ಉ.ಪ್ರದೇಶಕ್ಕೆ ಇಸುಝು ಎಸ್‌ಯುವಿ, ಪಿಕಪ್ ಟ್ರಕ್ ಎಂಟ್ರಿ

By Nagaraja

ಜಪಾನ್ ಮೂಲದ ಮುಂಚೂಣಿಯ ವಾಣಿಜ್ಯ ವಾಹನ ಹಾಗೂ ಡೀಸೆಲ್ ಎಂಜಿನ್ ತಯಾರಕ ಸಂಸ್ಥೆಯಾಗಿರುವ ಇಸುಝು, ಉತ್ತರ ಪ್ರದೇಶದ ನೋಯ್ಡಾದಲ್ಲಿ ಹೊಸತಾದ ವಿತರಕ ಜಾಲವನ್ನು ತೆರೆದುಕೊಂಡಿದೆ. ಭಾರತದಲ್ಲಿ ವಾಣಿಜ್ಯ ವಾಹನ ಮಾರುಕಟ್ಟೆ ವಿಸ್ತರವಾಗಿ ಪಸರಿಸಿದೆ. ಇದರಂತೆ ದೇಶದಲ್ಲಿ ತನ್ನ ಸಾನಿಧ್ಯ ವ್ಯಕ್ತಪಡಿಸಲು ಇಸುಝು ಪ್ರಯತ್ನಿಸುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಇಸುಝು ಮೋಟಾರ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾಗಿರುವ ತಕಾಶಿ ಕಿಕುಚಿ, "ಇದರೊಂದಿಗೆ ಭಾರತದ ಮೂರನೇ ಅತಿದೊಡ್ಡ ಆರ್ಥಿಕತೆಗೆ ಲಗ್ಗೆಯಿಟ್ಟಿದ್ದು, ದೇಶದ ಒಟ್ಟು ವಾಹನೋದ್ಯಮದ ಸರಿ ಸುಮಾರು ಶೇಕಡಾ 15ರಷ್ಟು ವಹಿವಾಟು ಇಲ್ಲಿ ನಡೆಯುತ್ತಿದೆ" ಎಂದಿದ್ದಾರೆ.


ಎಸ್‌ಯುವಿ, ಪಿಕಪ್ ಎಂಟ್ರಿ...
ಹೊಸ ಶೋ ರೂಂ ಉದ್ಘಾಟನೆಯ ಸಂದರ್ಭದಲ್ಲಿ ಹೊಸತಾದ ಎಂಯು-7 ಕ್ರೀಡಾ ಬಳಕೆಯ ವಾಹನ ಮತ್ತು ಡಿ ಮ್ಯಾಕ್ಸ್ ಪಿಕಪ್ ಶ್ರೇಣಿಯ ಟ್ರಕ್‌ಗಳನ್ನು ಸಹ ಬಿಡುಗಡೆಗೊಳಿಸಲಾಗಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ನೋಯ್ಡಾ)
ಎಂಯು-7 - 19.99 ಲಕ್ಷ ರು.
ಡಿ-ಮ್ಯಾಕ್ಸ್ - ಪ್ರಾರಂಭಿಕ ಬೆಲೆ 6.13 ಲಕ್ಷ ರು.

isuzu d max

ಎಂಜಿನ್
ಇಸುಝು ಎಂಯು-7 ಎಸ್‌ಯುವಿ 4 ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 163 ಪಿಎಸ್ ಪವರ್ (360 ಎನ್‌ಎಂ) ಉತ್ಪಾದಿಸಲಿದೆ. ಅದೇ ರೀತಿ ಡಿಮ್ಯಾಕ್ಸ್ ಪಿಕಪ್ 4 ಸಿಲಿಂಡರ್ ಕಾಮನ್ ರೈನ್ ಟರ್ಬೊ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 136 ಅಶ್ವಶಕ್ತಿ (294 ಎನ್‌ಎಂ) ಉತ್ಪಾದಿಸಲಿದೆ.

ಇಸುಝು ಗುರಿ...
2016ರ ವೇಳೆಗೆ ದೇಶದ್ಯಾಂತ 60ರಷ್ಟ ಔಟ್ಲೆಟ್ ತೆರೆದುಕೊಳ್ಳುವುದು ಇಸುಝು ಗುರಿಯಾಗಿದೆ. ಸದ್ಯ ಸಂಸ್ಥೆಯು ದೆಹಲಿ, ಮಹಾರಾಷ್ಟ್ರ, ತಮಿಳು ನಾಡು, ಕೇರಳ, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ತನ್ನ ಸಾನಿಧ್ಯವನ್ನು ಹೊಂದಿದೆ.

Most Read Articles

Kannada
English summary
Isuzu, the Japanese commercial vehicles and diesel engine manufacturing company, has inaugurated its first dealership in Uttar Pradesh, in Noida.
Story first published: Saturday, October 25, 2014, 9:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X