ಚೊಚ್ಚಲ ಎಲೆಕ್ಟ್ರಿಕ್ ರೇಸಿಂಗ್‌ಗೆ ಮಹೀಂದ್ರ ರೆಡಿ

By Nagaraja

ವಿಶ್ವದ ಮೊದಲ ಎಲೆಕ್ಟ್ರಿಕ್ ರೇಸಿಂಗ್ ಕೂಟ ಇನ್ನೇನು ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಚೀನಾದ ಬೀಜಿಂಗ್‌ನಲ್ಲಿ ನಡೆಯಲಿರುವ ಈ ಇ ರೇಸಿಂಗ್ 2014 ಸೆಪ್ಟೆಂಬರ್ 13ರಂದು ಆಯೋಜನೆಯಾಗಲಿದೆ. ಇದರಂತೆ ದೇಶದ ಪ್ರಖ್ಯಾತ ಕಾರು ತಯಾರಕ ಸಂಸ್ಥೆಯಾಗಿರುವ ಮಹೀಂದ್ರದ ರೇಸಿಂಗ್ ವಿಭಾಗವು ಭಾಗವಹಿಸಲಿದೆ.[ಫಾರ್ಮುಲಾ ಇ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಲಿರುವ ಮಹೀಂದ್ರ - ಮುಂದಕ್ಕೆ ಓದಿ]

ಈ ಮೂಲಕ ಪ್ರಪ್ರಥಮ ಎಫ್‌ಐಎ ಫಾರ್ಮುಲಾ ಇ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುತ್ತಿರುವ ಭಾರತದ ಏಕಮಾತ್ರ ತಂಡವೆಂಬ ಹೆಗ್ಗಳಿಕೆಗೆ ಮಹೀಂದ್ರ ರೇಸಿಂಗ್ ಪಾತ್ರವಾಗಲಿದೆ. ಒಟ್ಟು ಎಂಟು ತಂಡಗಳು ಎಲೆಕ್ಟ್ರಿಕ್ ರೇಸಿಂಗ್‌ನಲ್ಲಿ ಭಾಗವಹಿಸಲಿದೆ.

FIA Formula E Championship

ಮಹೀಂದ್ರ ರೇಸಿಂಗ್ ಪರ ಭಾರತದವರೇ ಆದ ಚಾಲಕ ಕರುಣ್ ಚಂದೋಕ್ ಮತ್ತು ಬ್ರೆಜಿಲ್‌ನ ಬ್ರೂನೊ ಸೆನ್ನಾ ಸವಾಲನ್ನು ಸ್ವೀಕರಿಸಲಿದ್ದಾರೆ. ಮೊದಲ ಆವೃತ್ತಿಯಲ್ಲಿ ಬೀಂಜಿಂಗ್, ಲಂಡನ್, ಲಾಸ್ ಏಂಜಲೀಸ್ ಸೇರಿದಂತೆ ಒಟ್ಟು 10 ನಗರಗಳಲ್ಲಿ ನಡೆಯಲಿದೆ.

ಪರಿಸರ ಅವನತಿ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಎಲೆಕ್ಟ್ರಿಕ್ ವಾಹನಗಳ ಉದ್ಯಮವನ್ನು ಉತ್ತೇಜಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ರೇಸಿಂಗ್ ಇತಿಹಾಸದಲ್ಲಿ ವಿದ್ಯುತ್ ಚಾಲಿತ ಫಾರ್ಮುಲಾ ರೇಸ್ ಹೊಸ ಅಧ್ಯಾಯ ಬರೆಯಲಿದೆ.

<iframe width="600" height="450" src="//www.youtube.com/embed/Z4zu0I6M-tM?list=UU-DuRqsBQOEk_5o1q4Ze-Fg?rel=0&showinfo=0&autoplay=0" frameborder="0" allowfullscreen></iframe>

Most Read Articles

Kannada
English summary
Mahindra Racing all set to compete in inaugural FIA Formula E Championship- World’s first fully electric racing series, to debut in Beijing on September 13, 2014; providing impetus to EV ecosystem
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X