ಬೆಂಗಳೂರಿನಿಂದ ಮಂಗಳೂರಿಗೆ - ಮಹೀಂದ್ರ ಮಾನ್ಸೂನ್ ಚಾಲೆಂಜ್

By Nagaraja

ಬಹುನಿರೀಕ್ಷಿತ ಮಹೀಂದ್ರ ಅಡ್ವೆಂಚರ್ ಸಿಯಾಟ್ ಮಾನ್ಸೂನ್ ಚಾಲೆಂಜ್‌ಗೆ ಇಂದು ಚಾಲನೆ ದೊರಕಲಿದೆ. ಇಲ್ಲಿ ಪ್ರಮುಖವಾಗಿಯೂ ದೇಶದ್ಯಾಂತ ಭಾಗವಹಿಸುವ ಸ್ಪರ್ಧಿಗಳ ಸಮಯ, ವೇಗ ಮತ್ತು ದೂರ (ಟಿಎಸ್‌ಡಿ) ನೈಜ ಪರೀಕ್ಷೆ ನಡೆಯಲಿದೆ.

ಒಟ್ಟು ಮೂರು ವಿಭಾಗಗಳಲ್ಲಾಗಿ ಸ್ಪರ್ಧೆ ನಡೆಯಲಿದೆ. ಇವುಗಳನ್ನು ವೃತ್ತಿಪರ, ಅಮೇಚ್ಯುರ್ ಮತ್ತು ಮಹಿಳೆಯರ ವಿಭಾಗಳಾಗಿ ವಿಂಗಡಿಸಲಾಗಿದೆ. ಒಟ್ಟು 25 ತಂಡಗಳು ಭಾಗವಹಿಸುವ rally ಮಂಗಳೂರಿನಲ್ಲಿ ಜುಲೈ 19ರಂದು ಕೊನೆಗೊಳ್ಳಲಿದೆ.

Mahindra Adventure Ceat Monsoon Challenge

ಈ ಬಗ್ಗೆ ಹೇಳಿಕೆ ಕೊಟ್ಟಿರುವ ಮಹೀಂದ್ರ ಆಂಡ್ ಮಹೀಂದ್ರ ಲಿಮಿಟೆಡ್ ಸಂಸ್ಥೆಯ ಆಟೋಮೋಟಿವ್ ವಿಭಾಗದ ಮುಖ್ಯ ಮಾರ್ಕೆಟಿಂಗ್ ಅಧಿಕಾರಿಯಾಗಿರುವ ವಿವೇಕ್ ನಾಯರ್, ಇಂದೊಂದು ಗಂಭೀರ ರೇಸ್ ಅಲ್ಲ. ಬದಲಾಗಿ ಚಾಲಕರ ಆನಂದಕ್ಕೆ ಹೆಚ್ಚು ಆಸ್ಪದ ಕೊಡಲಾಗಿದೆ ಎಂದಿದ್ದಾರೆ.

ಇಂದು 6 ಗಂಟೆಗೆ ಆರಂಭವಾಗಲಿರುವ ರೇಸ್‌ಗೆ ಶಿಮೊಗ್ಗದಲ್ಲಿ ವಿರಾಮ ಸಿಗಲಿದೆ. ಬಳಿಕ ನಾಳೆ ಬೆಳಗ್ಗೆ ಮಂಗಳೂರಿನತ್ತ ಮುಂದುವರಿಯಲಿದೆ. ಅಲ್ಲದೆ ನಿರ್ದಿಷ್ಟ ಕಡೆಗಳಲ್ಲಿ ವೇಗ ಮಿತಿಯನ್ನು ಸಹ ಏರ್ಪಡಿಸಲಾಗಿದೆ. ಒಟ್ಟಾರೆ 3.5 ಲಕ್ಷ ರು.ಗಳ ವಿಜೇತ ಬಹುಮಾನವನ್ನು ಸಹ ಹಂಚಲಾಗುವುದು.

Most Read Articles

Kannada
English summary
India's largest manufacturer and seller of Utility Vehicles Mahindra organises several motorsport events. They will kicking off its fourth edition of Mahindra Adventure Monsoon Challenge in 2014. They will be collaborating with Ceat tyres this year.
Story first published: Friday, July 18, 2014, 17:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X