ಭಾರತದಲ್ಲಿ ಆಸ್ಟ್ರೇಲಿಯಾ ವಿಮಾನ ಮಾರಾಟ ಮಾಡಲಿರುವ ಮಹೀಂದ್ರ

By Nagaraja

ಅಂತೂ ಕೊನೆಗೂ ನಾಗರಿಕ ವಿಮಾನಯಾನ ಸಚಿವಾಲಯದಿಂದ ಹಸಿರು ನಿಶಾನೆ ಪಡೆದುಕೊಳ್ಳಲು ಮಹೀಂದ್ರ ಸಂಸ್ಥೆ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ಆಸ್ಟ್ರೇಲಿಯಾ ಮೂಲದ ವಿಮಾನಗಳನ್ನು ಭಾರತದಲ್ಲಿ ಮಾರಾಟ ಮಾಡಲಿದೆ.

ಈ ಬಗ್ಗೆ ಹೇಳಿಕೆ ಕೊಟ್ಟಿರುವ ಮಹೀಂದ್ರ ಸಂಸ್ಥೆಯ ವ್ಯವಸ್ಥಾಪಕರಾಗಿರುವ ಆನಂದ್ ಮಹೀಂದ್ರ, "ಪ್ರಮಾಣೀಕರಣಕ್ಕೆ ಸಂಬಂಧಪಟ್ಟಂತೆ ಕೆಲವು ರೂಢಿಗಳನ್ನು ತೇರ್ಗಡೆ ಹೊಂದಲಾಗಿದ್ದು, ಕೊನೆಗೂ ಆಸ್ಟ್ರೇಲಿಯಾ ಮೂಲದ ವಿಮಾನಗಳನ್ನು ಭಾರತದಲ್ಲಿ ಮಾರಾಟ ಮಾಡಲಿದ್ದೇವೆ" ಎಂದಿದ್ದಾರೆ.

Mahindra

ಏರೋಸ್ಪೇಸ್ ವಿಭಾಗದಲ್ಲಿ ಹೆಚ್ಚಿನ ಆಸಕ್ತಿ ತೋರಿದ್ದ ಮಹೀಂದ್ರ 2009ರಲ್ಲೇ 175 ಕೋಟಿ ಮೊತ್ತಕ್ಕೆ ಏರೋಸ್ಪೇಸ್‌ನಿಂದ ಶೇಕಡಾ 75.1ರಷ್ಟು ಶೇರನ್ನು ವಶಪಡಿಸಿಕೊಂಡಿತ್ತು.

ತದಾ ಬಳಿಕ ವಿದೇಶಗಳಲ್ಲಿ ವಿಮಾನ ಮಾರಾಟ ಆರಂಭಿಸಿರುವ ಮಹೀಂದ್ರಕ್ಕೆ ಕೇಂದ್ರ ಸರಕಾರದ ಕೆಲವೊಂದು ನಿಯಮಾವಳಿಗಳನ್ನು ಪಾಲಿಸಬೇಕಾಗಿರುವುದರಿಂದ ತವರೂರು ಪ್ರವೇಶ ಕಠಿಣವೆನಿಸಿತ್ತು.

ಮಹೀಂದ್ರದ ಈ ಸಣ್ಣ ವಾಣಿಜ್ಯ ವಿಮಾನಗಳು ಮಹೀಂದ್ರ ಗಿಪ್ಸ್ ಪ್ಲೇನ್ ಎಂದು ಹೆಸರಿಸಿಕೊಂಡಿದ್ದು, ಐದರಿಂದ 10 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

Most Read Articles

Kannada
English summary
The Mahindra Group, a multi billion dollar company based in Mumbai, has finally got a thumbs up from the country's civil aviation ministry to sell aircrafts in India.
Story first published: Saturday, November 22, 2014, 12:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X