ಬಜಾಜ್ ಪ್ರತಿಸ್ಪರ್ಧಿ ಮಹೀಂದ್ರ ಕ್ವಾಡ್ರಾಸೈಕಲ್ 2017ರಲ್ಲಿ ಎಂಟ್ರಿ

By Nagaraja

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಕೆಲವು ತಿಂಗಳುಗಳ ಹಿಂದೆಯಷ್ಟೇ 'ಕ್ವಾಡ್ರಾಸೈಕಲ್' ಎಂಬ ಹೊಸತಾದ ನಾಲ್ಕು ಚಕ್ರಗಳ ವಿಭಾಗದ ವಾಹನಗಳಿಗೆ ಕೇಂದ್ರ ಸರಕಾರವು ಹಸಿರು ನಿಶಾನೆ ತೋರಿತ್ತು.

ಪ್ರಸ್ತುತ ಈ ವಿಭಾಗದಲ್ಲಿ ಕಾಣಿಸಿಕೊಂಡಿರುವ ಏಕಮಾತ್ರ ವಾಹನವೆಂದರೆ ಬಜಾಜ್ ಆಟೋ 'ಆರ್‌ಇ 60'. ಈಗಾಗಲೇ ನಿರ್ಮಾಣ ಹಂತದಲ್ಲಿರುವ ಬಜಾಜ್ ಆರ್‌ಇ 60 ನಿಕಟ ಭವಿಷ್ಯದಲ್ಲೇ ದೇಶದ ನಗರವನ್ನು ತಲುಪಲಿದ್ದು, ಸಾಂಪ್ರದಾಯಕ ಆಟೋ ರಿಕ್ಷಾಗಳಿಗೆ ಬದಲಿ ವ್ಯವಸ್ಥೆ ಆಗಲಿದೆ ಎಂದೇ ನಿರೀಕ್ಷಿಸಲಾಗಿದೆ.


ಹಾಗಿರುವಾಗ ದೇಶದ ಅತಿ ದೊಡ್ಡ ಉಪಯುಕ್ತ ಹಾಗೂ ಎಸ್‌ಯುವಿ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ಕ್ವಾಡ್ರಾಸೈಕಲ್ ವಿಭಾಗದಲ್ಲಿ ಹೊಸತೊಂದು ವಾಹನವನ್ನು ಅಭಿವೃದ್ಧಿಪಡಿಸುತ್ತಿದೆ.

ವರದಿಗಳ ಪ್ರಕಾರ ಬಜಾಜ್ ಆರ್‌ಇ 60 ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಳ್ಳಲಿರುವ ಮಹೀಂದ್ರದ ಹೊಸ ವಾಹನ ಅಭಿವೃದ್ಧಿಗೆ ಎರಡು ವರ್ಷಗಳ ಕಾಲವಕಾಶ ಬೇಕಾಗಿದ್ದು, 2017ರಲ್ಲಿ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ.

bajaj re60

ಈ ಬಹುನಿರೀಕ್ಷಿತ ಯೋಜನೆಗಾಗಿ ಮಹೀಂದ್ರ ಸಂಸ್ಥೆಯು ಬರೋಬ್ಬರಿ 100ರಿಂದ 150 ಕೋಟಿ ರು.ಗಳನ್ನು ಹೂಡಿಕೆ ಮಾಡಲಿದೆ. ಪ್ರಸ್ತುತ ಯೋಜನೆ 'ಸಿ101' ಎಂಬ ಕೋಡ್ ಹೆಸರನ್ನು ಪಡೆದುಕೊಂಡಿದ್ದು, ಎಲ್ಲ ಹೊಸತಾದ ತಳಹದಿಯಲ್ಲಿ ನಿರ್ಮಾಣವಾಗಲಿದೆ.

ಮಹೀಂದ್ರದ ಜಾಹೀರಾಬಾದ್ ಘಟಕದಲ್ಲಿ ಹೊಸ ವಾಹನ ನಿರ್ಮಾಣವಾಗುವ ಸಾಧ್ಯತೆಯಿದೆ. ಈ ಮೂಲಕ ಸಂಸ್ಥೆಯು ಮೂರರಿಂದ ಐದು ವರ್ಷಗಳಲ್ಲಿ 15,000ದಿಂದ 60,000 ಯುನಿಟ್‌ಗಳ ಹೆಚ್ಚುವರಿ ಮಾರಾಟವನ್ನು ಗುರಿಯಿರಿಸಿಕೊಂಡಿದೆ.

ಮಹೀಂದ್ರ ನಿಕಟವರ್ತಿ ನೀಡಿರುವ ಮಾಹಿತಿ ಪ್ರಕಾರ ಈ ಸಂಬಂಧ ಯುರೋಪ್‌ನಿಂದ ವಾಹನವೊಂದನ್ನು ತರಲಾಗಿದ್ದು, ಇದರ ತಲಹದಿಯಲ್ಲಿ ಆರಂಭಿಕ ಕೆಲಸವನ್ನು ಪ್ರಾರಂಭಿಸಲಾಗಿದೆ. ಇದು 200ರಿಂದ 300 ಸಿಸಿ ಎಂಜಿನ್ ಪಡೆದುಕೊಳ್ಳಲಿದ್ದು, ಸಿಂಗಲ್ ಹಾಗೂ ಟ್ವಿನ್ ಸಿಲಿಂಡರ್ ಆಯ್ಕೆಗಳನ್ನು ಹೊಂದಿರುವ ಸಾಧ್ಯತೆಯಿದೆ.

ಮ್ಯಾಕ್ಸಿಮೊ ವ್ಯಾನ್‌ಗಳಂತಹ ವಾಹನಗಳ ಮೂಲಕ ಸಣ್ಣ ಜನರ ಸಾಗಣೆ ವಿಭಾಗದಲ್ಲಿ ಶೇಕಡಾ 12ರಿಂದ 15ರಷ್ಟು ಮಾರುಕಟ್ಟೆ ಶೇರನ್ನು ಹೊಂದಿರುವ ಮಹೀಂದ್ರ ತ್ರಿಚಕ್ರ ವಿಭಾಗದಲ್ಲಿ ಶೇಕಡಾ 8ರಿಂದ 10ರಷ್ಟು ಶೇರನ್ನು ಹೊಂದಿದೆ.

Most Read Articles

Kannada
English summary
Mahindra & Mahindra developing new quadricycle vehicle likely to hit the road by 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X