ಹ್ಯುಂಡೈ ದೇಶಿಯ ಮಾರಾಟ ಶೇ. 14.5ರಷ್ಟು ವೃದ್ಧಿ

By Nagaraja

ದೇಶದ ಅತಿ ದೊಡ್ಡ ರಫ್ತುದಾರ ಹಾಗೂ ಎರಡನೇ ಅತಿದೊಡ್ಡ ಪ್ರಯಾಣಿಕ ಕಾರು ತಯಾರಕ ಸಂಸ್ಥೆಯಾಗಿರುವ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (ಎಚ್‌ಎಂಐಎಲ್) ಸಂಸ್ಥೆಯು, 2014 ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು 51,471 ಯುನಿಟ್‌ಗಳ ಮಾರಾಟ ದಾಖಲಿಸಿದೆ.

ಈ ಪೈಕಿ 35,041 ಯುನಿಟ್‌ ದೇಶಿಯ ಮಾರಾಟ ಹಾಗೂ 16,430 ಯುನಿಟ್ ರಫ್ತು ಮಾಡುವಲ್ಲಿ ಕೊರಿಯಾ ಮೂಲದ ಈ ವಾಹನ ತಯಾರಿಕ ಸಂಸ್ಥೆ ಯಶಸ್ವಿಯಾಗಿದೆ. ಇದರೊಂದಿಗೆ ದೇಶಿಯ ಮಾರಾಟದಲ್ಲಿ ಶೇಕಡಾ 14.5ರಷ್ಟು ವೃದ್ಧಿ ದಾಖಲಿಸಿದೆ. ಹಾಗಿದ್ದರೂ ರಫ್ತು ಪ್ರಕ್ರಿಯೆಯು ಶೇಕಡಾ 21.1ರಷ್ಟು ಕುಸಿತ ಕಂಡಿದೆ.

Hyundai elite i20

ಈ ನಡುವೆ ಪ್ರಸಕ್ತ ಸಾಲಿನ ಮೊದಲಾರ್ಧದಲ್ಲಿ ಶೇಕಡಾ 12.8ರಷ್ಟು ಏರಿಕೆ ದಾಖಲಿಸಿರುವುದಾಗಿ ಹ್ಯುಂಡೈ ಇಂಡಿಯಾ ಸೇಲ್ಸ್ ಮತ್ತು ಮಾರ್ಕೆಟಿಂಗ್ ಹಿರಿಯ ಉಪಾಧ್ಯಕ್ಷರಾಗಿರುವ ರಾಕೇಶ್ ಶ್ರೀವಾಸ್ತವಾ ತಿಳಿಸಿದ್ದಾರೆ. ಈ ನಡುವೆ ಗರಿಷ್ಠ ಮಾರಾಟ ಕಂಡುಕೊಂಡಿರುವ ಎಲೈಟ್ ಐ20 ಮಾದರಿಯು 8,902 ಯುನಿಟ್‌ಗಳಷ್ಟು ಮಾರಾಟ ದಾಖಲಿಸುವಲ್ಲಿ ಯಶಸ್ವಿಯಾಗಿದೆ.

ಹ್ಯುಂಡೈ ಮಾರಾಟ ಅಂಕಿಅಂಶ ಇಂತಿದೆ

ಸೆಪ್ಟೆಂಬರ್ 2014 (ಯುನಿಟ್‌ಗಳಲ್ಲಿ)
ದೇಶಿಯ - 35,041
ರಫ್ತು - 16,430
ಒಟ್ಟು - 51,471
ಏರಿಕೆ (%) - 14.5

ಸೆಪ್ಟೆಂಬರ್ 2013 (ಯುನಿಟ್‌ಗಳಲ್ಲಿ)
ದೇಶಿಯ - 30,61
ರಫ್ತು - 20,816
ಒಟ್ಟು - 51,417
ಏರಿಕೆ (%) - -21.1

Most Read Articles

Kannada
English summary
Hyundai Motor India Ltd (HMIL), the country’s second largest car manufacturer and the largest passenger car exporter registered the domestic sales of 35,041 units and exports of 16,430 units with cumulative sales of 51,471 units for the month of September 2014. 
Story first published: Wednesday, October 1, 2014, 14:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X