ಹ್ಯುಂಡೈ ಕಾಂಪಾಕ್ಟ್ ಎಸ್‌ಯುವಿ 2015ರಲ್ಲಿ ಆಗಮನ

By Nagaraja

ಭಾರತದ ಬೃಹತ್ ರಫ್ತುದಾರ ಹಾಗೂ ಎರಡನೇ ಅತಿದೊಡ್ಡ ಪ್ರಯಾಣಿಕ ಕಾರು ತಯಾರಕ ಸಂಸ್ಥೆಯಾಗಿರುವ ಹ್ಯುಂಡೈ ಇಂಡಿಯಾ, ಮುಂದಿನ ವರ್ಷದಲ್ಲಿ ಹೊಸತಾದ ಕಾಂಪಾಕ್ಟ್ ಎಸ್‌ಯುವಿ ಪರಿಚಯಿಸಲಿದೆ.

ಈ ಮೂಲಕ ದೇಶದಲ್ಲಿ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳುತ್ತಿರುವ ಕಾಂಪಾಕ್ಟ್ ಎಸ್‌ಯುವಿ ವಿಭಾಗಕ್ಕೆ ಹ್ಯುಂಡೈ ಕೂಡಾ ಸೇರ್ಪಡೆಯಾಗಲಿದೆ. ಮುಂದಿನ ವರ್ಷಕ್ಕೆ ಇನ್ನು ನಾಲ್ಕೇ ನಾಲ್ಕು ತಿಂಗಳುಗಳು ಮಾತ್ರ ಬಾಕಿ ಉಳಿದಿರುವುದರಿಂದ ಹ್ಯುಂಡೈ ಕಾಂಪಾಕ್ಟ್ ಎಸ್‌ಯುವಿ ಸುದ್ದಿ ಹೆಚ್ಚು ಕುತೂಹಲ ಮೂಡಿಸಿದೆ.

hyundai

ಈಗಾಗಲೇ ಮಾರುಕಟ್ಟೆಗೆ ಎಲೈಟ್ ಐ20 ಮಾದರಿಯನ್ನು ಪರಿಚಯಿಸಿರುವ ಈ ದಕ್ಷಿಣ ಕೊರಿಯಾ ಮಾದರಿಯು ಎಕ್ಸ್‌ಸೆಂಟ್ ಮೂಲಕ ಕಾಂಪಾಕ್ಟ್ ಸೆಡಾನ್ ವಿಭಾಗದಲ್ಲೂ ತನ್ನ ಸಾನಿಧ್ಯ ಗಟ್ಟಿಪಡಿಸಿತ್ತು.

ಹ್ಯುಂಡೈ ಹೊಸತಾದ ಕಾಂಪಾಕ್ಟ್ ಎಸ್‌ಯುವಿ ಯಾವ ತಲಹದಿಯಲ್ಲಿ ನಿರ್ಮಾಣವಾಗಲಿದೆ ಎಂಬುದನ್ನು ತಿಳಿದುಕೊಳ್ಳಲು ವಾಹನ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದು ಫೋರ್ಡ್ ಇಕೊಸ್ಪೋರ್ಟ್, ನಿಸ್ಸಾನ್ ಟೆರನೊ ಮತ್ತು ರೆನೊ ಡಸ್ಟರ್ ಮಾದರಿಗಳಿಗೆ ಪೈಪೋಟಿ ಒಡ್ಡಲಿದೆ. ಅದೇ ಹೊತ್ತಿಗೆ ಮುಂದಿನ ಸಾಲಿನಲ್ಲೇ ಹೊಸತಾದ ಎಂಪಿವಿ ಕೂಡಾ ನಿರೀಕ್ಷೆ ಮಾಡಬಹುದಾಗಿದೆ.

Most Read Articles

Kannada
English summary
The Indian automobile sector was in a slump for a few years. However, manufacturers are expecting a turnaround soon in their fortune. The upcoming festive season is round the corner and manufacturers are hurrying up, as to not lose their customers.
Story first published: Friday, August 22, 2014, 14:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X