ಜೆಡಿ ಪವರ್; ಗ್ರಾಹಕ ಸಂತೃಪ್ತಿಯಲ್ಲಿ ಮಾರುತಿ ಮುಂದು

By Nagaraja

ಮಾರುಕಟ್ಟೆ ಸಂಶೋಧನಾ ಸಂಸ್ಥೆಯಾಗಿರುವ ಜೆ.ಡಿ ಪವರ್ ನಿರಂತರ ಅಂತರಾಳದಲ್ಲಿ ವಾಹನೋದ್ಯಮಕ್ಕೆ ಸಂಬಂಧಪಟ್ಟ ಗ್ರಾಹಕ ಸಂತೃಪ್ತಿ ವರದಿಯನ್ನು ಬಿಡುಗಡೆ ಮಾಡುತ್ತಲೇ ಬಂದಿದೆ. ಇದು ಮಾರುಕಟ್ಟೆ ಪರಿಸ್ಥಿತಿಯನ್ನು ಕೂಲಂಕುಷವಾಗಿ ಅವಲೋಕನ ಮಾಡಲು ಸಹಕಾರಿಯಾಗುತ್ತಿದೆ.

2014 ಇಂಡಿಯಾ ಕಸ್ಟಮರ್ ಸರ್ವಿಸ್ ಇಂಡೆಕ್ಸ್ (ಸಿಎಸ್‌ಐ) ಪ್ರಕಾರ ದೇಶದಲ್ಲಿ ವಾಹನ ಮಾರಾಟದ ನಂತರದ ಗ್ರಾಹಕ ಸಂತೃಪ್ತಿಯಲ್ಲಿ ಏರಿಕೆ ಕಂಡಿದೆ.

ಕಳೆದ 18 ವರ್ಷಗಳಿಂದ ಜೆಡಿ ಪವರ್ ಅಧ್ಯಯನ ನಡೆಸಿಕೊಂಡು ಬಂದಿದೆ. ವಾಹನ ತಯಾರಕ ಸಂಸ್ಥೆಗಳ ಅಧಿಕೃತ ಡೀಲರ್‌ಗಳ ಬಳಿ ತೆರಳುವ ಸಂಸ್ಥೆಯು ನಿರ್ವಹಣೆ ಅಥವಾ ರಿಪೇರಿ ಕೆಲಸಗಳ ಬಗ್ಗೆ ಮಾಲಿಕರಿಂದ ವರದಿ ಸಂಗ್ರಹಿಸುತ್ತದೆ. ಒಟ್ಟಾರೆ ಸಂತೃಪ್ತಿಯ ಕೆಲವೊಂದು ಅಂಶಗಳು ಇಲ್ಲಿದೆ ನೋಡಿ


ಸರ್ವಿಸ್ ಗುಣಮಟ್ಟ - ಶೇ. 43
ಸರ್ವಿಸ್ ಶುರುಮಾಡುವುದು - ಶೇ. 11
ಸರ್ವಿಸ್ ಸಲಹೆ - ಶೇ. 14
ಸರ್ವೀಸ್ ಸೌಲಭ್ಯ - ಶೇ. 14
ವಾಹನ ಪಿಕಪ್ - ಶೇ. 17

ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟಾರೆ ಸರ್ವೀಸ್ ಸಂತೃಪ್ತಿಯಲ್ಲಿ 22 ಅಂಕಗಳ ಏರಿಕೆ ಕಂಡಿದೆ. 2013ರಲ್ಲಿ 834ರಷ್ಟಿದ್ದ ಒಟ್ಟಾರೆ ಸರ್ವಿಸ್ ಸಂತೃಪ್ತಿ 2014ರಲ್ಲಿ 856ಕ್ಕೆ ಏರಿಕೆಯಾಗಿದೆ.

ಬಹುತೇಕ ಕಾರು ಮಾಲಿಕರು ಕಾರು ಸರ್ವೀಸ್‌ಗೆ ವೇಳಾಪಟ್ಟಿ ನಿಗದಿಪಡಿಸುವುದರಿಂದ ಕಾಯುವಿಕೆ ಅವಧಿಯಲ್ಲಿ ಕಡಿತವುಂಟಾಗಿದೆ. ಅಧ್ಯಯನ ವರದಿ ಪ್ರಕಾರ 2014ರಲ್ಲಿ ಶೇಕಡಾ 74ರಷ್ಟು ಗ್ರಾಹಕರು ಭೇಟಿ ಸಮಯವನ್ನು ಮುಂಗಡವಾಗಿ ನಿಗದಿಪಡಿಸುತ್ತಿರುವುದು ಕಂಡುಬಂದಿದೆ. ಇದು 2014ರಲ್ಲಿ ಶೇ. 70ರಷ್ಟಿತ್ತು.

jd power

Ranking
ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಡೀಲರ್ ಸೇವೆಯಲ್ಲಿ ಗರಿಷ್ಠ ಗ್ರಾಹಕ ಸಂತೃಪ್ತಿಯನ್ನು ಹೊಂದಿದೆ. ಮಾರುತಿ ಸಂಸ್ಥೆಯು ಗರಿಷ್ಠ 1000ದಲ್ಲಿ 890 ಅಂಕ ಕಲೆ ಹಾಕಿದೆ. ಅದೇ ಹೊತ್ತಿಗೆ ಹೋಂಡಾ ಹಾಗೂ ಹ್ಯುಂಡೈ ಸಂಸ್ಥೆಗಳು 863 ಅಂಕಗಳೊಂದಿಗೆ ಎರಡನೇ ಸ್ಥಾನ ಹಂಚಿಕೊಂಡಿದೆ.

7416 ವಾಹನ ಮಾಲಿಕರ ಮೌಲ್ಯಮಾಪನ ಮಾಡಿದ ಬಳಿಕ 2014 ಇಂಡಿಯಾ ಕಸ್ಟಮರ್ ಸರ್ವಿಸ್ ಇಂಡೆಕ್ಸ್ ಅಧ್ಯಯನ ತಯಾರಿಸಲಾಗಿದೆ.

Most Read Articles

Kannada
English summary
Automotive dealers in India are sustaining their improvement on implementation of core after-sales processes, which is resulting in higher owner satisfaction with the vehicle service experience, according to the J.D. Power 2014 India Customer Service Index (CSI) StudySM — Mass Market released today.
Story first published: Friday, October 31, 2014, 18:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X