ಇತಿಹಾಸ ಪುಟ ಸೇರಲಿರುವ ಲಂಬೊರ್ಗಿನಿ ಹ್ಯುರಕೇನ್

By Nagaraja

ಲಂಬೊರ್ಗಿನಿ ಸೂಪರ್ ಕಾರುಗಳ ಪೈಕಿ ಅತಿ ಹೆಚ್ಚು ಯಶಸ್ಸನ್ನು ತಂದಿಕ್ಕಿರುವ ಗಲರ್ಡೊ ಉತ್ತರಾಧಿಕಾರಿ ಹ್ಯುರಕೇನ್ ಎಲ್ಲ ಹಂತದಲ್ಲಿಯೂ ತನ್ನ ಪೂರ್ವಿಕರನ್ನು ಹಿಂದಿಕ್ಕುವ ಸಾಮರ್ಥ್ಯ ಹೊಂದಿದೆ. ವಿ10, 5.2 ಲೀಟರ್ ಎಂಜಿನ್ ಹೊಂದಿರುವ ಹ್ಯುರಕೇನ್, ಏಳು ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್‌ಬಾಕ್ಸ್ ಸಹ ಪಡೆದುಕೊಂಡಿದೆ.

ಇದು ಗರಿಷ್ಠ 610 ಅಶ್ವಶಕ್ತಿ ಉತ್ಪಾದಿಸಲಿದೆ. ಹಾಗೆಯೇ ಕೇವಲ 3.2 ಸೆಕೆಂಡುಗಳಲ್ಲಿ ಗಂಟೆಗೆ 100 ಕೀ.ಮೀ. ವೆಗವರ್ಧಿಸುವ ಸಾಮರ್ಥ್ಯ ಹೊಂದಿರಲಿದೆ. ಇನ್ನು ಗಂಟೆಗೆ ಗರಿಷ್ಠ 325 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

Lamborghini Huracan
ಅಲ್ಯೂಮಿನಿಯಂ ಹಾಗೂ ಕಾರ್ಬನ್ ಫೈಬರ್ ಪರಿಕರಗಳನ್ನು ಬಳಕೆ ಮಾಡಿರುವುದರಿಂದ ಭಾರ ಕಡಿಮೆ ಮಾಡಲು ನೆರವಾಗಿದೆ. ಅಲ್ಲದೆ ಎಲ್‌ಇಡಿ ತಂತ್ರಗಾರಿಕೆಯನ್ನು ಪಡೆದುಕೊಂಡಿದೆ. ಇನ್ನು ಕಾರಿನೊಳಗೂ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಆಳವಡಿಸಲಾಗಿದೆ. ಈ ಮೂಲಕ ಇತಿಹಾಸ ಪುಟ ಸೇರಿಕೊಳ್ಳಲು ಸಜ್ಜಾಗಿದೆ ಎಂದು ಲಂಬೊರ್ಗಿನಿ ತಿಳಿಸಿದೆ.

ಪ್ರಸಕ್ತ ಸಾಗುತ್ತಿರುವ 2014 ಜಿನೆವಾ ಮೋಟಾರು ಶೋದಲ್ಲಿ ಹ್ಯುರಕೇನ್ ಎಲ್‌ಪಿ 610-4 ಲಗ್ಷುರಿ ಸೂಪರ್ ಕಾರು ಸಹ ಪ್ರದರ್ಶನಗೊಂಡಿದೆ. ಇದು ಎರಡು ಕೋಟಿ ರು.ಗಳಷ್ಟು ದುಬಾರಿಯೆನಿಸಲಿದೆ.

Most Read Articles

Kannada
English summary
Lamborghini state their latest offering Huracan, is a Legend in the making. The luxury supercar will be taking over the reins from Gallardo, as their most successful supercar.
Story first published: Tuesday, March 4, 2014, 12:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X