ಮಹೀಂದ್ರ ರೇವಾ ಇ2ಒ ಪ್ರೀಮಿಯಂ ವೆರಿಯಂಟ್ ಲಾಂಚ್

By Nagaraja

ದೇಶದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ತನ್ನ ಜನಪ್ರಿಯ ರೇವಾ ಇ2ಒ ವೆರಿಯಂಟ್‌ನ ಪ್ರೀಮಿಯಂ ಮಾದರಿಯನ್ನು ಪರಿಚಯಿಸಿದೆ. ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆ 5.72 ಲಕ್ಷ ರು.ಗಳಾಗಿರಲಿದೆ.

ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್‌ನೊಂದಿಗೆ ಆಗಮನವಾಗಿರುವ ರೇವಾ ಇ2ಒ ಪ್ರೀಮಿಯಂ ವೆರಿಯಂಟ್, 120 ಕೀ.ಮೀ. ವರೆಗೂ ತನ್ನ ವ್ಯಾಪ್ತಿ ಹೊಂದಿರಲಿದೆ. ಕಳೆದ ವರ್ಷದಲ್ಲೇ 1,000 ಯುನಿಟ್‌ಗಳ ಮಾರಾಟ ಗಿಟ್ಟಿಸಿಕೊಂಡಿದ್ದ ಮಹೀಂದ್ರ ರೇವಾ ಇ2ಒ ಆವೃತ್ತಿಗೆ ಸಿಕ್ಕಿರುವ ಅದ್ಭುತ ಪ್ರತಿಕ್ರಿಯೆಯ ಬಳಿಕ ಪ್ರೀಮಿಯಂ ಎಡಿಷನ್ ಬಿಡುಗಡೆ ಮಾಡಲಾಗಿದೆ.


ಮಾಹಿತಿ ಮನರಂಜನಾ ವ್ಯವಸ್ಥೆ, ಚಾಲಕ ಮಾಹಿತಿ ಪರದೆ, ರಿಯರ್ ಕ್ಯಾಮೆರಾ ಮತ್ತು ಪಾರ್ಕಿಂಗ್ ಅಸಿಸ್ಟ್ ಸೌಲಭ್ಯಗಳಿರಲಿದೆ. ಅಲ್ಲದೆ ದೂರದಿಂದಲೇ ಸ್ಮಾರ್ಟ್‌ಫೋನ್‌ನಿಂದ ಬ್ಯಾಟರಿ ಮಟ್ಟ, ಎಸಿ ವ್ಯವಸ್ಥೆ ಮತ್ತು ಹತ್ತಿರ ಚಾರ್ಜಿಂಗ್ ಸ್ಟೇಷನ್ ಬಗ್ಗೆ ಮಾಹಿತಿ ಗಿಟ್ಟಿಸಿಕೊಳ್ಳಬಹುದಾಗಿದೆ.

ದೆಹಲಿ, ಮುಂಬೈ, ಬೆಂಗಳೂರು ಮತ್ತು ಪುಣೆಗಳಂತಹ ಪ್ರಮುಖ ನಗರಗಳಲ್ಲಿ 300ರಷ್ಟು ಚಾರ್ಜಿಂಗ್ ಸ್ಟೇಷನ್ ಆಳವಡಿಸಿರುವ ಮಹೀಂದ್ರ ರೇವಾ ವರ್ಷಾಂತ್ಯದೊಳಗೆ ಇನ್ನಷ್ಟು 100 ಚಾರ್ಜಿಂಗ್ ಪಾಯಿಂಟ್ ಲಗತ್ತಿಸಲಿದೆ. ಇವೆಲ್ಲದರ ಜೊತೆಗೆ ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ವೆರಿಯಂಟ್‌ಗಳನ್ನು ಮಹೀಂದ್ರ ಅಭಿವೃದ್ಧಪಡಿಸುತ್ತಿದೆ. ಇದರಲ್ಲಿ ಮಹೀಂದ್ರ ವೆರಿಟೊ ಸೆಡಾನ್ ಮತ್ತು ಮ್ಯಾಕ್ಸಿಮೊ ವಾಣಿಜ್ಯ ವಾಹನ ಪ್ರಮುಖವಾಗಿದೆ.

Mahindra Reva e2p premium

ಮಾಲಿಕತ್ವ ಸರಳೀಕರಣ
ಇದೇ ಸಂದರ್ಭದಲ್ಲಿ 'ಗುಡ್‌ಬೈ ಫ್ಲೂಯಲ್, ಹಲೊ ಎಲೆಕ್ಟ್ರಿಕ್' ಎಂಬ ಸುಲಭ ಹಾಗೂ ಸರಳ ಮಾಲಿಕತ್ವ ಸರಳೀಕರಣ ಯೋಜನೆಯನ್ನು ಮಹೀಂದ್ರ ಆರಂಭಿಸಿರುತ್ತದೆ. ಹಾಗೆಯೇ ಹಿಂದಿನ ಮಾಸಿಕ 2,999 ರು.ಗಳ ಎನರ್ಜಿ ಶುಲ್ಕವನ್ನು ಅದೇ ಪ್ರಮಾಣದಲ್ಲಿ ಮುಂದುವರಿಸಲಾಗಿದೆ. ಈ ಮೂಲಕ ಗ್ರಾಹಕರು ಐದು ವರ್ಷಗಳಿಗೆ 50,000 ಕೀ.ಮೀ. ವ್ಯಾಪಿಯನ್ನು ಕ್ರಮಿಸಬಹುದಾಗಿದೆ.
Most Read Articles

Kannada
English summary
Mahindra Reva Electric Vehicles Pvt. Ltd., a part of the US$ 16.5 billion Mahindra Group, today announced the launch of a new Premium variant of the e2o with an extended range of 120 km and electric power steering.
Story first published: Friday, August 22, 2014, 9:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X