೊಂದಿದೆ. ಇದು ಹವಾ ನಿಯಂತ್ರಿತ ಹಾಗೂ ಎಸಿ ರಹಿತ ವೆರಿಯಂಟ್‌ಗಳಲ್ಲಿ ಲಭ್ಯವಿದೆ.

ರಾಜ್ಯ ಪೊಲೀಸ್ ಇಲಾಖೆಯ ಬಲವೃದ್ಧಿಸಿದ ಬೊಲೆರೊ

ಮಹೀಂದ್ರ ಅರ್ಮಡಾ ಗ್ರಾಂಡ್‌ನಿಂದ ಮೂಲ ವಿನ್ಯಾಸ ಪಡೆದುಕೊಂಡಿರುವ ಮೊದಲ ತಲೆಮಾರಿನ ಬೊಲೆರೊದಲ್ಲಿ ಪ್ಯೊಜೊದ 2.5 ಲೀಟರ್ ಐಡಿಐ ಎಂಜಿನ್ (75 ಅಶ್ವಶಕ್ತಿ) ಆಳವಡಿಕೆಯಾಗಿತ್ತು. ಬಳಿಕ ಕೆಲವೊಂದು ಬದಲಾವಣೆಗಳೊಂದಿಗೆ ಎರಡನೇ ತಲೆಮಾರಿನ ಮಹೀಂದ್ರ ಬೊಲೆರೊ ಪರಿಚಯಿಸಲಾಗಿತ್ತು. ಇದರಲ್ಲಿ ಪ್ರಮುಖವಾಗಿಯೂ ಎಂಜಿನ್ ಮಾರ್ಪಾಟು ಕಂಡುಬಂದಿತ್ತು. ಇದರಲ್ಲಿ 72 ಅಶ್ವಶಕ್ತಿ ಉತ್ಪಾದಿಸುವ 2,523 ಸಿಸಿ ಟರ್ಬೊ ಚಾರ್ಜ್ಡ್ ಡೈರಕ್ಟ್ ಡೀಸೆಲ್ ಎಂಜಿನ್ ಬಳಕೆಯಾಗಿತ್ತು.

ಮೈಲೇಜ್

ಮೈಲೇಜ್

ಇದರ ಪ್ರಮುಖ ವೈಶಿಷ್ಟ್ಯವೆಂದರೆ ಇಂಧನ ಕ್ಷಮತೆ. ಇದು ಎಸಿ ಆನ್ ಮಾಡಿದರೂ ನಗರ ಪ್ರದೇಶದಲ್ಲಿ ಪ್ರತಿ ಲೀಟರ್‌ಗೆ 12.2 ಕೀ.ಮೀ. ಹಾಗೆಯೇ ಹೆದ್ದಾರಿಗಳಲ್ಲಿ ಲೀಟರ್‌ಗೆ 14 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ. ಇನ್ನುಳಿದಂತೆ ಮ್ಯಾನುವಲ್ ಫೋರ್ ವೀಲ್ ಡ್ರೈವ್ ಲಭ್ಯವಿರುತ್ತದೆ.

ವಿಶಿಷ್ಟತೆ

ವಿಶಿಷ್ಟತೆ

ಇದರ ಶಕ್ತಿಶಾಲಿ ಫ್ರಂಟ್ ಬಂಪರ್, ಎಂ2ಡಿಐಸಿಆರ್ ಎಂಜಿನ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಕರ್ಷಕ ಇಂಟಿರಿಯರ್ ಹಾಗೂ ರಿಯರ್ ವಾಶ್ ಆಂಡ್ ವೈಪ್ ಪ್ರಮುಖ ವೈಶಿಷ್ಟ್ಯವಾಗಿರಲಿದೆ.

ಏನಿದೆ ಹೊಸತು?

ಏನಿದೆ ಹೊಸತು?

ಹೊಸತಾದ ಹಾಕ್ ಐ ಹೆಡ್‌ಲ್ಯಾಂಪ್

ಆಕ್ರಮಣಕಾರಿ ನೋಟ,

ಕ್ಲಾಸಿಕ್ ಫ್ರಂಟ್ ಗ್ರಿಲ್,

ಶಕ್ತಿಶಾಲಿ ಮಸಲ್ ಬಂಪರ್,

ಆಕರ್ಷಕ ಗೇರ್ ಶಿಫ್ಟ್,

ಸಮಕಾಲೀನ ದೇಹ ವಿನ್ಯಾಸ,

ಔಟ್‌ಸೈಡ್ ರಿಯರ್ ವ್ಯೂ ಮಿರರ್,

ಸ್ಪೇರ್ ವೀಲ್ ಕವರ್

ಒಳಮೈ

ಒಳಮೈ

ಸುಧಾರಿತ ಡಿಜಿಟಲ್ ಡಿಸ್‌ಪ್ಲೇ,

ವಾಯ್ಸ್ ಮೆಸೇಜ್ ಸಿಸ್ಟಂ,

ಚಾಲಕ ಮಾಹಿತಿ ವ್ಯವಸ್ಥೆ,

ಮೈಕ್ರೋ ಹೈಬ್ರಿಡ್ ಸಿಸ್ಟಂ,

ಎಂಜಿನ್ ಇಂಮೊಬಿಲೈಜರ್

ಅನುಕೂಲ

ಅನುಕೂಲ

ಪವರ್ ಸ್ಟೀರಿಂಗ್,

ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ,

ವಾಯ್ಸ್ ಮೆಸೇಜ್ ವ್ಯವಸ್ಥೆ,

ಕೀಲೆಸ್ ಎಂಟ್ರಿ,

ರಿಮೋಟ್ ಫ್ಯೂಯಲ್ ಲಿಡ್ ಓಪನರ್,

ರಿಯರ್ ವಾಶ್ ಆಂಡ್ ವೈಪ್

ಆರಾಮದಾಯಕ

ಆರಾಮದಾಯಕ

ಹೆಡ್ ರೆಸ್ಟ್,

ಹಿಂದುಗಡೆ ಪ್ರಯಾಣಿಕರಿಗೂ ಸೆಂಟರ್ ಆರ್ಮ್ ರೆಸ್ಟ್

ವಿಶಾಲವಾದ ಕ್ಯಾಬಿನ್,

ಎಸಿ

ಕಲರ್ಸ್

ಕಲರ್ಸ್

ಜಾವಾ ಬ್ರೌನ್,

ಟೊರೆಡೋರ್ ರೆಡ್,

ಡೈಮಂಡ್ ವೈಟ್,

ಫಿರಿ ಬ್ಲ್ಯಾಕ್,

ರಾಕಿ ಬೀಜ್

ಬೊಲೆರೊ ಮಾದರಿಗಳು

ಬೊಲೆರೊ ಮಾದರಿಗಳು

ಝಡ್‌ಎಲ್‌ಎಕ್ಸ್

ಎಸ್‌ಎಲ್‌ಎಕ್ಸ್

ಎಸ್‌ಎಲ್‌ಇ

ಇಎಕ್ಸ್

ಡಿಐ

ಪ್ಲಸ್

ಪ್ಲಸ್ ಬಿಎಸ್4

ಅಂಬ್ಯುಲನ್ಸ್

ಬೊಲೆರೊ ಸ್ಪೆಷಲ್ ಎಡಿಷನ್

ಸುರಕ್ಷತೆ

ಸುರಕ್ಷತೆ

ರಿಯರ್ ವಾಶ್ ಆಂಡ್ ವೈಪ್

ಚೈಲ್ಡ್ ಲಾಕ್

ನ್ಯೂ ಮಸಲರ್ ಬಂಪರ್

ಇಂಜಿನ್ ಇಂಮೊಬಿಲೈಜರ್

ಹೆಡ್‌ರೈಸ್ಟ್

ಎಂಜಿನ್

ಎಂಜಿನ್

2523 ಸಿಸಿ ಎಂ2ಡಿಐಸಿಆರ್ (m2DiCR) ಎಂಜಿನ್

ಮ್ಯಾಕ್ಸಿಮಮ್ ಪವರ್ : 46.3 kW @ 3200rpm

ಮ್ಯಾಕ್ಸಿಮಮ್ ಟಾರ್ಕ್: 195 NM @ 1400-2200RPM

ಆಯಾಮ: ಉದ್ದ 4107 X ಅಗಲ 1745 X ಎತ್ತರ 1880

ವೀಲ್‌ಬೇಸ್ 2680

ಕ್ಲಚ್ - ಹೈಡ್ರಾಲಿಕ್

ಬ್ರೇಕ್ - ಫ್ರಂಟ್ - ಡಿಸ್ಕ್, ರಿಯರ್ - ಡ್ರಮ್

ಗ್ರೌಂಡ್ ಕ್ಲಿಯರನ್ಸ್ - 180 ಎಂಎಂ

ಗೇರ್ ಬಾಕ್ಸ್ - ಎನ್‌ಜಿಟಿ 520, 5 ಸ್ಪೀಡ್

ದರ ಮಾಹಿತಿ (ಬೆಂಗಳೂರು ಎಕ್ಸ್ ಶೋ ರೂಂ)

ದರ ಮಾಹಿತಿ (ಬೆಂಗಳೂರು ಎಕ್ಸ್ ಶೋ ರೂಂ)

ಅಂದ ಹಾಗೆ ಮಹೀಂದ್ರ ಬುಲೆರೊ ಅಂಬುಲೆನ್ಸ್ ನಾನ್ ಎಸಿ ಬಿಎಸ್‌3 ವೆರಿಯಂಟ್ ದರ 5.44 ಲಕ್ಷ ರು.ಗಳಿಂದ ಆರಂಭವಾಗಿ ಟಾಪ್ ಎಂಡ್ ಝಡ್‌ಎಲ್‌ಎಕ್ಸ್ ಬಿಎಸ್4 ವೆರಿಯಂಟ್‌ 7.54 ಲಕ್ಷ ರು.ಗಳಷ್ಟು ದುಬಾರಿಯೆನಿಸಿದೆ.

Most Read Articles

Kannada
Story first published: Thursday, May 22, 2014, 11:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X