ಹೊಸ ವರ್ಷಕ್ಕೆ ಹ್ಯುಂಡೈ ಕಾಂಪಾಕ್ಟ್ ಎಸ್‌ಯುವಿ, ಕ್ರಾಸೋವರ್

By Nagaraja

2014ನೇ ಸಾಲಿನ ಅಂತ್ಯವಾಗುತ್ತಿರುವಂತೆಯೇ ಎಲ್ಲರೂ ಹೊಸ ವರ್ಷದ ನಿರೀಕ್ಷೆಯಲ್ಲಿದ್ದಾರೆ. ವಾಹನ ಜಗತ್ತು ಕೂಡಾ ಇದರಿಂದ ಹೊರತಾಗಿಲ್ಲ. ಹೊಸ ವರ್ಷದಲ್ಲಿ ಬಿಡುಗಡೆಯಾಗಲಿರುವ ಹೊಸ ಹೊಸ ಕಾರುಗಳು ಯಾವುವು ಎಂಬಿತ್ಯಾದಿ ಪ್ರಶ್ನೆಗಳು ವಾಹನ ಪ್ರೇಮಿಗಳಲ್ಲಿ ಬಹಳ ಕುತೂಹಲವನ್ನುಂಟು ಮಾಡಿದೆ.

ಇದೀಗ ಬಂದ ಮಾಹಿತಿಯ ಪ್ರಕಾರ ದೇಶದ ಎರಡನೇ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಹ್ಯುಂಡೈ, ಮುಂದಿನ ವರ್ಷ ಎರಡು ಕೊಡುಗೆಗಳನ್ನು ದೇಶದ ಗ್ರಾಹಕರಿಗೆ ನೀಡಲಿದೆ. ಅವುಗಳೆಂದರೆ ಹ್ಯುಂಡೈ ಐಎಕ್ಸ್25 ಕಾಂಪಾಕ್ಟ್ ಎಸ್‌ಯುವಿ ಹಾಗೂ ಹ್ಯುಂಡೈ ಎಲೈಟ್ ಐ20 ಕ್ರಾಸೋವರ್.


ಇವೆರಡು 2015ನೇ ಸಾಲಿನ ಮೊದಲನೇ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಭಾರತೀಯ ವಾಹನೋದ್ಯಮದಲ್ಲಿ ಕ್ರಾಸೋವರ್ ವಿಭಾಗ ನಿಧಾನವಾಗಿ ಜನಪ್ರಿಯತೆ ಗಿಟ್ಟಿಸತೊಡಗಿದೆ. ಇದರಂತೆ ಪ್ರಮುಖ ವಾಹನ ತಯಾರಕ ಸಂಸ್ಥೆಗಳು ಇತ್ತ ಹೆಚ್ಚಿನ ಗಮನ ಕೇಂದ್ರಿಕರಿಸಿದೆ. ಹ್ಯುಂಡೈನಿಂದ ಬಿಡುಗಡೆಯಾಗಿರುವ ಕ್ರಾಸೋವರ್ ಐ20 ಕ್ರಾಸ್ ಎಂದು ಹೆಸರಿಸಿಕೊಳ್ಳುವ ಸಾಧ್ಯತೆಯಿದ್ದು, ಕಾರಿನ ಟೆಸ್ಟಿಂಗ್ ಪ್ರಕ್ರಿಯೆ ಭರದಿಂದ ಸಾಗುತ್ತಿದೆ.

ಇನ್ನೊಂದೆಡೆ ಕಾಂಪಾಕ್ಟ್ ಎಸ್‌ಯುವಿ ಕಳೆದ ಒಂದೆರಡು ವರ್ಷಗಳಿಂದ ಅತಿ ಹೆಚ್ಚಿನ ಜನಪ್ರಿಯತೆ ಗಿಟ್ಟಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಫೋರ್ಡ್ ಇಕೊಸ್ಪೋರ್ಟ್, ರೆನೊ ಡಸ್ಟರ್ ಪ್ರತಿಸ್ಪರ್ಧಿಯನ್ನು ಕಣಕ್ಕಿಳಿಸಲು ಹ್ಯುಂಡೈ ದಿಟ್ಟ ಹೆಜ್ಜೆಯನ್ನಿಟ್ಟಿದೆ.

elite i20

ಇದು ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿರಲಿದೆ. ಈ ಪೈಕಿ 1.6 ಲೀಟರ್ ಪೆಟ್ರೋಲ್ ಎಂಜಿನ್ 123 ಅಶ್ವಶಕ್ತಿ ಉತ್ಪಾದಿಸಲಿದೆ. ಅದೇ ರೀತಿ ಹೆಚ್ಚು ಶಕ್ತಿಶಾಲಿ 2.0 ಲೀಟರ್ (158 ಅಶ್ವಶಕ್ತಿ) ಎಂಜಿನ್ ಕೂಡಾ ಇರಲಿದೆ. ಇವೆರಡು ಟು ವೀಲ್ ಜೊತೆಗೆ ಫೋರ್ ವೀಲ್ ಡ್ರೈವ್ ಹೊಂದಿರುವ ಸಾಧ್ಯತೆಯಿದೆ. ಇನ್ನು ಕೊರಿಯಾ ಮೂಲದ ಈ ಸಂಸ್ಧೆಯು 1.6 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡುವ ಸಾಧ್ಯತೆಯಿದೆ.

ರು. 340ರಿಂದ ಬೈಕನರ್ ಬೈಕರ್ ಬೈಕಿಂಗ್ ಗ್ಲೋವ್ಸ್ - ತ್ವರೆ ಮಾಡಿ

Most Read Articles

Kannada
English summary
Hyundai plan to launch crossover version of its premium hatchback Elite i20 and ix25 Compact SUV in Q1 2015. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X