ಹೈಬ್ರಿಡ್, ಎಲೆಕ್ಟ್ರಿಕ್ ವಾಹನಗಳಿಗೆ 12 ಲಕ್ಷ ವರೆಗೂ ಸಬ್ಸಿಡಿ

By Nagaraja

'ರಾಷ್ಟ್ರೀಯ ಎಲೆಕ್ಟ್ರಿಕ್ ಮೊಬಿಲಿಟಿ ಮಿಷನ್ ಯೋಜನೆ 2020' ಅಂಗವಾಗಿ ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ಕಾರುಗಳಿಗೆ ರು. 12 ಲಕ್ಷ ವರೆಗೂ ಸಬ್ಸಿಡಿ ದೊರಕಲಿದೆ. ಇವೆಲ್ಲಕ್ಕೂ ಕೇಂದ್ರದಲ್ಲಿ ನೂತನ ಸರಕಾರ ಅಧಿಕಾರ ಗದ್ದುಗೇರಬೇಕಾಗಿದೆ.

ಬೃಹತ್ ಕೈಗಾರಿಕೋದ್ಯಮ ಸಚಿವಾಲಯ ಹಾಗೂ ವಾಹನೋದ್ಯಮ ವರದಿಗಳ ಪ್ರಕಾರ ಎಲೆಕ್ಟ್ರಿಕ್ ಹಾಗೂ ವಿದ್ಯುತ್ ಚಾಲಿತ ವಾಹನಗಳಿಗೆ ರು. 8000ರಿಂದ ಪ್ರಾರಂಭಇಸಿ 12 ಲಕ್ಷ ರು.ಗಳ ವರೆಗೆ ಸಬ್ಸಿಡಿ ಲಭಿಸಲಿದೆ.

mahindra reva

ಬಲ್ಲ ಮೂಲಗಳ ಪ್ರಕಾರ 7.5 ಲಕ್ಷ ರು. ಅಥವಾ ಅದಕ್ಕಿಂತ ಮೇಲ್ಪಟ್ಟ ಹೈಬ್ರಿಡ್ ಹಾಗೂ ಎಸ್‌ಯುವಿ ಕಾರುಗಳಿಗೆ 1.5 ಲಕ್ಷ ರು.ಗಳ ವರೆಗೆ ಸಬ್ಸಿಡಿ ದೊರಕಲಿದೆ. ಹಾಗೆಯೇ 40,000 ರು. ಅಥವಾ ಅದಕ್ಕಿಂತಲೂ ಮೇಲ್ಪಟ್ಟ ಹೈಬ್ರಿಡ್ ಹಾಗೂ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ರು. 30,000 ವರೆಗೆ ಸಬ್ಸಿಡಿ ಸಿಗಲಿದೆ.

ಅದೇ ಹೊತ್ತಿಗೆ ಹೈಬ್ರಿಡ್ ಬಸ್ಸುಗಳಿಗೆ ರು. 12 ಲಕ್ಷ ವರೆಗೆ ಸಬ್ಸಿಡಿ ದೊರಕಲಿದೆ. ಅಂತೆಯೇ ಹಗುರ ವಾಣಿಜ್ಯ ವಾಹನಗಳು ರು. 1 ಲಕ್ಷ ವರೆಗೂ ಸಬ್ಸಿಡಿ ಪಡೆಯಲಿದೆ. ಆದರೆ ಸಬ್ಸಿಡಿಯ ನೈಜ ಪ್ರಯಾಣವು ಆ ನಿರ್ದಿಷ್ಟ ಹೈಬ್ರಿಡ್ ಅಥವಾ ಎಲೆಕ್ಟ್ರಿಕ್ ಕಾರಿನ ದರ ಹಾಗೂ ಬ್ಯಾಟರಿ ಅವಲಂಬಿಸಿರಲಿದೆ.

ಈ ಸಂಬಂಧ ಬೃಹತ್ ಕೈಗಾರಿಕೋದ್ಯಮ ಸಚಿವಾಲಯವು ಕೇಂದ್ರ ಸರಕಾರಕ್ಕೆ ವರದಿಯನ್ನು ಸಲ್ಲಿಸಿದ್ದು, ಸಂಪುಣ ಸಚಿವಾಲಯದ ಅಂತಿಮ ಅನುಮೋದನೆಗಾಗಿ ಕಾಯುತ್ತಿದೆ. ಇದು ಮಹೀಂದ್ರ ರೇವಾಗಳಂತಹ ಸಂಸ್ಥೆಗಳಿಗೆ ಎಲೆಕ್ಟ್ರಿಕ್ ವಾಹನಗಳನ್ನು ಇನ್ನಷ್ಟು ಉತ್ಪಾದಿಸಲು ಪ್ರೋತ್ಸಾಹಿಸಲಿದೆ.

Most Read Articles

Kannada
English summary
The National Electric Mobility Mission Plan 2020 is expected to take off once the new government takes power at the Centre.
Story first published: Saturday, April 19, 2014, 11:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X