ದೇಶಕ್ಕೆ ಹ್ಯುಂಡೈ ಐಎಕ್ಸ್25 ಮಿನಿ ಎಸ್‌ಯುವಿ ಗ್ಯಾರಂಟಿ

By Nagaraja

ದಕ್ಷಿಣ ಕೊರಿಯಾ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ಹ್ಯುಂಡೈ ಸಂಸ್ಥೆಯು, ಭಾರತಕ್ಕೆ ಐಎಕ್ಸ್25 ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನವನ್ನು (ಎಸ್‌ಯುವಿ) ಬಿಡುಗಡೆ ಮಾಡುವುದಾಗಿ ಖಚಿತಪಡಿಸಿದೆ.

ದೇಶದ ಎರಡನೇ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಹ್ಯುಂಡೈ, ಗುಣಮಟ್ಟದ ಕಾರುಗಳನ್ನು ನೀಡುವುದರಲ್ಲಿ ಸದಾ ಒಂದು ಹೆಜ್ಜೆ ಮುಂದಿದೆ.

hyundai ix25

ಇದೀಗ ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆಯಿರುವ ಕಾಂಪಾಕ್ಟ್ ಎಸ್‌ಯುವಿ ವಿಭಾಗಕ್ಕೆ ಕಾಲಿರಿಸಲಿದೆ. ಪ್ರಮುಖವಾಗಿಯೂ ಇದು ರೆನೊ ಡಸ್ಟರ್ ಹಾಗೂ ಫೋರ್ಡ್ ಇಕೊಸ್ಪೋರ್ಟ್ ಮಾದರಿಗಳಿಗೆ ಸ್ಪರ್ಧಿಯೆನಿಸಲಿದೆ.

ವರದಿಗಳ ಪ್ರಕಾರ ಹೊಸ ವರ್ಷದಲ್ಲಿ ಯಾವುದೇ ದಿನವಾದರೂ ಹ್ಯುಂಡೈ ಐಎಕ್ಸ್25 ಬಿಡುಗಡೆ ಮಾಡುವ ಮೂಲಕ ಅಚ್ಚರಿ ಮೂಡಿಸಲಿದೆ. ಕೇವಲ ಕಾಂಪಾಕ್ಟ್ ಎಸ್‌ಯುವಿ ಮಾತ್ರವಲ್ಲದೆ ಕ್ರಾಸೋವರ್ ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯನ್ನು ಸಂಸ್ಥೆ ಹೊಂದಿದೆ.

ಭಾರತೀಯ ಮಾದರಿಯ ಐಎಕ್ಸ್25 ಮಾದರಿಯು ಜಾಗತಿಕವಾಗಿರುವ 4270 ಎಂಎಂ ಉದ್ದ ಪರಿಧಿಯನ್ನೇ ಹೊಂದಿರುವ ಸಾಧ್ಯತೆಯಿದೆ. ಇದು ಫೋರ್ಡ್ ಇಕೊಸ್ಪೋರ್ಟ್ ತರಹನೇ ನಾಲ್ಕು ಮೀಟರ್ ಉದ್ದ ಪರಿಮಿತಿಯನ್ನು ಕಾಪಾಡಿಕೊಳ್ಳಲಿದ್ದು, ತೆರಿಗೆ ವಿನಾಯಿತಿ ಪಡೆಯಲು ಸಾಧ್ಯವಾಗಲಿದೆ.

ಇನ್ನು ದೇಶದಲ್ಲಿ ಸ್ಥಳೀಯವಾಗಿ ನಿರ್ಮಿಸುವ ಯೋಜನೆ ಹೊಂದಿರುವ ಹ್ಯುಂಡೈ, ಐಎಕ್ಸ್25 ಬೆಲೆ ಗಣನೀಯವಾಗಿ ಕುಸಿಯಲು ಸಹಕಾರಿಯಾಗಲಿದೆ.

Most Read Articles

Kannada
English summary
South Korean carmaker Hyundai has confirmed to enter the lucrative SUV segment in India.
Story first published: Wednesday, December 24, 2014, 15:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X