ಚೊಚ್ಚಲ ಫಾರ್ಮುಲಾ ಇ ಚಾಂಪಿಯನ್‌ಶಿಪ್‌; ಖಾತೆ ತೆರೆದ ಮಹೀಂದ್ರ

By Nagaraja

ಚೊಚ್ಚಲ ಫಾರ್ಮುಲಾ ಎಲೆಕ್ಟ್ರಿಕ್ ಚಾಂಪಿಯನ್‌ಶಿಪ್ ನೆರೆಯ ಚೀನಾದಲ್ಲಿ ಯಶಸ್ವಿಯಾಗಿ ನೆರವೇರಿದೆ. ಈ ಮೂಲಕ ಭಾರತವನ್ನು ಪ್ರತಿನಿಧಿಸಿರುವ ಏಕ ಮಾತ್ರ ತಂಡವಾಗಿರುವ ಮಹೀಂದ್ರ ರೇಸಿಂಗ್ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ.

2014 ಸೆಪ್ಟೆಂಬರ್ 13 ಶನಿವಾರದಂದು ಮೋಟಾರು ಕ್ರೀಡೆ ಇತಿಹಾಸದಲ್ಲೇ ಹೊಸ ಅಧ್ಯಾಯ ರಚನೆಯಾಗಿತ್ತು. ಯಾಕೆಂದರೆ ಚೀನಾದ ಬೀಜಿಂಗ್‌ನಲ್ಲಿ ಇದೇ ಮೊದಲ ಬಾರಿಗೆ ಫಾರ್ಮುಲಾ ಇ ರೇಸ್ ಟೂರ್ನಮೆಂಟ್ ಆಯೋಜನೆಯಾಗಿತ್ತು.


ಭಾರತವನ್ನು ಪ್ರತಿನಿಧಿಸಿದ್ದ ಮಹೀಂದ್ರ ರೇಸಿಂಗ್ ತಂಡವನ್ನು ಹೆಸರಾಂತ ಚಾಲಕ ಕರುಣ್ ಚಂದೋಕ್ ಮತ್ತು ಬ್ರೆಜಿಲ್‌ನ ಬ್ರುನೊ ಸೆನ್ನ ಮುನ್ನಡೆಸಿದ್ದರು. ಈ ಪೈಕಿ ಬ್ರುನೊ ಲಯ ಕಂಡುಕೊಳ್ಳುವಲ್ಲಿ ವಿಫಲವಾಗಿದ್ದರೆ ಚಂದೋಕ್ ಖಾತೆ ತೆರೆಯುವಲ್ಲಿ ನೆರವಾಗಿದ್ದರು.

ಆರಂಭದಲ್ಲಿ ಉತ್ತಮ ಆವೇಗ ಕಂಡುಕೊಂಡಿದ್ದ ಚಂದೋಕ್ ಬ್ಯಾಟರಿ ಅತಿಯಾಗಿ ಬಿಗಿಯಾಗಿದ್ದರಿಂದ ಅಂತಿಮ ಲ್ಯಾಪ್‌ನಲ್ಲಿ ಎರಡು ಸ್ಥಾನಗಳನ್ನು ಕಳೆದುಕೊಂಡರು. ಇದರಿಂದಾಗಿ ಐದನೇ ಸ್ಥಾನವನ್ನು ತೃಪ್ತಿಪಡಬೇಕಾಯಿತು.

formula e championship

ಒಟ್ಟಾರೆಯಾಗಿ ಉದ್ಘಾಟನಾ ಫಾರ್ಮುಲಾ ಇ ರೇಸ್ ಚಾಂಪಿಯನ್‌ಶಿಪ್ ಲುಕಾಸ್ ಡಿ ಗ್ರಾಸ್ಸಿ ಗೆದ್ದುಕೊಂಡಿದ್ದು, ಫ್ರಾಂಕ್ ಮೊಂಟಾಗ್ನಿ ಮತ್ತು ಸ್ಯಾಮ್ ಬರ್ಡ್ ಅನುಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಹಂಚಿಕೊಂಡರು. ಫಾರ್ಮುಲಾ ಇ ಚಾಂಪಿಯನ್‌ಶಿಪ್‌ನ ಎರಡನೇ ಹಂತದ ರೇಸ್ ಕೂಟ 2014 ನವೆಂಬರ್ 22ರಂದು ಮಲೇಷ್ಯಾದಲ್ಲಿ ನಡೆಯಲಿದೆ.
Most Read Articles

Kannada
English summary
Saturday 13th September, 2014 marked a new era in Motorsports as the first Formula E race commenced. The first round was held in Beijing, China on a street track around the Olympic Park. India's Mahindra team is participating in the apex electric race known as Formula E.
Story first published: Monday, September 15, 2014, 12:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X