ಮತ್ತೆ ಪೆಟ್ರೋಲ್ ಕಾರುಗಳತ್ತ ವಾಲಿದ ದೇಶೀಯ ಗ್ರಾಹಕರು

By Nagaraja

ಕೆಲವು ವರ್ಷಗಳ ಹಿಂದೆ ಪೆಟ್ರೋಲ್ ಹಾಗೂ ಡೀಸೆಲ್ ಇಂಧನಗಳ ಬೆಲೆಗಳ ನಡುವಣ ಅಂತರ ತುಂಬಾನೇ ಜಾಸ್ತಿಯಾಗಿತ್ತು. ಇದರಿಂದಾಗಿ ಭಾರತ ವಾಹನ ಮಾರುಕಟ್ಟೆಯಲ್ಲಿ ಗ್ರಾಹಕರು ಡೀಸೆಲ್ ಕಾರುಗಳನ್ನು ತಮ್ಮದಾಗಿಸಿಕೊಳ್ಳಲು ಬಯಸುತ್ತಿದ್ದರು.

ಇದರಿಂದಾಗಿ ವಾಹನ ತಯಾರಕ ಸಂಸ್ಥೆಗಳು ಡೀಸೆಲ್ ಕಾರುಗಳನ್ನು ಹೆಚ್ಚೆಚ್ಚು ಉತ್ಪಾದಿಸುವುದರತ್ತ ಗಮನ ಕೇಂದ್ರಿತವಾಗಿದ್ದವು. ಆದರೆ ಇತ್ತೀಚೆಗಿನ ಸಮಯದಿಂದ ಪರಿಸ್ಥಿತಿ ಬದಲಾಗಿದೆ.

Petrol

ಡೀಸೆಲ್ ಇಂಧನಗಳ ಬೆಲೆಯೂ ಗಣನೀಯವಾಗಿ ಏರಿಕೆವಾಗಿರುವುದರಿಂದ ಪೆಟ್ರೋಲ್ ಹಾಗೂ ಡೀಸೆಲ್ ನಡುವಣ ಅಂತರ ಕಡಿಮೆಯಾಗಿದೆ. ಇದರಿಂದಾಗಿ ಗ್ರಾಹಕರು ಮತ್ತೆ ಪೆಟ್ರೋಲ್ ಕಾರುಗಳತ್ತ ವಾಲುತ್ತಿರುವುದಾಗಿ ಬಲ್ಲ ಮೂಲಗಳು ತಿಳಿಸಿವೆ.

ವರದಿಗಳ ಪ್ರಕಾರ ಡೀಸೆಲ್ ಎಂಜಿನ್ ನಿಯಂತ್ರಿತ ಕಾರುಗಳ ಮಾರಾಟ ಶೇಕಡಾ 7ರಷ್ಟು ಕುಸಿತ ಕಂಡಿದೆ. ಅದೇ ಹೊತ್ತಿಗೆ ಪೆಟ್ರೋಲ್ ಕಾರುಗಳ ಮಾರಾಟವು ಶೇಕಡಾ 11ರಷ್ಟು ಏರಿಕೆ ಕಂಡಿದೆ. ಇದರಿಂದಾಗಿ ಮಗದೊಮ್ಮೆ ವಾಹನ ತಯಾರಕ ಸಂಸ್ಥೆಗಳು ತಮ್ಮ ನೀತಿ ಬದಲಾಯಿಸಬೇಕಾದ ಪರಿಸ್ಥಿತಿ ಬಂದಿದೆ.

ಉದಾಹರಣೆಗೆ, 2013ರಲ್ಲಿ ಲಾಂಚ್ ಆಗಿದ್ದ ಅಮೇಜ್ ಡೀಸೆಲ್ ಕಾರಿಗೆ ಶೇಕಡಾ 80ರಷ್ಟು ಖರೀದಿಗಾರರಿದ್ದರು. ಆದರೆ ಪ್ರಸಕ್ತ ಸಾಲಿನ ಜುಲೈ ತಿಂಗಳಲ್ಲಿ ಶೇಕಡಾ 50ಕ್ಕೆ ಇಳಿಕೆ ಕಂಡಿರುವುದಾಗಿ ತಿಳಿದು ಬಂದಿದೆ. ಪ್ರತಿ ತಿಂಗಳು ಡೀಸೆಲ್ ಬೆಲೆ ಏರಿಕೆಗೊಳಿಸಿರುವ ಕೇಂದ್ರ ಸರಕಾರದ ನೀತಿಯು ಸಹ ಡೀಸೆಲ್ ಕಾರುಗಳ ಬೇಡಿಕೆ ಕುಸಿತಕ್ಕೆ ಪರೋಕ್ಷ ಹೊಡೆತ ನೀಡಿದೆ.

Most Read Articles

Kannada
Read in English: Petrol Cars Make A Comeback
English summary
Indian customers are shifting back to petrol run cars over diesel vehicles these days. The very narrow price difference between the fuels is the cause.
Story first published: Thursday, August 21, 2014, 11:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X