ತೀವ್ರತೆ ಪಡೆದ ಪೈಪೋಟಿ; ಅಪ್‌ಗ್ರೇಡ್ ಆಗಲಿದೆ ವೆರ್ನಾ

By Nagaraja

ನಿಕಟ ಪ್ರತಿಸ್ಪರ್ಧಿಗಳಿಂದ ಮಾರುಕಟ್ಟೆಯಲ್ಲಿ ವರ್ಧಿಸುತ್ತಿರುವ ಪೈಪೋಟಿಯ ಹಿನ್ನಲೆಯಲ್ಲಿ ಹ್ಯುಂಡೈ ವೆರ್ನಾ ಅಪ್‌ಗ್ರೇಡ್ ಮಾಡಿಕೊಳ್ಳಲು ದೇಶದ ಎರಡನೇ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಹ್ಯುಂಡೈ ನಿರ್ಧರಿಸಿದೆ.

ಕಳೆದ ಕೆಲವು ವರ್ಷಗಳಲ್ಲಿ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈಯಿಂದ ದೇಶದಲ್ಲಿ ಲಭ್ಯವಿರುವ ಅತ್ಯಂತ ಬೇಡಿಕೆಯ ಕಾರುಗಳಲ್ಲಿ ಕಾಣಿಸಿಕೊಂಡಿದ್ದ ವೆರ್ನಾ, ಹೆಚ್ಚು ಜನಪ್ರಿಯತೆಯನ್ನು ಕಾಯ್ದುಕೊಂಡಿತ್ತು.

ಆದರೆ ಅತಿ ನೂತನ ಹೋಂಡಾ ಸಿಟಿ ಹಾಗೂ ಮಾರುತಿ ಸಿಯಾಜ್ ಆಗಮನದೊಂದಿಗೆ ವೆರ್ನಾ ಮಾರಾಟ ಕ್ಷೀಣಿಸಿದೆ. ಇದನ್ನು ಮನಗಂಡಿರುವ ಸಂಸ್ಥೆಯು ಸದ್ಯದಲ್ಲೇ ವೆರ್ನಾ ಅಪ್‌ಗ್ರೇಡ್‌ಗೊಳಿಸಲು ನಿರ್ಧರಿಸಿದೆ.

hyundai verna

ಈ ಆರ್ಥಿಕ ಸಾಲಿನ ಮೊದಲ ಐದು ತಿಂಗಳಲ್ಲಿ ವೆರ್ನಾ ಮಾರಾಟದಲ್ಲಿ ಶೇಕಡಾ 26ರಷ್ಟು ಕುಸಿತವುಂಟಾಗಿದೆ. ಕಳೆದ ವರ್ಷ ಎಪ್ರಿಲ್‌ನಿಂದ ಆಗಸ್ಟ್ ತಿಂಗಳ ವರೆಗೆ 20,759 ಯುನಿಟ್‌ಗಳಷ್ಟಿದ್ದ ವೆರ್ನಾ ಮಾರಾಟವು ಈ ವರ್ಷ 15,462 ಯುನಿಟ್‌ಗಳಿಗೆ ಇಳಿಕೆಯಾಗಿತ್ತು.

ಇನ್ನೊಂದೆಡೆ ಕಳೆದ ಬಾರಿ 9,855 ಯುನಿಟ್‌ಗಳಿಷ್ಟಿದ್ದ ಹೋಂಡಾ ಸಿಟಿ ಹೊಸ ಮಾದರಿಯ ಪ್ರವೇಶದೊಂದಿಗೆ ಈ ಬಾರಿ 30,447 ಯುನಿಟ್‌ಗಳ ಭರ್ಜರಿ ಮಾರಾಟ ಕಂಡುಕೊಂಡಿತ್ತು.

ಹಾಗೆಯೇ ಇದೀಗಷ್ಟೇ ಬಿಡುಗಡೆಯಾಗಿರುವ ಮಾರುತಿ ಸುಜುಕಿ ಸಿಯಾಝ್ ಈಗಾಗಲೇ 13,000ಕ್ಕೂ ಹೆಚ್ಚು ಬುಕ್ಕಿಂಗ್‌ ದಾಟಿದೆ. ಈ ಪೈಕಿ 4,000 ಯುನಿಟ್‌ಗಳನ್ನು ಗ್ರಾಹಕರಿಗೆ ಹಸ್ತಾಂತರಿಸಲಾಗಿದೆ.

ನಿಮ್ಮ ಮಾಹಿತಿಗಾಗಿ, ರಷ್ಯಾದಲ್ಲಿ ಈಗಾಗಲೇ ವೆರ್ನಾ ಫೇಸ್‌ಲಿಫ್ಟ್ ಮಾದರಿ ಬಿಡುಗಡೆಗೊಂಡಿದೆ. ಇದು ಸೊಲರಿಸ್ ಎಂದರಿಯಲ್ಪಟ್ಟಿದೆ. ಅದೇ ರೀತಿ ಭಾರತಕ್ಕೂ ಪರಿಷ್ಕೃತ ಆವೃತ್ತಿ ಬಿಡುಗಡೆ ಮಾಡುವುದು ಸಂಸ್ಥೆಯ ಗುರಿಯಾಗಿದೆ.

Most Read Articles

Kannada
English summary
South Korean automaker Hyundai, is all set to give the Verna a midlife facelift owing to the strong competition from the Japanese carmaker Honda and Indian car maker Maruti.
Story first published: Tuesday, October 21, 2014, 9:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X