ಎಚ್ಚರ; ಮೊದಲ ಬಾರಿ ಸಂಚಾರ ನಿಯಮ ಉಲ್ಲಂಘಿಸಿದರೂ ಡಿಎಲ್ ರದ್ದು

ಚಾಲಕರೇ ಎಚ್ಚರ; ಬೆಂಗಳೂರು ಮಹಾನಗರ ಸಂಚಾರ ವ್ಯವಸ್ಥೆಯನ್ನು ಇನ್ನಷ್ಟು ಬಿಗುಗೊಳಿಸಲು ನಿರ್ಧರಿಸಿರುವ ಬೆಂಗಳೂರು ನಗರ ಸಂಚಾರ ಪೊಲೀಸ್, ಇನ್ನು ಮುಂದೆ ಈ ಕೆಳಕಂಡ ಪ್ರಕರಣಗಳಲ್ಲಿ ಮೊದಲನೆ ಬಾರಿಗೆ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಲ್ಲಿ ಚಾಲನಾ ಪರವಾನಗಿ (DL) ರದ್ದುಪಡಿಸಲು ನಿರ್ಧರಿಸಿದೆ.

ಎಪ್ರಿಲ್ ಒಂದರಿಂದ ನೂತನ ನಿಯಮ ಜಾರಿಗೆ ಬರಲಿದೆ. ಇದರಲ್ಲಿ ಪ್ರಮುಖವಾಗಿಯೂ ಮದ್ಯ ಸೇವಿಸಿ ವಾಹನ ಚಾಲನೆ, ವಾಹನ ಚಾಲನೆ ವೇಳೆ ಮೊಬೈಲ್‌ನಲ್ಲಿ ಮಾತುಗಾರಿಕೆ ಮುಂತಾದ ಸಂಚಾರ ಉಲ್ಲಂಘನಾ ಪ್ರಕರಣಗಳನ್ನು ಪ್ರಮುಖವಾಗಿ ಪರಿಗಣಿಸಿದೆ. ಒಟ್ಟಿನಲ್ಲಿ ಸಂಚಾರ ನಿಯಮ ಉಲ್ಲಂಘನಾ ಪ್ರಕರಣಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ಬೆಂಗಳೂರು ನಗರ ಸಂಚಾರ ಪೊಲೀಸ್, ಕಠಿಣ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿದೆ.

ಈ ಕೆಳಕಂಡ ಪ್ರಕರಣಗಳಲ್ಲಿ ಮೊದಲನೆ ಬಾರಿಗೆ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಲ್ಲಿ ಚಾಲನಾ ಪರವಾನಗಿಯನ್ನು (DL) ರದ್ದುಪಡಿಸಲು ಕಳುಹಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

ಮೊದಲ ಬಾರಿ ಸಂಚಾರ ನಿಯಮ ಉಲ್ಲಂಘಿಸಿದರೂ ಡಿಎಲ್ ರದ್ದು

1. ಮದ್ಯಪಾನದ ಅಮಲಿನಲ್ಲಿ ವಾಹನ ಚಾಲನೆ

ಮೊದಲ ಬಾರಿ ಸಂಚಾರ ನಿಯಮ ಉಲ್ಲಂಘಿಸಿದರೂ ಡಿಎಲ್ ರದ್ದು

2. ವಾಹನ ಚಾಲನೆ/ಸವಾರಿ ಮಾಡುವಾಗ ಮೊಬೈಲ್ ಫೋನ್ ಬಳಕೆ

ಮೊದಲ ಬಾರಿ ಸಂಚಾರ ನಿಯಮ ಉಲ್ಲಂಘಿಸಿದರೂ ಡಿಎಲ್ ರದ್ದು

3. ಬಾಡಿಗೆಗೆ ಬರಲು ನಕಾರ

ಮೊದಲ ಬಾರಿ ಸಂಚಾರ ನಿಯಮ ಉಲ್ಲಂಘಿಸಿದರೂ ಡಿಎಲ್ ರದ್ದು

4. ಹೆಚ್ಚಿನ ಬಾಡಿಗೆಗೆ ಒತ್ತಾಯ

ಮೊದಲ ಬಾರಿ ಸಂಚಾರ ನಿಯಮ ಉಲ್ಲಂಘಿಸಿದರೂ ಡಿಎಲ್ ರದ್ದು

5. ಸರಕು ಸಾಗನೆ ವಾಹನಗಳಲ್ಲಿ ಚಾಲಕರನ ಕ್ಯಾಬಿನ್‌ನಲ್ಲಾಗಲೀ ಅಥವಾ ವಾಹನದ ಮೇಲಾಗಲಿ ನಗದಿಪಡಿಸಿದಕ್ಕಿಂತ ಹೆಚ್ಚಿನ ವ್ಯಕ್ತಿಗಳನ್ನು ಕರೆದೊಯ್ಯುವುದು.

ಮೊದಲ ಬಾರಿ ಸಂಚಾರ ನಿಯಮ ಉಲ್ಲಂಘಿಸಿದರೂ ಡಿಎಲ್ ರದ್ದು

6. ಹಿಟ್ ಆಂಡ್ ರನ್ ಪ್ರಕರಣಗಳಲ್ಲಿ

ಮೊದಲ ಬಾರಿ ಸಂಚಾರ ನಿಯಮ ಉಲ್ಲಂಘಿಸಿದರೂ ಡಿಎಲ್ ರದ್ದು

7. ಪಾದಚಾರಿ ರಸ್ತೆಯ ಮೇಲೆ ಮತ್ತು ಅಪಾಯಕಾರಿ ರೀತಿಯಲ್ಲಿ ವಾಹನ ಚಾಲನೆ ಮಾಡಿದಾಗ

ಮೊದಲ ಬಾರಿ ಸಂಚಾರ ನಿಯಮ ಉಲ್ಲಂಘಿಸಿದರೂ ಡಿಎಲ್ ರದ್ದು

8. ವೀಲಿಂಗ್ ಮತ್ತು ಡ್ರಾಗ್ ರೇಸಿಂಗ್ ಮಾಡಿದಾಗ

ಮೊದಲ ಬಾರಿ ಸಂಚಾರ ನಿಯಮ ಉಲ್ಲಂಘಿಸಿದರೂ ಡಿಎಲ್ ರದ್ದು

ಮದ್ಯಪಾನದ ಅಮಲಿನಲ್ಲಿ ವಾಹನ ಚಾಲನೆ ಮಾಡಿದರೆ, ನಿಮ್ಮ ಚಾಲನಾ ಪರವಾನಗಿ (DL) ರದ್ದಾಗುತ್ತದೆ. ಹಾಗಾಗಿ ಒಂದು ವೇಳೆ ಮದ್ಯಪಾನ ಮಾಡಿದರೆ ಬಳಿಕ ಟ್ಯಾಕ್ಸಿ ಸೇವೆಗೆ ಕರೆ ಮಾಡಿ ಕ್ಷೇಮವಾಗಿ ಮನೆ ತಲುಪುವಂತೆ ವಿನಂತಿಸಲಾಗಿದೆ.

ಟ್ಯಾಕ್ಸಿ ಸೇವೆಗೆ ಕರೆ ಮಾಡಿ

60601010ಯ/44224422/43434343

ಮೊದಲ ಬಾರಿ ಸಂಚಾರ ನಿಯಮ ಉಲ್ಲಂಘಿಸಿದರೂ ಡಿಎಲ್ ರದ್ದು

ಈ ನಡುವೆ ಮದ್ಯ ಸೇವಿಸಿ ಚಾಲನೆ ಮಾಡುವವರ ವಿರುದ್ಧವಾಗಿ ಬೆಂಗಳೂರು ಸಂಚಾರ ಪೊಲೀಸ್ ಇತ್ತೀಚೆಗಷ್ಟೇ ಜಾಗೃತಿ ಕಾರ್ಯಕ್ರಮ ಏರ್ಪಡಿಸಿತ್ತು. ಈ ಸಂದರ್ಭದಲ್ಲಿ ಸಂಚಾರಿ ಪೊಲೀಸರ ನೇತೃತ್ವದಲ್ಲಿ ಯಮರಾಯನ ವೇಷಧಾರಿಯೊಬ್ಬರು ನಗರದಲ್ಲಿ ಪ್ರದಕ್ಷಿಣೆ ಹಾಕಿದ್ದರು.

Most Read Articles

Kannada
English summary
Driving Licence will be sent for cancellation in the following violations at First Instance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X