ಡೀಸೆಲ್‌ಗೆ ಹಿನ್ನಡೆ; ಮತ್ತೆ ಪೆಟ್ರೋಲ್ ಕಾರುಗಳಿಗೆ ಬೇಡಿಕೆ ಹೆಚ್ಚಳ

By Nagaraja

ಮುಂಬರುವ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪೆಟ್ರೋಲ್ ಕಾರು ಖರೀದಿಸಲು ಬಯಸುವೀರಾ? ಆದರೆ ನಿಮ್ಮ ಬಯಕೆ ಈಡೇರಲು ಇನ್ನು ನಾಲ್ಕು ತಿಂಗಳಷ್ಟು ಕಾಲ ಕಾಯಬೇಕಾದಿತ್ತು.

ಬಲ್ಲ ಮೂಲಗಳ ಪ್ರಕಾರ ಹೋಂಡಾ ಸಿಟಿ, ಹ್ಯುಂಡೈ ಗ್ರಾಂಡ್ ಐ10, ಮಾರುತಿ ಸುಜುಕಿ ಸೆಲೆರಿಯೊ ಮತ್ತು ಈಗಷ್ಟೇ ಬಿಡುಗಡೆಯಾಗಿರುವ ಟಾಟಾ ಜೆಸ್ಟ್ ಪೆಟ್ರೋಲ್ ಮಾದರಿಗಳ ಕಾಯುವಿಕೆ ಅವಧಿ ನಾಲ್ಕು ತಿಂಗಳ ವರೆಗೂ ವಿಸ್ತರಣೆಯಾಗುತ್ತಿದೆ.

gran i10

ಪೆಟ್ರೋಲ್ ಹಾಗೂ ಡೀಸೆಲ್ ಇಂಧನಗಳ ನಡುವಣ ಬೆಲೆ ಅಂತರ ಕಡಿಮೆಯಾಗುತ್ತಿರುವ ಇದರ ಹಿಂದಿರುವ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಎರಡು ವರ್ಷಗಳ ಹಿಂದೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳ ನಡುವಣ ಅಂತರ 32ರು.ಗಳಿಷ್ಟಿತ್ತು. ಆದರೆ ಈ ಅಂತರ ಇದೀಗ 10 ರು.ಗಳಿಗೆ ಇಳಿಕೆಯಾಗಿದೆ.

ಅದೇ ರೀತಿ ಕಳೆದ ಒಂದು ವರ್ಷದಲ್ಲಿ ಡೀಸೆಲ್ ಬೆಲೆ ಶೇ. 13.5ರಷ್ಟು ಏರಿಕೆಯಾಗಿದೆ. ಅದೇ ಹೊತ್ತಿಗೆ ಪೆಟ್ರೋಲ್ ಬೆಲೆಗಳಲ್ಲಿ ಶೇ. 10ರಷ್ಟು ಏರಿಕೆ ಕಂಡುಬಂದಿದೆ.

ಕಾಯುವಿಕೆ ಅವಧಿ (ವಾರಗಳಲ್ಲಿ)
ಹೋಂಡಾ ಸಿಟಿ - 12ರಿಂದ 16
ಹ್ಯುಂಡೈ ಮೊಬಿಲಿಯೊ - 8ರಿಂದ 12
ಹ್ಯುಂಡೈ ಐ20 ಎಲೈಟ್ - 8ರಿಂದ 12
ಮಾರುತಿ ಸೆಲೆರಿಯೊ ಎಎಂಟಿ - 8ರಿಂದ 12
ಟಾಟಾ ಜೆಸ್ಟ್ - 4ರಿಂದ 12
ಹ್ಯುಂಡೈ ಗ್ರಾಂಡ್ಐ10 - 4
ಫೋರ್ಡ್ ಇಕೊಸ್ಪೋರ್ಟ್ - 4
ಹೋಂಡಾ ಅಮೇಜ್ - 3

ಹ್ಯುಂಡೈ ಮೋಟಾರು ಇಂಡಿಯಾ ಲಿಮಿಟೆಡ್ ಮಾರ್ಕೆಟಿಂಗ್ ಆಂಡ್ ಸೇಲ್ಸ್ ಹಿರಿಯ ಉಪಾಧ್ಯಕ್ಷರಾಗಿರುವ ರಾಕೇಶ್ ಶ್ರೀವಾಸ್ತವಾ ಪ್ರಕಾರ, ಪೆಟ್ರೋಲ್ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದ್ದರಿಂದ ಪೆಟ್ರೋಲ್ ಹಾಗೂ ಡೀಸೆಲ್ ಕಾರುಗಳ ನಡುವಣ ಬೆಲೆಗಳ ಅಂತರ ಸಹ ಕಡಿಮೆಯಾಗುತ್ತಿದೆ ಎಂದಿದ್ದಾರೆ.

Most Read Articles

Kannada
English summary
The price difference between petrol and diesel prices has come down and that has seen an increase in demand for petrol cars.
Story first published: Tuesday, September 23, 2014, 16:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X