ಪೆಟ್ರೋಲ್ ತರಹನೇ ಡೀಸೆಲ್ ಬೆಲೆ ನಿಯಂತ್ರಣ ಮುಕ್ತಗೊಳಿಸಿದ ಸರಕಾರ

By Nagaraja

ಪೆಟ್ರೋಲ್ ತರಹನೇ ಡೀಸೆಲ್ ಮೇಲಿನ ನಿಯಂತ್ರಣವನ್ನು ಸರಕಾರ ಮುಕ್ತಗೊಳಿಸಿರುವ ಬೆನ್ನಲ್ಲೇ ರಾಜ್ಯದಲ್ಲಿ ಡೀಸೆಲ್ ಬೆಲೆಯಲ್ಲಿ ನಾಲ್ಕು ರು.ಗಳಷ್ಟು ಇಳಿಕೆ ಕಂಡುಬಂದಿದೆ.

ನಿರೀಕ್ಷೆಯಂತೆಯೇ ಮಹಾರಾಷ್ಟ್ರ, ಹರಿಯಾಣ ವಿಧಾನಸಭಾ ಚುನಾವಣಾ ಫಲಿತಾಂಶ ಬೆನ್ನಲ್ಲೇ ಕೇಂದ್ರ ಸರಕಾರದ ನೀತಿ ಘೋಷಣೆಯಾಗಿದೆ. ಕಳೆದ ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿಗೆ ಬಂದಿದ್ದು, ರಾಜ್ಯದಲ್ಲಿ 3.37 ರು. ಇಳಿಕೆ ಕಂಡುಬಂದಿದೆ. ಆದರೆ ತೆರಿಗೆ ಒಳಗೊಂಡಂತೆ ಸುಮಾರು 4 ರು.ಗಳಷ್ಟು ಇಳಿಕೆಯಾಗಲಿದೆ.

diesel

ಕಳೆದ ಕೆಲವು ವರ್ಷಗಳಿಂದ ಡೀಸೆಲ್ ಬೆಲೆ ಅನಿಯಂತ್ರಣಗೊಳಿಸುವ ಬಗ್ಗೆ ವ್ಯಾಪಕ ಚರ್ಚೆ ಜಾರಿಯಲ್ಲಿತ್ತು. ಕೊನೆಗೂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಡೀಸೆಲ್ ಬೆಲೆ ಅನಿಯಂತ್ರಣಗೊಳಿಸಲು ನಿರ್ಧರಿಸಿದೆ.

ಇದರೊಂದಿಗೆ ಡೀಸೆಲ್ ಮೇಲಿನ ಸಬ್ಸಿಡಿಗೆ ತಡೆ ಬೀಳಲಿದೆ. ಹಾಗೆಯೇ ತೈಲ ಕಂಪನಿಗಳು ಪೆಟ್ರೋಲ್ ರೀತಿಯಲ್ಲೇ ಡೀಸೆಲ್ ಬೆಲೆ ನಿರ್ಧರಿಸಲಿದೆ.

ಕಳೆದ ಐದು ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಡೀಸೆಲ್ ಬೆಲೆಯಲ್ಲಿ ಇಳಿಕೆ ಕಂಡುಬರುತ್ತಿದೆ. ಇದಕ್ಕೆ ಕಾರಣ ಅಂತರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಕಂಡುಬಂದಿರುವುದು. ಇದರೊಂದಿಗೆ ಪೆಟ್ರೋಲ್ ರೀತಿಯಲ್ಲಿ ಡೀಸೆಲ್ ಬೆಲೆಯೂ ಪ್ರತಿ 15 ದಿನಕ್ಕೊಮ್ಮೆ ಬೆಲೆ ಪರಿಷ್ಕರಣೆಯಾಗಲಿದೆ.

Most Read Articles

Kannada
English summary
India ends diesel controls, down Rs 3.37 in Karnataka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X