ಪ್ರಸಕ್ತ ಸಾಲಿನಲ್ಲೇ ಮಾರುತಿ ಸೆಲೆರಿಯೊ ಡೀಸೆಲ್ ಎಂಜಿನ್ ಎಂಟ್ರಿ

By Nagaraja

ಸುಜುಕಿ ತನ್ನದೇ ಆದ ಮೊತ್ತ ಮೊದಲ ಡೀಸೆಲ್ ಎಂಜಿನ್ ಅಭಿವೃದ್ಧಿಪಡಿಸುವುದರ ಬಗ್ಗೆ ನಾವು ಈಗಾಗಲೇ ವರದಿ ಮಾಡಿರುತ್ತೇವೆ. 800ಸಿಸಿ ಸಾಮರ್ಥ್ಯದ ಈ ಸಣ್ಣ ಡೀಸೆಲ್ ಎಂಜಿನ್ ಅನ್ನು ಮಾರುತಿ ಪ್ರಯಾಣಿಕ ಕಾರುಗಳ ಬದಲಾಗಿ ವಾಣಿಜ್ಯ ವಾಹನಗಳಲ್ಲಿ ಮೊದಲು ಪ್ರಯೋಗ ಮಾಡಲಿದೆ ಎಂಬುದರ ಬಗ್ಗೆಯೂ ಮಾಹಿತಿಯಿತ್ತು.

ಇದನ್ನು ಪುಷ್ಠಿಕರಿಸುವಂತೆಯೇ ಮಾರುತಿ 0.8 ಲೀಟರ್ ಡೀಸೆಲ್ ಎಂಜಿನ್, ಮಾರುತಿ ಹಗುರ ಭಾರದ ವಾಣಿಜ್ಯ ವಾಹನದಲ್ಲಿ ಆಳವಡಿಸುವುದು ಬಹುತೇಕ ಖಚಿತವಾಗಿದೆ. ವೈ9ಟಿ ಕೋಡ್ ಪಡೆದುಕೊಂಡಿರುವ ಇದು 2015 ಜನವರಿ ತಿಂಗಳಲ್ಲಿ ಲಾಂಚ್ ಆಗಲಿದೆ.


ಇದೇ ಸಂದರ್ಭದಲ್ಲೇ ಅಧಿಕಾರಿಗಳು, ಪ್ರಸಕ್ತ ಆರ್ಥಿಕ ಸಾಲಿನಲ್ಲೇ ಸೆಲೆರಿಯೊ ಡೀಸೆಲ್ ಎಂಜಿನ್ ವೆರಿಯಂಟ್ ಬಿಡುಗಡೆ ಮಾಡುವ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ.

ಇನ್ನೊಂದೆಡೆ ಸುಜುಕಿ 800 ಸಿಸಿ ಡೀಸೆಲ್ ಎಂಜಿನ್ 2016ರಲ್ಲಿ ಇಕೊ ಪ್ಯಾಸೆಂಜರ್ ಕ್ಯಾರಿಯರ್‌ನಲ್ಲೂ ಬಳಕೆಯಾಗಲಿದೆ. ಸದ್ಯ ಇಕೊ ಪೆಟ್ರೋಲ್ ಹಾಗೂ ಸಿಎನ್‌ಜಿ ವೆರಿಯಂಟ್‌ನಲ್ಲಿ ಮಾತ್ರ ಮಾರಾಟವಾಗುತ್ತಿದೆ. ಇದು ಟಾಟಾ ಏಸ್ ಮ್ಯಾಜಿಕ್ ಮತ್ತು ಮಹೀಂದ್ರ ಮ್ಯಾಕ್ಸಿಮೊ ಮಾದರಿಗಳಿಗೆ ಪೈಪೋಟಿ ಒಡ್ಡಲಿದೆ.

eeco
Most Read Articles

Kannada
English summary
More significantly, the official has also revealed that close on the heels of the LCV will be Celerio, launching with the same diesel engine.
Story first published: Friday, April 25, 2014, 10:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X