12,000 ಬುಕ್ಕಿಂಗ್ ಸಂಖ್ಯೆ ತಲುಪಿದ ಹ್ಯುಂಡೈ ಎಲೈಟ್ ಐ20

By Nagaraja

ದಕ್ಷಿಣ ಕೊರಿಯಾ ಮೂಲದ ವಾಹನ ತಯಾರಕ ಸಂಸ್ಥೆಯಾಗಿರುವ ಹ್ಯುಂಡೈ ಇಂಡಿಯಾ, ಇತ್ತೀಚೆಗಷ್ಟೇ ಎಲೈಟ್ ಐ20 ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿತ್ತು. ಇದೀಗ ಬಿಡುಗಡೆಯಾದ ಕೆಲವೇ ದಿನಗಳಲ್ಲಿ 12,000ದಷ್ಟು ಬುಕ್ಕಿಂಗ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಈ ಹಿಂದೆ ಸ್ವಾತಂತ್ರ್ಯೋತ್ಸವದ ಸಂಭ್ರಮದ ಭಾಗವಾಗಿ 2014 ಆಗಸ್ಟ್ 11ರಂದು ಹ್ಯುಂಡೈ ಎಲೈಟ್ ಐ20 ಬಿಡುಗಡೆಯಾಗಿತ್ತು. ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆ 4.90 ಲಕ್ಷ ರು.ಗಳಾಗಿವೆ. ಅಲ್ಲದೆ ಸಾಮಾನ್ಯ ಐ20 ಆವೃತ್ತಿಗಿಂತಲೂ ಗಮನಾರ್ಹ ಬದಲಾವಣೆ ಪಡೆದುಕೊಂಡಿದೆ.

ಹುಂಡೈ ಎಲೈಟ್ ಐ20 ವಿಶೇಷ ಏನು ಇಲ್ಲಿದೆ ಓದಿ

 Hyundai Elite i20

ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳಲ್ಲಿ ಹ್ಯುಂಡೈ ಎಲೈಟ್ ಐ20 ಲಭ್ಯವಿರುತ್ತದೆ. ಇದು 1.2 ಲೀಟರ್ ಪೆಟ್ರೋಲ್ ಎಂಜಿನ್ 82 ಅಶ್ವಶಕ್ತಿ (115 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅದೇ ರೀತಿ 1.4 ಲೀಟರ್ ಟರ್ಬೊ ಚಾರ್ಜ್ಡ್ ಎಂಜಿನ್ 89 ಅಶ್ವಶಕ್ತಿ (220 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.

ಹ್ಯುಂಡೈನ ಹೊಸತಾದ ಫ್ಲೂಯಿಡಿಕ್ ವಿನ್ಯಾಸ ತತ್ವಶಾಸ್ತ್ರದ ನೆರವಿನೊಂದಿಗೆ ಎಲೈಟ್ ಐ20 ಅಭಿವೃದ್ಧಿಪಡಿಸಲಾಗಿದೆ. ಇದು ತನ್ನ ಹಿಂದಿನ ಮಾದರಿಗಿಂತಲೂ ಹೆಚ್ಚು ಸ್ಥಳಾವಕಾಶವನ್ನು ಪಡೆದುಕೊಂಡಿದೆ.

Most Read Articles

Kannada
English summary
The Elite i20 has been launched in India at an affordable price of INR 4,90,000 ex-showroom, Delhi. Hyundai showrooms report to have received approximately 12,000 booking for their new premium hatchback in India, since its launch.
Story first published: Saturday, August 30, 2014, 11:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X