ಕನ್ನಡದಲ್ಲಿ ನಂಬರ್ ಪ್ಲೇಟ್; ಇದು ಭಾಷಾ ಪ್ರೇಮವೇ?

By Nagaraja

ನಗರದಲ್ಲಿಂದು ವಾಹನಗಳ ನಂಬರ್ ಪ್ಲೇಟ್‌ಗಳಲ್ಲಿ ಕನ್ನಡ ಅಂಕಿ ಬಳಸುವ ಪ್ರವೃತ್ತಿ ಹೆಚ್ಚಾಗಿ ಕಂಡುಬರುತ್ತಿದೆ. ಇದು ನಗರ ಟ್ರಾಫಿಕ್ ಪೊಲೀಸರಿಗೆ ತೀವ್ರ ತಲೆನೋವು ಸೃಷ್ಟಿಸುವಂತಾಗಿದೆ. ಕನ್ನಡ ಅಂಕಿಗಳ ನಂಬರ್ ಪ್ಲೇಟ್ ಬಳಕೆ ಮಾಡುವ ಇಂತಹ ವ್ಯಕ್ತಿಗಳು ತಮ್ಮ ಭಾಷಾ ಪ್ರೇಮವನ್ನು ಮೆರೆಯುತ್ತಿದ್ದಾರೆಯೇ ಅಥವಾ ಟ್ರಾಫಿಕ್ ಉಲ್ಲಂಘಣೆ ವೇಳೆ ಪೊಲೀಸರಿಂದ ಕಣ್ಮಪ್ಪಿಸಿಕೊಳ್ಳಲು ಇಂತಹ ಮಾರ್ಗ ಸ್ವೀಕರಿಸುತ್ತಿದ್ದಾರೆಯೇ ಎಂಬುದು ಇನ್ನೂ ನಿಗೂಢವಾಗಿದೆ.

ಹಿರಿಯ ಟ್ರಾಫಿಕ್ ಅಧಿಕಾರಿಯೊಬ್ಬರ ಪ್ರಕಾರ, ಕನ್ನಡ ಅಂಕಿಗಳನ್ನು ಹೊಂದಿರುವ ವಾಹನಗಳನ್ನು ಗುರುತಿಸುವುದು ಕಷ್ಟಕರ. ಪ್ರಮುಖವಾಗಿಯೂ ಸಿಗ್ನಲ್ ಜಂಪ್, ಸ್ಪೀಡಿಂಗ್ ಮತ್ತು ಅಪಘಾತ ಪ್ರಸಂಗ ವೇಳೆ ಇಂತಹ ತೊಂದರೆಗಳು ಎದುರಾಗುತ್ತಿದೆ ಎಂದಿದ್ದಾರೆ.

Kannada numberplates baffle traffic cops

2013ನೇ ಸಾಲಿನಲ್ಲಿ ನಿಯಮಬಾಹಿರ ನಂಬರ್ ಪ್ಲೇಟ್ ಲಗತ್ತಿಸಿರುವುದರಲ್ಲಿ 55,666 ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಇದರಲ್ಲಿ ಬಹುತೇಕ ಪ್ರಕರಣಗಳು ಕನ್ನಡ ಅಂಕಿಯಲ್ಲಿ ನಂಬರ್ ಪ್ಲೇಟ್ ಹಾಕಿರುವುದರಿಂದ ಸಿಕ್ಕಿ ಬಿದ್ದಿದ್ದವು.

1989 ಕೇಂದ್ರ ಮೋಟಾರು ವಾಹನ ನಿಯಾಮವಳಿಯ ಪ್ರಕಾರ ವಾಹನದ ನಂಬರ್ ಪ್ಲೇಟ್‌ನಲ್ಲಿ ಅಕ್ಷರಗಳು ಇಂಗ್ಲಿಷ್‌ನಲ್ಲಿರಬೇಕು. ಹಾಗೆಯೇ ಅಂಕಿಗಳು ಇಂಡೋ-ಅರೇಬಿಕ್‌ ಭಾಷೆಯಲ್ಲಿರಬೇಕು. ಅಂದ ಹಾಗೆ ಕನ್ನಡದಲ್ಲಿ ನಂಬರ್ ಪ್ಲೇಟ್ ಹಾಕಿಸಿಕೊಳ್ಳುವವರು ಕಡ್ಡಾಯವಾಗಿಯೂ ಇಂಗ್ಲಿಂಷ್ ನಂಬರ್ ಪ್ಲೇಟ್ ಹೊಂದಿರಲೇಬೇಕು ಎಂದವರು ವಿವರಿಸಿದ್ದಾರೆ.

Most Read Articles

Kannada
Story first published: Monday, January 13, 2014, 11:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X