ಬೇಡಿಕೆ ಕುಸಿತ; ಮಹೀಂದ್ರ ವಾಹನಗಳ ನಿರ್ಮಾಣ ಸ್ಥಗಿತ

By Nagaraja

ಬೇಡಿಕೆ ಕುಸಿದಿರುವ ಹಿನ್ನಲೆಯಲ್ಲಿ ನಾಲ್ಕು ದಿನಗಳ ಕಾಲ ನಿರ್ಮಾಣವನ್ನು ಸ್ಥಗಿತಗೊಳಿಸಲು ದೇಶದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆ ನಿರ್ಧರಿಸಿದೆ.

ಪ್ರಸಕ್ತ ತಿಂಗಳಲ್ಲಿ ಚಕನ್ ಸೇರಿದಂತೆ ತನ್ನೆಲ್ಲ ಘಟಕಗಳ ಉತ್ಪಾದನೆಯನ್ನು ನಾಲ್ಕು ದಿನಗಳ ವರೆಗೆ ನಿಲುಗಡೆಗೊಳಿಸಲು ಮಹೀಂದ್ರ ನಿರ್ಧರಿಸಿದೆ. ಚಕನ್, ನಾಶಿಕ್, ಹರಿದ್ವಾರ ಘಟಕಗಳಲ್ಲಿ ವಾಹನಗಳ ಶೇಖರಣೆಯಿದ್ದು, ದೇಶೀಯ ಬೇಡಿಕೆಯನ್ನು ಪೂರೈಸಲು ಇದು ಸಾಕಾಗಲಿದೆ ಎಂದು ಸಂಸ್ಥೆ ತಿಳಿಸಿದೆ.

Mahindra

ಯುಟಿಲಿಟಿ ವಿಭಾಗದಲ್ಲಿ ಜುಲೈ ತಿಂಗಳಲ್ಲಿ 14,348 ಯುನಿಟ್ ಮಾರಾಟ ದಾಖಲಿಸಿಕೊಂಡಿದ್ದ ಮಹೀಂದ್ರ ಶೇಕಡಾ 9.91ರಷ್ಟು ಕುಸಿತ ದಾಖಲಿಸಿತ್ತು. ಈ ಅವಧಿಯಲ್ಲಿ ಮಹೀಂದ್ರವು 15,927 ಯುಟಿಲಿಟಿ ವಾಹನಗಳನ್ನು ನಿರ್ಮಿಸಿತ್ತು.

ಅಂತೆಯೇ ಮೊದಲ ತ್ರೈಮಾಸಿಕ ಅವಧಿಯಲ್ಲಿ (ಎಪ್ರಿಲ್-ಜುಲೈ) ಮಹೀಂದ್ರ ಯುಟಿಲಿಟಿ ವಾಹನವು ಶೇಕಡಾ 6.91ರಷ್ಟು ಕುಸಿತ ಕಂಡಿದೆ. ಈ ಅವಧಿಯಲ್ಲಿ 66,528 ಯುನಿಟ್‌ಗಳನ್ನಷ್ಟೇ ಮಾರಾಟ ಮಾಡುವಲ್ಲಿ ಯಶಸ್ವಿಯಾಗಿತ್ತು. ಇದರಂತೆ ಉತ್ಪನ್ನವು ಸಹ ಶೇಕಡಾ 7.09ರಷ್ಟು (71,212 ಯುನಿಟ್) ಇಳಿಕೆ ಕಂಡಿತ್ತು.

ಏತನ್ಮಧ್ಯೆ ದೇಶೀಯ ಮಾರುಕಟ್ಟೆಯು ಮೂರನೇ ಬಾರಿಗೆ ಜುಲೈ ತಿಂಗಳಲ್ಲಿ ಶೇಕಡಾ 5.04ರಷ್ಟು ವರ್ಧನೆ ದಾಖಲಿಸಿದೆ. ಭಾರತ ವಾಹನ ತಯಾರಕರ ಒಕ್ಕೂಟದ (ಸಿಯಾಮ್) ಪ್ರಕಾರ ಜುಲೈ ತಿಂಗಳಲ್ಲಿ 1,37,873 ಯುನಿಟ್‌ಗಳ ಮಾರಾಟ ದಾಖಲಾಗಿದೆ. ಕಳೆದ ವರ್ಷವಿದು (2013 ಜುಲೈ) 1,31,257 ಯುನಿಟ್‌ಗಳಾಗಿತ್ತು.

Most Read Articles

Kannada
English summary
Indian auto manufacturer Mahindra have planned to stop production for four days this month owing to low demand for their vehicles.
Story first published: Tuesday, August 19, 2014, 11:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X