ಹ್ಯುಂಡೈ ಕಾಂಪಾಕ್ಟ್ ಎಸ್‌ಯುವಿ 2015ರಲ್ಲಿ ಲಾಂಚ್

By Nagaraja

ಈ ಮೊದಲೇ ತಿಳಿಸಿರುವಂತೆಯೇ ದೇಶಕ್ಕೆ ನೂತನ ಕಾಂಪಾಕ್ಟ್ ಎಸ್‌ಯುವಿ ಪರಿಚಯಿಸಲು ಹ್ಯುಂಡೈ ಇಂಡಿಯಾ ಸಿದ್ಧತೆ ನಡೆಸುತ್ತಿದೆ. ಆದರೆ ಈ ಮಹತ್ತರ ಕಾರು ಯಾವುದು ಎಂಬುದಕ್ಕೆ ಇದುವರೆಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

ಈ ಬಗ್ಗೆ ಹೇಳಿಕೆ ಕೊಟ್ಟಿರುವ ಹ್ಯುಂಡೈ ಮಾರ್ಕೆಟಿಂಗ್ ಹಾಗೂ ಸೇಲ್ಸ್ ಹಿರಿಯ ಉಪಾಧ್ಯಕ್ಷರಾಗಿರುವ ರಾಕೇಶ್ ಶ್ರೀವಾಸ್ತವಾ, ಹ್ಯುಂಡೈ ಕಾಂಪಾಕ್ಟ್ ಎಸ್‌ಯುವಿ 2015ರ ವೇಳೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದಿದ್ದಾರೆ.

Hyundai Compact SUV

ಹ್ಯುಂಡೈ ನೂತನ ಮಾದರಿ ಐಎಕ್ಸ್25 ಆಗುವ ಎಲ್ಲ ಸಾಧ್ಯತೆಗಳಿವೆ. ಕಳೆದ ಎಪ್ರಿಲ್ ತಿಂಗಳಲ್ಲಿ ನಡೆದ ಬೀಜಿಂಗ್ ಮೋಟಾರು ಶೋದಲ್ಲಿ ಐಎಕ್ಸ್35 ಸಣ್ಣ ಮಾದರಿಯಾಗಿರುವ ಐಎಕ್ಸ್25 ಆವೃತ್ತಿಯನ್ನು ಅನಾವರಣಗೊಳಿಸಲಾಗಿತ್ತು.

ಹಾಗಿದ್ದರೂ ಚೀನಾದ ಹೊರಗಡೆ ಈ ಬಹುನಿರೀಕ್ಷಿತ ಕಾರಿನ ಬಿಡುಗಡೆಯನ್ನು ಇದುವರೆಗೆ ಘೋಷಿಸಿಲ್ಲ. ಅಷ್ಟೇ ಅಲ್ಲದೆ ನಾಲ್ಕು ಮೀಟರ್‌ಗಿಂತಲೂ ಸ್ವಲ್ಪ ದೊಡ್ಡದಾಗಿರುವುದರಿಂದ ಇದಕ್ಕೆ ಭಾರತದಲ್ಲಿ ತೆರಿಗೆ ವಿನಾಯಿತಿ ಸಿಗಲು ಸಾಧ್ಯವಿಲ್ಲ. ಹಾಗಿದ್ದರೂ ಡಸ್ಟರ್ ಯಶಸ್ಸಿನಿಂದ ಸ್ಪೂರ್ತಿ ಪಡೆಯಲಿರುವ ಹ್ಯುಂಡೈ ಈ ಬಹುನಿರೀಕ್ಷಿತ ಕಾರನ್ನು ದೇಶಕ್ಕೆ ಪರಿಚಯಿಸಿದ್ದರೂ ಅಚ್ಚರಿಯೇನಿಲ್ಲ.

ಅಂದ ಹಾಗೆ ಹ್ಯುಂಡೈ ಐಎಕ್ಸ್25, 4,270 ಎಂಎಂ ಉದ್ದ, 1,780 ಎಂಎಂ ಅಗಲ, 1,630 ಎಂಎಂ ಎತ್ತರ ಹಾಗೂ 1,590 ಎಂಎಂ ವೀಲ್ ಬೇಸ್ ಪಡೆದುಕೊಂಡಿದೆ. ಇದನ್ನು ಸಂಸ್ಥೆಯ ಲೇಟೆಸ್ಟ್ ಫ್ಯೂಯಿಡಿಕ್ 2.0 ಡಿಸೈನ್ ತತ್ವಶಾಸ್ತ್ರದಲ್ಲಿ ಅಭಿವೃದ್ಧಿಗೊಳಿಸಲಾಗಿದೆ.

ಪ್ರಸ್ತುತ ದೇಶದ ವಾಹನ ಮಾರುಕಟ್ಟೆಯಲ್ಲಿ ಕಾಂಪಾಕ್ಟ್ ಎಸ್‌ಯುವಿ ಕಾರುಗಳಿಗೆ ಅತಿ ಹೆಚ್ಚಿನ ಬೇಡಿಕೆಯಿರುವುದರಿಂದ ಹ್ಯುಂಡೈ ಮಾದರಿಯು ಅತಿ ಹೆಚ್ಚಿನ ಯಶಸ್ಸು ಸಾಧಿಸುವ ಸಾಧ್ಯತೆಯಿದೆ.

Most Read Articles

Kannada
English summary
Hyundai India will enter the the very active compact SUV segment in the country with the launch of a new, yet unnamed, model in 2015. The confirmation comes from Rakesh Srivastava, the company's Senior Vice President of Marketing and Sales.
Story first published: Wednesday, June 4, 2014, 10:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X